ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕು. ಅಂಕಿತಾ ಬಾಳೇರಿ, ಸನ್ನಿಧಿ ಹಬ್ಬು, ಜಯೇಶ್ ರಾವ್ ಇಂಟರ್ ನ್ಯಾಶನಲ್ ಸೈನ್ಸ್ ಓಲಂಪಿಯಾಡ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಅನುಕ್ರಮವಾಗಿ 21, 30, 32ನೇ ರ್ಯಾಂಕ್ ಗಳಿಸಿ, ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಇವರ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಡಾ. ಸುಲೋಚನಾ ಬಿ. ರಾವ್ ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.