ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ವಿಶ್ವ ಸಾರಸ್ವತ ಫೆಡರೇಶನ್ ಅಧ್ಯಕ್ಷ ಹಾಗೂ ಹಾಂಗ್ಯೊ ಐಸ್ಕ್ರೀಂ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ ಪೈ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು, 97 ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಇಂದು ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಕಲಿಯುವ ಆಸಕ್ತಿ ಇರುವ ಸರಿ ಸುಮಾರು 50 ಬಡ ಪ್ರತಿಭಾವಂತ ಮಕ್ಕಳಿಗೆ ಬಹುತೇಕ ಎಲ್ಲವೂ ಉಚಿತ ಮಾಡಿದ್ದೇವೆ. ದಿನಕರ ದೇಸಾಯಿಯವರ ಆದರ್ಶವನ್ನು ಮುಂದಿಟ್ಟು ಶಿಕ್ಷಣ ದಾನಿಗಳಿಂದಲೇ ನಡೆಸಿಕೊಂಡು ಹೋಗುತ್ತಿರುವ ಸಂಸ್ಥೆ ಇದಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಟಾಪ್ 10 ರ್ಯಾಂಕ್ನಲ್ಲಿ ಪ್ರತಿ ವರ್ಷ ನಮ್ಮ ಶಾಲೆಯ ಐದರಿಂದ ಆರು ವಿದ್ಯಾರ್ಥಿಗಳಾದರೂ ಇದ್ದೇ ಇರುತ್ತಾರೆ ಎಂಬುದು ನಮಗೆ ಹೆಮ್ಮೆ. ಈ ಸಂಸ್ಥೆ ಗೆ ಪ್ರದೀಪ…
Read MoreAuthor: KET KUMTA
ಕೊಂಕಣದ ಎಟಿಎಲ್ನಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಎಕ್ಸ್ಪೋ 2022
ಕುಮಟಾ: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್(ಎಟಿಎಲ್)ನ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ(ಎಕ್ಸ್ಪೋ 2022)ವನ್ನು ಏರ್ಪಡಿಸಲಾಗಿತ್ತು. ಜೆ.ಸಿ.ಕಾಲೇಜ್ ಅಂಕೋಲಾದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ವಿ.ಆರ್.ವೆರ್ಣೇಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಒತ್ತಡದ ಬದುಕು ಹಾಗೂ ಸ್ಮರಣಶಕ್ತಿಯ ಕುರಿತಾಗಿ ಮನೋಜ್ಞವಾಗಿ ವಿವರಿಸಿದರು. ಸ್ಮರಣಶಕ್ತಿ ವಂಶಪಾರಂಪರ್ಯವಲ್ಲ, ಅದು ನಮ್ಮ ಸ್ವಂತ ಶಕ್ತಿ. ಪಂಚೇಂದ್ರಿಯಗಳಿಗೆ ಸಂಸ್ಕಾರ ನೀಡಿ ಅದನ್ನು ವರ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಹತ್ತು-ಹಲವು ಉದಾಹರಣೆಗಳೊಂದಿಗೆ ವಿವರಿಸಿ, ಕಲಿಕೆಯಲ್ಲಿ ಕಠಿಣ ಪರಿಶ್ರಮ ಅಗತ್ಯ ಹಾಗೂ ಅನಿವಾರ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ಮಾತನಾಡಿದ ಇನ್ನೋರ್ವ ಅತಿಥಿಗಳಾದ ಮಂಗಳೂರು ಇನಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಆಂಡ್ ಎಂಜಿನಿಯರಿಂಗ್ ರಸಾಯನಶಾಸ್ತೃ ವಿಭಾಗದ ನಿಕಟಪೂರ್ವ ಹಿರಿಯ ಸಹಾಯಕ ಉಪನ್ಯಾಸಕರಾದ ಡಾ. ಅಪರ್ಣಾ ಪಿ.ಐ.ಭಟ್ಟ, ಪ್ರಶ್ನೆಗಳನ್ನು ಮಾಡುವುದರ ಮೂಲಕ…
Read Moreಕೊಂಕಣದಲ್ಲಿ ಗಣರಾಜ್ಯೋತ್ಸವ ಆಚರಣೆ
ಕುಮಟಾ: 73ನೆಯ ಗಣರಾಜ್ಯೋತ್ಸವದ ಅಂಗವಾಗಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಧ್ವಜಾರೋಹಣಗೈದು ಮಾತನಾಡುತ್ತ, ಪ್ರಜಾಪ್ರಭುತ್ವ ನಮ್ಮ ಪಾಲಿಗೆ ವರದಾನವಾದರೂ ಇಂದು ಅದರ ಪ್ರಜಾಪ್ರಭುತ್ವದ ಅಗತ್ಯವಿದೆಯೇ ಎಂದು ವಿಮರ್ಶಿಸುವ ಪರಿಸ್ಥಿತಿ ಉಂಟಾದದ್ದು ವಿಪರ್ಯಾಸವೇ ಸರಿ. ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ರವರ ಅಧ್ಯಕ್ಷತೆಯಲ್ಲಿ ರೂಪಿತವಾದ ಈ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ಓದಿ, ಅರ್ಥೈಸಿಕೊಂಡು, ಅದರ ಆಶಯಗಳನ್ನು ಅಳವಡಿಸಿಕೊಂಡು ಬದುಕಬೇಕಾದ ಅಗತ್ಯತೆ ಇದೆ ಎಂದರು. ಸಂವಿಧಾನವನ್ನು ಗೌರವಿಸುವ, ದೇಶದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಭಾರತವನ್ನು ವಿಶ್ವಗುರುವಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು. ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ, ಟ್ರಸ್ಟಿಗಳಾದ ಅನಂತ ಶಾನಭಾಗ, ವಿಶ್ರಾಂತ ಮುಖ್ಯಾಧ್ಯಾಪಕರಾದ ಎಂ.ಎಂ.ಹೆಗಡೆ, ವಿಧಾತ್ರಿಯ ಗುರುರಾಜ ಶೆಟ್ಟಿ, ಅಂಗಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಈ…
Read Moreಸಿವಿಎಸ್ಕೆ ಭೂಮಿಕಾ ರಾಜ್ಯಕ್ಕೆ ಪ್ರಥಮ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ ಒಂಭತ್ತನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಸತೀಶ ಭಟ್ಟ ಇವಳು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಇವರು ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಉತ್ತಮ ಭಾಷಣಕಾರಳು, ಸಂಗೀತ ಕಲಾವಿದಳು, ಚಿತ್ರ ಕಲಾವಿದಳೂ ಆದ ಈಕೆಯ ಈ ಅಪರೂಪದ ಪ್ರತಿಭೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ. ಸಂಸ್ಕøತ ಶಿಕ್ಷಕರಾದ ಗೀತಾ ಮೂಳೆ ಹಾಗೂ ಸುರೇಶ ಹೆಗಡೆ ಮಾರ್ಗದರ್ಶನ ಮಾಡಿದ್ದರು.
Read Moreಸಿವಿಎಸ್ಕೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿರಸಿಯಲ್ಲಿ ಇತ್ತೀಚೆಗೆ ಜಿಲ್ಲಾಮಟ್ಟದ ಭಗವದ್ಗೀತಾ ಅಭಿಯಾನದ ಪ್ರಯುಕ್ತ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಭೂಮಿಕಾ ಎಸ್. ಭಟ್ಟ ಪ್ರಥಮ ಸ್ಥಾನ, ಕುಮಾರ ಚಂದನ ಹೆಗಡೆ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ಭಗವದ್ಗೀತಾ ಕಂಠಪಾಠದಲ್ಲಿ ಕುಮಾರ ಶ್ರೀನಿವಾಸ ವಿ. ಶಾನಭಾಗ ತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ. ಪ್ರಾಥಮಿಕ ವಿಭಾಗದಿಂದ ಕುಮಾರಿ ಸ್ನೇಹಾ ಉದಯ ನಾಯಕ ಭಾಷಣದಲ್ಲಿ ತೃತೀಯ ಸ್ಥಾನ ಪಡೆದರೆ, ಕುಮಾರಿ ಅನನ್ಯ ಎಸ್. ಭಟ್ಟ ಕಂಠಪಾಠದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
Read Moreಕೊಂಕಣದಲ್ಲಿ ಜಿಲ್ಲಾಮಟ್ಟದ ಕಾರ್ಯಾಗಾರ
ಕುಮಟಾ 22-11-2021: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ವಿಶ್ಲೇಷಣೆ ಮತ್ತು ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಏರ್ಪಡಿಸಲಾಗಿತ್ತು. ಶ್ರೀ ಎಸ್.ಆರ್.ಮನಹಳ್ಳಿ ವಿಶ್ರಾಂತ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ ಅವರು ಕಾರ್ಯಗಾರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಾಷ್ಟೀಯ ಶಿಕ್ಷಣ ನೀತಿ ಇದರ ಅನುಷ್ಠಾನದ ಕುರಿತು ನಿಖರ ಮಾಹಿತಿಗಳನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಭಾರತದಲ್ಲಿ ಮಕ್ಕಳೇ ದೇಶದ ಆಸ್ತಿ ಎಂದು ತಿಳಿದಿರುವಾಗ ಈ ಶಿಕ್ಷಣ ಭಾರತದಲ್ಲಿ ಮುಂದೊಂದು ದಿನ ಹೊಸ ಕ್ರಾಂತಿಯನ್ನುಂಟುಮಾಡಿ ಭಾರತ ವಿಶ್ವಗುರು ಆಗಲು ಸಾಧ್ಯ, ಸ್ವಾವಲಂಬಿತ ಭಾರತ ಆಗಲು ಸಾಧ್ಯ ಎಂದು ಹಲವು ಉದಾಹರಣೆಗಳ ಮೂಲಕ ವಿಶ್ಲೇಷಿದರು. ವಿದ್ಯಾರ್ಥಿಗಳು ಯಾವ ಒತ್ತಡಕ್ಕೆ ಒಳಗಾಗದೇ ನಲಿಕಲಿವ ಹಾಗೂ ಸೃಜನಶೀಲ ವ್ಯಕ್ತಿತ್ವ ನಿರ್ಮಾಣದ ಗುಣಮಟ್ಟದ ಶಿಕ್ಷಣ ಇದಾಗಿದೆ ಎಂದರು. ರಾಷ್ಟ್ರೀಯ ಶಿಕ್ಷಣದ ಎಂಟು ಹಂತಗಳನ್ನು ವಿವರಿಸಿದರು. ಟ್ರಸ್ಟಿನ…
Read Moreಎಸ್.ಎಮ್.ಶಾನಭಾಗ ಹೆಗಡೆಕರ್ರಿಗೆ ನುಡಿನಮನ
ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಮ್ಮನ್ನಗಲಿದ ಶ್ರೀ ಎಸ್.ಎಮ್.ಶಾನಭಾಗ ಹೆಗಡೆಕರ್ರಿಗೆ ಕೊಂಕಣ ಸಮೂಹ ಸಂಸ್ಥೆಗಳಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಮಾತನಾಡಿ ದಿ.ಎಸ್.ಎಮ್.ಶಾನಭಾಗರು ಉದಾರಿಗಳು, ತ್ಯಾಗಿಗಳು ಆಗಿದ್ದು ದೂರದ ಮುಂಬೈನಲ್ಲಿ ಉದ್ಯಮ ಹೊಂದಿದ್ದರೂ ಮಾತೃಭೂಮಿಯ ಮೇಲಿನ ಪ್ರೀತಿ ಕಳಕಳಿಯಿಂದ ಕುಮಟಾದ ಹಲವು ಸಂಘ ಸಂಸ್ಥೆಗಳಿಗೆ ಉದಾರ ಮನಸ್ಸಿನಿಂದ ದಾನ ಧರ್ಮ ಮಾಡಿದವರು. ಅವರ ಸಮಯಪ್ರಜ್ಞೆ ಮತ್ತು ಮಾನವತೆಯ ಕಳಕಳಿ ನಮಗೆ ಆದರ್ಶಪ್ರಾಯವಾದದ್ದು ಎಂದು, ಅವರ ಅಗಲುವಿಕೆ ನಮಗೆಲ್ಲಾ ತುಂಬಾ ನೋವು ತಂದಿದೆ. ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ನೋವು ಸಹಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿ ಪುಷ್ಪನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, ದಿವಂಗತರಿಗೆ ಸದ್ಗತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಶಿಕ್ಷಕ ಶಿವಾನಂದ ಭಟ್ಟ ಮಾತನಾಡಿ ದಿವಂಗತರು ಕೊಂಕಣದ…
Read Moreಕೊಂಕಣದ ಸಿ.ವಿ.ಎಸ್.ಕೆ ರಾಜ್ಯಕ್ಕೆ ದ್ವಿತೀಯ
ಕುಮಟಾ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನದ ಜೊತೆಗೆ ಟಾಪ್ 10ರಲ್ಲಿ ಒಂಭತ್ತು ಸ್ಥಾನ ಪಡೆಯುವುದರೊಂದಿಗೆ ಅತ್ಯುತ್ತಮ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸತತವಾಗಿ ರಾಜ್ಯಮಟ್ಟದ ರ್ಯಾಂಕ್ಗಳನ್ನು ಗಳಿಸಿ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆಯುತ್ತ ಬಂದಿದ್ದ ಸಿವಿಎಸ್ಕೆ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶ ಈ ಬಾರಿಯೂ ಶೇ.100 ರಷ್ಟಾಗಿದ್ದು, ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್ಗಳಲ್ಲಿ ಒಟ್ಟಾರೆ 9 ರ್ಯಾಂಕ್ಗಳನ್ನು ತನ್ನದಾಗಿಸಿಕೊಂಡಿದ್ದಲ್ಲದೆ, ರಾಜ್ಯ ಮಟ್ಟದ ದ್ವಿತೀಯ ಸ್ಥಾನವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕುಮಾರ ಸಾಯಿಕಿರಣ ಶೇಟ್ ಹಾಗೂ ಕುಮಾರಿ ಪೂರ್ವಾ ನಾಯ್ಕ ತಲಾ 625…
Read Moreಕೊಂಕಣದಲ್ಲಿ ಸಂಭ್ರಮದ 75ರ ಸ್ವಾತಂತ್ರ್ಯೋತ್ಸವ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಅಂಗಸಂಸ್ಥೆಗಳಿಂದ 75ರ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಟ್ರಸ್ಟ್ನ ಅಧ್ಯಕ್ಷರಾದ ವಿಠ್ಠಲ ನಾಯಕ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿಧರ ಪ್ರಭು ಮಾತನಾಡಿ, ನನಗಿಂತ ದೇಶ ಮುಖ್ಯ ಅನ್ನುವುದು ಪ್ರತಿಯೊಬ್ಬರ ನಿಲುವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು, ಹಾಕಿ ಮಾಂತ್ರಿಕ ಧ್ಯಾನಚಂದ ಅವರ ದೇಶಭಕ್ತಿಯ ಉಕ್ತಿಯನ್ನು ಮನೋಜ್ಞವಾಗಿ ಸ್ಪಷ್ಟಪಡಿಸಿದರು. 75ರ ಸಂಭ್ರಮದ ನೆನಪಿಗೆ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅನಾವರಣಗೊಳಿಸಿ ಭಾರತಮಾತೆಯ ನಕಾಶೆಯ ಸುತ್ತ 75 ಹಣತೆಯನ್ನು ಬೆಳಗಿಸಿದ್ದು ಕಾರ್ಯಕ್ರಮಕ್ಕೆ ಮೆರಗನ್ನು ತಂದಿತ್ತು. ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ವೀಕ್ಷಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದವರಿಗೆ ಬಹುಮಾನಗಳನ್ನು ಘೋಷಿಸಲಾಯಿತು. ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು, ರಾಮನಾಥ ಕಿಣಿ, ನಿವೃತ್ತ ಪ್ರಾಚಾರ್ಯ ಎಂ.ಎಂ.ಹೆಗಡೆ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಗುರುರಾಜ ಶೆಟ್ಟಿ, ಪ್ರಾಚಾರ್ಯ ಮಹೇಶ…
Read Moreಸಿವಿಎಸ್ಕೆ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೂರ್ತಿ ಸರ್ ಅವರಿಂದ ಕಾರ್ಯಾಗಾರ
ಕುಮಟಾ ಎಪ್ರಿಲ್ 3: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್ಕೆ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಾರವಾರದ ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ವೆಂಕಟೇಶ ಮೂರ್ತಿ ಅವರಿಂದ “ಎಸ್ಎಸ್ಎಲ್ಸಿ ಪರೀಕ್ಷೆ ಯುದ್ಧವಲ್ಲ ಆಟ” ಎಂಬ ವಿಷಯದ ಬಗ್ಗೆ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು ಹೇಗೆ? ಓದಿದ ವಿಷಯವನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಏನು ಮಾಡಬೇಕು? ಮುಂತಾದ ಕೌಶಲದ ಕುರಿತು ವಿದ್ಯಾರ್ಥಿಗಳು ಸಂವಾದದ ಮೂಲಕ ಅರಿತುಕೊಳ್ಳಲು ಈ ಕಾರ್ಯಾಗಾರ ಅನುಕೂಲ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು, ಸಮಾಜ ಸೇವಿ ಅಜಯ ಸಾಹುಕಾರ, ಆರ್.ಎಚ್.ದೇಶಭಂಡಾರಿ, ಮುಖ್ಯ ಶಿಕ್ಷಕಿ ಸುಮಾ ಪ್ರಭು ಹಾಗೂ ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು.
Read More