ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿ ವಿಜ್ಞಾನಿಗಳಿಂದ ವಿಜ್ಞಾನ ದಿನ ಆಚರಣೆ

Share happily:

ಕುಮಟಾ: 1928 ರ ಫೆಬ್ರವರಿ 28 ರಂದು ಮಹಾನ್ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ವಿಶ್ವ ಪ್ರಸಿದ್ಧವಾದ “ರಾಮನ್ ಎಫೆಕ್ಟ”ನ್ನು ಜಗತ್ತಿಗೆ ಬಹಿರಂಗ ಪಡಿಸಿದರು. ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿಗಳೇ ವಿಜ್ಞಾನಿಗಳ ವೇಷ ಧರಿಸಿ ಆಯಾ ವಿಜ್ಞಾನಿಗಳ ಸಂಶೋಧನೆ ಆವಿಷ್ಕಾರಗಳ ಕುರಿತಾಗಿ ಬೆಳಕು ಚೆಲ್ಲುವ ಮೂಲಕ ಅರ್ಥಪೂರ್ಣವಾಗಿ ವಿಜ್ಞಾನ ದಿನವನ್ನು ಆಚರಿಸಿದರು. ಆಕಾಶ ನಾಯಕ ಸರ್.ಸಿ.ವಿ.ರಾಮನ್ ಪಾತ್ರದಲ್ಲಿ ಬಂದು ರಾಮನ್ ಎಫೆಕ್ಟ ಬಗ್ಗೆ ವಿವರಿಸಿ ಎಲ್ಲರನ್ನು ಮೆಚ್ಚಿಸಿದರೆ, ಚಂದನ ಹೆಗಡೆ ಜಗದೀಶ ಚಂದ್ರ ಬೋಸ್ ಆಗಿ, ವಿರಾಜ್ ಎಂ.ವಿಶ್ವೇಶ್ವರಯ್ಯರ ವೇಶ ತೊಟ್ಟು, ಸುದರ್ಶನ ಹೆಗಡೆ ವಿಕ್ರಂ ಸಾರಾಭಾಯಿಯ ರೂಪದಲ್ಲಿ ಹಾಗೂ ಮಯೂರ್ ನಾಯ್ಕ ಸಲೀಂ ಅಲಿಯಾಗಿ ಮಿಂಚಿ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಸಭೆಗೆ ಪರಿಚಯಿಸಿದರು. ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಉಷಾ ಭಟ್ಟ, ಮಹೇಶ್ವರಿ…

Share happily:
Read More

ಪುಲ್ವಾಮಾ ದಾಳಿಯ ಪ್ರತೀಕಾರದ ಅಂಗವಾಗಿ ಕೊಂಕಣದ ಸಿ.ವಿ.ಎಸ್.ಕೆ ಹೈಸ್ಕೂಲ್‌ನಲ್ಲಿ ವಿಜಯೋತ್ಸವ ಆಚರಣೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಹೈಸ್ಕೂಲ್‌ನಲ್ಲಿ ಇಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಉಗ್ರನೆಲೆಗಳನ್ನು ನಾಶಮಾಡಿ ಪುಲ್ವಾಮಾ ದಾಳಿಯ ವಿರುದ್ಧ ತೆಗೆದುಕೊಂಡ ಪ್ರತೀಕಾರ ಕ್ರಮವನ್ನು ಬೆಂಬಲಿಸಿ ವಿಜಯೋತ್ಸವವನ್ನು ಆಚರಿಸಲಾಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಘೋಷ ಮೊಳಗಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕ ಚಿದಾನಂದ ಭಂಡಾರಿ, ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಧ್ಯೇಯವಾಕ್ಯವೇ “ರಾಷ್ಟನಿರ್ಮಾಣ ಮಂದಿರವಿದು ಕೈ ಮುಗಿದು ಒಳಗೆ ಬಾ” ಎಂಬುದಾಗಿದ್ದು ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಣಕಣದಲ್ಲೂ ರಾಷ್ಟ್ರಭಕ್ತಿಯನ್ನು ಮೂಡಿಸುವುದೇ ನಮ್ಮ ಗುರಿ. ಭಾರತದ ವೀರ ಸೈನಿಕರ ಸಾಹಸವನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಉಗ್ರರಿಂದ ಸಾವನ್ನಪ್ಪಿದ ಯೋಧರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಗಳು. ನಾಳೆ ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದರೆ ಎಲ್ಲರೂ ದೇಶದ ಗೆಲುವಿಗೆ ತಮ್ಮ ಕೊಡುಗೆ ನೀಡಲು ಸಿದ್ಧರಿರಬೇಕೆಂದು ಕರೆನೀಡಿದರು. ವಿದ್ಯಾರ್ಥಿಗಳು ಜೈಜವಾನ್ ಜೈಕಿಸಾನ್,…

Share happily:
Read More