ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿ. 20-09-2018 ರಂದು ಕುಮಟಾದ ಡಯೆಟ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲೆಯ ವಿಜ್ಞಾನ ಶಿಕ್ಷರುಗಳಾದ ರವಿಶಂಕರ ಹಾಗೂ ಭಾಸ್ಕರ ಹೆಗಡೆ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರಮೋದ ಎಲ್. ಹಾಗೂ ಸೂರ್ಯಕಿರಣ ಎನ್. ಇವರು ಸಾರಿಗೆ ಮತ್ತು ಸಂಪರ್ಕ ವಿಜ್ಞಾನ ವಿಷಯದಡಿ ತಯಾರಿಸಿದ ಅದ್ಭುತ ಮಾದರಿ ಎಲ್ಲರ ಮನಸೂರೆಗೊಂಡಿತಲ್ಲದೆ, ನಿರ್ಣಾಯಕರ ಪ್ರಶಂಸೆಗೂ ಪಾತ್ರವಾಯಿತು. ಶೈಕ್ಷಣಿಕ ವಿಚಾರದ ದೂರದೃಷ್ಟಿತ್ವದಲ್ಲಿ ಸದಾ ಮುಂಚೂಣಿಯಲ್ಲಿರುವ ಕೊಂಕಣದ ಸಿ.ವಿ.ಎಸ್.ಕೆ ಗೆ ಮತ್ತೊಂದು ಹೆಮ್ಮೆಯ ಸಾಧನೆಯ ಗರಿ ಇದಾಗಿದ್ದು, ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
Read More