ಕೊಂಕಣದಲ್ಲಿ ಶಾಲಾ ಸಂಸತ್ ಉದ್ಘಾಟನೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‍ಕೆ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಂಕೋಲಾದ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಆದ ಪ್ರಶಾಂತ ನಾಯಕ ಅಂಕೋಲಾ ಇವರು, ವಿದ್ಯಾರ್ಥಿ ದಿಸೆಯಲ್ಲೇ ಮುಂದಾಳತ್ವದ ಗುಣ ಬೆಳೆಸಿಕೊಳ್ಳಬೇಕು. ದೇಶಸ ಚುಕ್ಕಾಣಿ ಹಿಡಿವ ಪ್ರಾಮಾಣಿಕ ಹಾಗೂ ದಕ್ಷ ನೇತಾರರಾಗಬೇಕು. ಪ್ರಜಾಪ್ರಭುತ್ವದ ಅರಿವನ್ನು ಮೂಡಿಸುವ ಸಲುವಾಗಿ ಈ ಶಾಲಾ ಸಂಸತ್ ಉದ್ಘಾಟನೆಗೊಂಡಿದೆ ಎಂದರು. ತನ್ನ ಜೀವನದಲ್ಲಿ ನಾನೊಬ್ಬ ಹೇಗೆ ಮುಂದಾಳುವಾದೆ ಎಂದು ವಿವರಿಸಿ, ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೇತಾರರಾಗಿ ದೇಶ ಕಟ್ಟುವ, ದೇಶವನ್ನು ಪ್ರೀತಿಸುವ ವಿದ್ಯಾರ್ಥಿಗಳಾಗಿ ಎಂದು ಕರೆನೀಡಿ ಶುಭಾಷಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಬಿ.ಎಸ್.ಗೌಡರವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾಳಿನ ಬಾಳಿನಲ್ಲಿ ಜಗತ್ತಿಗೆ ಹೇಗೆ ಬೆಳಕಾಗಬೇಕೆಂದು ಉದಾಹರಣೆಗಳ…

Share happily:
Read More

ಸಿವಿಎಸ್‍ಕೆ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‍ಕೆ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೂರ್ಯ ನಮಸ್ಕಾರದ ಜೊತೆಗೆ ಇಪ್ಪತ್ತೊಂದು ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳು ಯೋಗ ದಿನಾಚರಣೆಯನ್ನು ಆಚರಿಸಿದರು. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಯೋಗ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತರಬೇತುದಾರರಾದ ಶಾಲೆಯ ದೈಹಿಕ ಶಿಕ್ಷಕ ಜಯರಾಜ ಶೇರುಗಾರ ಹಾಗೂ ನಾಗರಾಜ ಭಂಡಾರಿ ವಿದ್ಯಾರ್ಥಿಗಳಿಂದ ಮನಸ್ಸಿಗೆ ಮುದ ನೀಡುವ ಹಿನ್ನಲೆ ಸಂಗೀತದ ಜೊತೆ ಭಿನ್ನ-ಭಿನ್ನ ಆಸನಗಳನ್ನು ಮಾಡಿಸಿದರು. ಶಾಲಾ ಮುಖ್ಯಾಧ್ಯಾಪಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಬಿ.ಎಸ್. ಗೌಡ, ಆರ್.ಎಚ್.ದೇಶಭಂಡಾರಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share happily:
Read More

ಕೊಂಕಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ

Share happily:

ಕುಮಟಾ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆಗಳಾದ ಆರ್‌ಡಿಎಸ್‌ಎಚ್‌ ಬಾಲಮಂದಿರ, ಸರಸ್ವತಿ ವಿದ್ಯಾಕೇಂದ್ರ, ಸಿವಿಎಸ್‍ಕೆ ಪ್ರೌಢಶಾಲೆ, ಸರಸ್ವತಿ ಪ.ಪೂ. ಕಾಲೇಜ್, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರ, ಸರಸ್ವತಿ ಮಾಳಪ್ಪ ಕಾಮತ ಕೃಷಿ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ಇವುಗಳ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ ಧ್ವಜಾರೋಹಣೆ ನೆರವೇರಿಸಿ ಧ್ವಜವಂದನೆಗೈದರು. ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತ, ಇನ್ನು 25 ವರ್ಷಗಳಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಲಿದ್ದೇವೆ. ಇಂದಿನ ವಿದ್ಯಾರ್ಥಿಗಳು ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ನಮ್ಮೆಲ್ಲರ ಕರ್ತವ್ಯವನ್ನು ನಾವು ಸ್ಮರಿಸಬೇಕು. ಅಮೃತ ಮಹೋತ್ಸವದ ಈ ಘಳಿಗೆಯಲ್ಲಿ ‘ಡೈಮಂಡ್ ರನ್’ ಕಾರ್ಯಕ್ರಮವನ್ನು ಸಂಯೋಜಿಸಿ, ಸಂಸ್ಥೆಯ 75 ವಿದ್ಯಾರ್ಥಿಗಳು ನಗರದ ಬೀದಿಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶತಮಾನೋತ್ಸವದ ಕಡೆಗೆ ನಾವು ಚಲಿಸುತ್ತಿರುವುದನ್ನು ಅರ್ಥೈಸುವಂತೆ…

Share happily:
Read More