ರಾಜ್ಯ ಮಟ್ಟದ ಸ್ಪರ್ಧೆಗೆ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು

Share happily:

ಕುಮಟಾ: ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಚಿಮ್ಮಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ವಸುಧಾ ಪ್ರಭು ಮರಾಠಿ ಭಾಷಣ, ಶಿಲ್ಪಾ ಪಟಗಾರ ರಂಗೋಲಿ, ಚಿನ್ಮಯಿ ಭಂಡಾರಿ ಸಂಗಡಿಗರು ಕಲೋತ್ಸವ ನೃತ್ಯ (ವೀರಗಾಸೆ)ದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಉಳಿದಂತೆ, ಶ್ರೇಯಾ ಶಾನಭಾಗ ಧಾರ್ಮಿಕ ಪಠಣ, ನೇಹಾ ಶಾನಭಾಗ ಸಂಸ್ಕೃತ ಭಾಷಣ, ತೇಜಸ್ವಿನಿ ಶಾನಭಾಗ ತುಳು ಭಾಷಣದಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿದರೆ, ಸುದಿತಿ ಕಾಮತ ಕೊಂಕಣಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ಪಾಲಕರು ಶ್ಲಾಘಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Share happily:
Read More

ಕೊಂಕಣದ ಸರಸ್ವತಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಬಿ.ಕೆ.ಭಂಡಾರಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ಇನ್ಫೋಸಿಸ್ ಬ್ಲಾಕ್ ಲೋಕಾರ್ಪಣೆ ಕಾರ್ಯಕ್ರಮವನ್ನು ಗೋಕರ್ಣ ಪರ್ತಗಾಳಿ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಹಾಗೂ ಪಟ್ಟಶಿಷ್ಯ ಶ್ರೀ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ಇವರು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡುತ್ತ ಶಿಕ್ಷಣದೊಂದಿಗೆ ಸಂಸ್ಕಾರ ನೀಡುತ್ತಾ ಜಿಲ್ಲೆಯಲ್ಲಿಯೇ ಅಗ್ರಸ್ಥಾನ ಪಡೆದು ಕೊಂಡಿರುವುದು ಕುಮಟಾದ ಹೆಮ್ಮೆಯ ಕೊಂಕಣ ಎಜ್ಯುಕೇಆನ ಟ್ರಸ್ಟನ ಸಮೂಹ ಸಂಸ್ಥೆಗಳು ಎಂದು ನುಡಿದರು. ಅದೇ ರೀತಿ ಇನ್ನೋರ್ವ ಅತಿಥಿಗಳಾದ ಹಾಂಗ್ಯೊ ಐಸ್ಕ್ರೀಂನ ಮ್ಯಾನೇಂಜಿಗ್ ಡೈರೆಕ್ಷರ್ ಪ್ರದೀಪ ಪೈ ಶುಭ ಹಾರೈಸಿದರು. ನಂತರ ಆರ್ಶೀರ್ವಚನವಿತ್ತ ಸ್ವಾಮೀಜಿಯವರು ಶುಭಮೂಹೂರ್ತದಲ್ಲಿ ಈ ವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ್ದೇವೆ, ವಿದ್ಯಾರ್ಥಿಗಳು ವಿದ್ಯೆ, ವಿನಯ, ವಿವೇಕ, ವಿವೇಚನೆ ಬೆಳೆಸಿಕೊಂಡು ಸಂಸ್ಕಾರ ಪಡೆದುಕೊಳ್ಳಬೇಕು.…

Share happily:
Read More

ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮಕ್ಕೆ ನಾಂದಿ ಹಾಡಿದ ಕೊಂಕಣದ ‘ಪರಂಪರಾ ಕೂಟ’

Share happily:

ಕುಮಟಾ: ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ವಿನೂತನ ಪ್ರಯೋಗಗಳ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಕುಮಟಾದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ, ರೌಪ್ಯ ಮಹೋತ್ಸವದ ಈ ಸುಸಂದರ್ಭದಲ್ಲಿ, ‘ಹಳೆ ಬೇರು-ಹೊಸ ಚಿಗುರು’ ಎಂಬ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ಪರಿಸರದಲ್ಲಿ ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮ ಕಾರ್ಯಕ್ರಮ ಅಭೂತಪೂರ್ವವಾಗಿ ಜರುಗಿ ಯಶಸ್ವಿಯಾಯಿತು. ‘ದೀಪಾವಳಿ ಮೇಳ’ದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಗುರುಪ್ರಸಾದ ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಯಂತ ನಾಯ್ಕ ಉದ್ಘಾಟಿಸಿದರು. ಸಂಸ್ಥೆಯ ಕುರಿತಾಗಿ ಹೆಮ್ಮೆಯ ಮಾತಗಳನ್ನಾಡಿದ ಅವರು, ತಮ್ಮ ಮೊಮ್ಮಕ್ಕಳು ಇದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದು ಅವರಲ್ಲಿ ಸಂಸ್ಕೃತಿ ಮೂಡುವಲ್ಲಿ ಶಿಕ್ಷಕರು ಹಾಗೂ ಸಂಸ್ಥೆಯವರ ಕಾರ್ಯ, ಕಾಳಜಿ ಶ್ಲಾಘನೀಯ ಎಂದು ನಿದರ್ಶನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ರಜತ…

Share happily:
Read More