2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸರಸ್ವತಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅಮೋಘ ಸಾಧನೆ

Share happily:

ಕುಮಟಾದ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಮಾರ್ಚ್ 2020 ರ ಫಲಿತಾಂಶ ಪ್ರಕಟಗೊಂಡಿದ್ದು ಕಾಲೇಜಿನ ಸರಾಸರಿ ಫಲಿತಾಂಶ 97ಶೇಕಡಾಗಿದ್ದು ಒಟ್ಟು 99 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 96 ಶೇಕಡಾ ಫಲಿತಾಂಶ ದಾಖಲಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಂಕಗಳಿಸಿ ಕ್ರಮವಾಗಿ ಎಚ್.ಎಸ್. ವಿಶಾಲ 97.5% (ಲೆಕ್ಕಶಾಸ್ತ್ರ 100, ವ್ಯವಹಾರ ಅಧ್ಯಯನದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100), ಕುಶಿ ಭಟ್ 97.5% (ಲೆಕ್ಕಶಾಸ್ತ್ರ 100, ಸಂಖ್ಯಾಶಾಸ್ತ್ರದಲ್ಲಿ 100), ವೈಷ್ಣವಿ ಮೇಸ್ತ 97.5% (ವ್ಯವಹಾರ ಅಧ್ಯಯನದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100), 600ಕ್ಕೆ 585 ಅಂಕ ಗಳಿಸಿ ಪ್ರಥಮ ಸ್ಥಾನವನ್ನು, ಗೌತಮಿ ಪೈ 97.33% (ವ್ಯವಹಾರ ಅಧ್ಯಯನದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100), 600ಕ್ಕೆ 584 ದ್ವಿತೀಯ ಹಾಗೂ ಕೃತಿಕ ನಾಯಕ 95.33% (ವ್ಯವಹಾರ ಅಧ್ಯಯನದಲ್ಲಿ 100) 572 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 6…

Share happily:
Read More

2019-20ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ರಾಜ್ಯಮಟ್ಟದ ತೃತೀಯ ರ‍್ಯಾಂಕ್ ನೊಂದಿಗೆ ಎಂಟು ಸ್ಥಾನಗಳನ್ನು ತನ್ನ ದಾಗಿಸಿಕೊಂಡ ಕೊಂಕಣ ಸಿ.ವಿ.ಎಸ್‌.ಕೆ

Share happily:

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಪ್ರಕಟಗೊಂಡಿದ್ದು, ಕುಮಟಾದ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯು ರಾಜ್ಯಮಟ್ಟದ ತೃತೀಯ ರ‍್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ. ಪರೀಕ್ಷೆ ಬರೆದ 125 ವಿದ್ಯಾರ್ಥಿಗಳಲ್ಲಿ 124 ಮಂದಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗಿದ್ದು ಉತ್ಕೃಷ್ಟ ಫಲಿತಾಂಶವನ್ನು ಒದಗಿಸಿದ್ದಾರೆ. ಕುಮಾರ ಸಂಜಯ ಡಿ. ನಾಯಕ 625ಕ್ಕೆ 623 ಅಂಕ (99.68%) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಕುಮಟಾ ತಾಲೂಕಿಗೆ ಪ್ರಥಮ ಸ್ಥಾನವನ್ನು, ಕುಮಾರ ಕಾರ್ತಿಕ ಎಸ್‌. ನಾಯ್ಕ 620 ಅಂಕ (99.20%) ರಾಜ್ಯಕ್ಕೆ ಆರನೇ ಸ್ಥಾನ, ಕುಮಾರ ಅಕ್ಷಯ ಎ. ನಾಯ್ಕ ಹಾಗೂ ಕುಮಾರಿ ಪ್ರಜ್ಞಾ ಪಿ. ಶಾನಭಾಗ 619 ಅಂಕ (99.04%) ರಾಜ್ಯಕ್ಕೆ ಏಳನೇ ಸ್ಥಾನ, ಕುಮಾರ ಶ್ರವಣ ಎಂ. ಪೈ ಹಾಗೂ ಕುಮಾರಿ ಶಾಲ್ಮಲಿ ಮಂಕೀಕರ್‌ 618 ಅಂಕ (98.88%) ರಾಜ್ಯಕ್ಕೆ ಎಂಟನೇ ಸ್ಥಾನ, ಕುಮಾರಿ ಶಿಲ್ಪಾ ಭಟ್ಟ 617 ಅಂಕ (98.72%)…

Share happily:
Read More

ರಾಜ್ಯಕ್ಕೆ ಕುಮಟಾದ ‘ಕೊಂಕಣ’ವೇ ಫರ್ಸ್ಟ್ & ಬೆಸ್ಟ್ (ರಾಜ್ಯದ ಟಾಪ್ 10 ಪಟ್ಟಿಯಲ್ಲಿ ಕೊಂಕಣದ ವಿದ್ಯಾರ್ಥಿಗಳದ್ದೇ ದರ್ಬಾರ್)

Share happily:

ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರತಿಸಲದಂತೆ ಈ ವರ್ಷವೂ ಶೇ.100ರಷ್ಟಾಗಿದ್ದು, ರಾಜ್ಯಮಟ್ಟಕ್ಕೆ ಪ್ರಥಮ ರ‍್ಯಾಂಕ್ ಪಡೆಯುವುದರ ಮೂಲಕ ರಾಜ್ಯದಲ್ಲಿಯೇ ಅತ್ಯುತ್ತಮ ಫಲಿತಾಂಶ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಲೆಯ 7 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಟಾಪ್ 10 ರ‍್ಯಾಂಕಿಂಗ್ ಪಟ್ಟಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿನಿ ನಾಗಾಂಜಲಿ ಪರಮೇಶ್ವರ ನಾಯ್ಕ ಪೂರ್ಣಾಂಕ (625 ಕ್ಕೆ 625) ಗಳಿಕೆಯ ವಿಶಿಷ್ಟ ಹಾಗೂ ಅಪರೂಪದ ಚಿನ್ನದ ಸಾಧನೆಗೈದು ಸಂಸ್ಥೆಯ ಘನತೆಯನ್ನು ಉತ್ತುಂಗಕ್ಕೇರಿಸಿದ್ದು ಮಾತ್ರವಲ್ಲದೆ ಇಡೀ ರಾಜ್ಯವೇ ಉತ್ತರ ಕನ್ನಡದ ಕುಮಟಾದತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಇವಳಿಗೆ ಸಾಥ್ ನೀಡಿದ ಇದೇ ಪ್ರೌಢಶಾಲೆಯ ಇನ್ನೂ 6 ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ನಾಗಾಂಜಲಿ ನಾಯ್ಕ ಶೇ.100 ಶಾಲೆಗೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ,…

Share happily:
Read More

ಸರಸ್ವತಿ ಪದವಿ ಪೂರ್ವ ಕಾಲೇಜಿನ ಉತ್ತಮ ಸಾಧನೆ : ವಾಣಿಜ್ಯ ವಿಭಾಗದಲ್ಲಿ 100%, ವಿಜ್ಞಾನ ವಿಭಾಗದಲ್ಲಿ 90% ಫಲಿತಾಂಶ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಮಾರ್ಚ್ 2019 ರ ಫಲಿತಾಂಶ ಪ್ರಕಟಗೊಂಡಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 100 ಶೇಕಡಾ ಫಲಿತಾಂಶ ದಾಖಲಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕುಮಾರಿ ಮಾನಸ ಪಂಡಿತ ಶೇ 96.66, ಕುಮಾರಿ ಯೋಗಿತಾ ತಾಂಡೇಲ ಶೇ 94.17, ಕುಮಾರ ದೀಪಕ ಕಿಣಿ ಶೇ 93.16, ಅಂಕ ಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಒಟ್ಟು 12 ವಿದ್ಯಾರ್ಥಿಗಳಲ್ಲಿ 06 ವಿದ್ಯಾರ್ಥಿಗಳು 85ಕ್ಕಿಂತ ಅಧಿಕ ಅಂಕಗಳಿಸಿದರೆ, 05 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಪಾಸಾಗಿರುತ್ತಾರೆ. ಅಲ್ಲದೇ ವ್ಯವಹಾರ ಅಧ್ಯಯನದಲ್ಲಿ ಇಬ್ಬರು ಮತ್ತು ಲೆಕ್ಕಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 90% ಫಲಿತಾಂಶ ದಾಖಲಾಗಿಸಿ ಕುಮಾರಿ ವಿ. ಅನ್ವಿತ ಶೇ 92.16, ಕುಮಾರಿ ವೈಷ್ಣವಿ ನಾಯಕ ಶೇ. 91.66,…

Share happily:
Read More

ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿ ವಿಜ್ಞಾನಿಗಳಿಂದ ವಿಜ್ಞಾನ ದಿನ ಆಚರಣೆ

Share happily:

ಕುಮಟಾ: 1928 ರ ಫೆಬ್ರವರಿ 28 ರಂದು ಮಹಾನ್ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ವಿಶ್ವ ಪ್ರಸಿದ್ಧವಾದ “ರಾಮನ್ ಎಫೆಕ್ಟ”ನ್ನು ಜಗತ್ತಿಗೆ ಬಹಿರಂಗ ಪಡಿಸಿದರು. ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿಗಳೇ ವಿಜ್ಞಾನಿಗಳ ವೇಷ ಧರಿಸಿ ಆಯಾ ವಿಜ್ಞಾನಿಗಳ ಸಂಶೋಧನೆ ಆವಿಷ್ಕಾರಗಳ ಕುರಿತಾಗಿ ಬೆಳಕು ಚೆಲ್ಲುವ ಮೂಲಕ ಅರ್ಥಪೂರ್ಣವಾಗಿ ವಿಜ್ಞಾನ ದಿನವನ್ನು ಆಚರಿಸಿದರು. ಆಕಾಶ ನಾಯಕ ಸರ್.ಸಿ.ವಿ.ರಾಮನ್ ಪಾತ್ರದಲ್ಲಿ ಬಂದು ರಾಮನ್ ಎಫೆಕ್ಟ ಬಗ್ಗೆ ವಿವರಿಸಿ ಎಲ್ಲರನ್ನು ಮೆಚ್ಚಿಸಿದರೆ, ಚಂದನ ಹೆಗಡೆ ಜಗದೀಶ ಚಂದ್ರ ಬೋಸ್ ಆಗಿ, ವಿರಾಜ್ ಎಂ.ವಿಶ್ವೇಶ್ವರಯ್ಯರ ವೇಶ ತೊಟ್ಟು, ಸುದರ್ಶನ ಹೆಗಡೆ ವಿಕ್ರಂ ಸಾರಾಭಾಯಿಯ ರೂಪದಲ್ಲಿ ಹಾಗೂ ಮಯೂರ್ ನಾಯ್ಕ ಸಲೀಂ ಅಲಿಯಾಗಿ ಮಿಂಚಿ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಸಭೆಗೆ ಪರಿಚಯಿಸಿದರು. ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಉಷಾ ಭಟ್ಟ, ಮಹೇಶ್ವರಿ…

Share happily:
Read More

ಪುಲ್ವಾಮಾ ದಾಳಿಯ ಪ್ರತೀಕಾರದ ಅಂಗವಾಗಿ ಕೊಂಕಣದ ಸಿ.ವಿ.ಎಸ್.ಕೆ ಹೈಸ್ಕೂಲ್‌ನಲ್ಲಿ ವಿಜಯೋತ್ಸವ ಆಚರಣೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಹೈಸ್ಕೂಲ್‌ನಲ್ಲಿ ಇಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಉಗ್ರನೆಲೆಗಳನ್ನು ನಾಶಮಾಡಿ ಪುಲ್ವಾಮಾ ದಾಳಿಯ ವಿರುದ್ಧ ತೆಗೆದುಕೊಂಡ ಪ್ರತೀಕಾರ ಕ್ರಮವನ್ನು ಬೆಂಬಲಿಸಿ ವಿಜಯೋತ್ಸವವನ್ನು ಆಚರಿಸಲಾಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಘೋಷ ಮೊಳಗಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕ ಚಿದಾನಂದ ಭಂಡಾರಿ, ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಧ್ಯೇಯವಾಕ್ಯವೇ “ರಾಷ್ಟನಿರ್ಮಾಣ ಮಂದಿರವಿದು ಕೈ ಮುಗಿದು ಒಳಗೆ ಬಾ” ಎಂಬುದಾಗಿದ್ದು ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಣಕಣದಲ್ಲೂ ರಾಷ್ಟ್ರಭಕ್ತಿಯನ್ನು ಮೂಡಿಸುವುದೇ ನಮ್ಮ ಗುರಿ. ಭಾರತದ ವೀರ ಸೈನಿಕರ ಸಾಹಸವನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಉಗ್ರರಿಂದ ಸಾವನ್ನಪ್ಪಿದ ಯೋಧರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಗಳು. ನಾಳೆ ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದರೆ ಎಲ್ಲರೂ ದೇಶದ ಗೆಲುವಿಗೆ ತಮ್ಮ ಕೊಡುಗೆ ನೀಡಲು ಸಿದ್ಧರಿರಬೇಕೆಂದು ಕರೆನೀಡಿದರು. ವಿದ್ಯಾರ್ಥಿಗಳು ಜೈಜವಾನ್ ಜೈಕಿಸಾನ್,…

Share happily:
Read More

ಕೊಂಕಣದಲ್ಲಿ ಸಂಭ್ರಮದ 70ನೇ ಗಣರಾಜ್ಯೋತ್ಸವ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಮೂಹ ಸಂಸ್ಥೆಗಳಿಂದ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವಿಠ್ಠಲ ಆರ್. ನಾಯಕರವರು ನೆರವೇರಿಸಿದರು. ನಂತರ ಮಾತನಾಡಿದ ಅವರು, ವಿಶ್ವದ ಆಡಳಿತ ವ್ಯವಸ್ಥೆಯಲ್ಲಿಯೇ ಅತ್ಯಂತ ಉತ್ತಮ ವ್ಯವಸ್ಥೆ ಎನಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ದೇಶವು ಅಳವಡಿಸಿಕೊಂಡಿದೆ. ಈ ದೇಶದಲ್ಲಿ ಸಾಮಾನ್ಯ ಪ್ರಜೆಯೂ ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಅರ್ಹನಾಗಿದ್ದಾನೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ವಿಶಿಷ್ಟ ಶಾಸ್ತ್ರ-ಸಂಪ್ರದಾಯಗಳನ್ನು ಪಾಲಿಸುವ ಹಾಗೂ ಆಚರಿಸುವ ಬ್ರಹತ್ ರಾಷ್ಟ್ರ ನಮ್ಮದು. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಸಂರಕ್ಷಕನಾಗಿರಬೇಕು. ದೇಶದ ಭವಿಷ್ಯದ ಕುಡಿಗಳಾಗಿರುವ ವಿದ್ಯಾರ್ಥಿಗಳಾದ ತಾವು ಸಂವಿಧಾನದಲ್ಲಿರಬೇಕಾದ ನಂಬಿಕೆ ಗೌರವವನ್ನು ಮೈಗೂಡಿಸಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುವುದರ ಮೂಲಕ ಭಾರತವನ್ನು ಪರಮ ವೈಭವ ರಾಷ್ಟ್ರವನ್ನಾಗಿಸುವಲ್ಲಿ ಕಟಿಬದ್ಧರಾಗಬೇಕು ಎಂದರು. ಸಂಸ್ಥೆಯ ವಿಶ್ವಸ್ಥರುಗಳಾದ ರಮೇಶ ಪ್ರಭು, ಡಾ. ವೆಂಕಟೇಶ ಶಾನಭಾಗ, ಗಜಾನನ ಕಿಣಿ, ನಿವೃತ್ತ…

Share happily:
Read More

ಕೊಂಕಣ ಎಜ್ಯುಕೇಶನ್ ಟ್ರಸ್ಟನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Share happily:

ಕುಮಟಾ: ಸಂಸ್ಕಾರ ಹಾಗೂ ಸಂಪ್ರದಾಯದ ತಳಹದಿಯಲ್ಲಿ ಶಿಕ್ಷಣ ನೀಡಬೇಕು ಎಂಬ ಘನ ಉದ್ದೇಶ ಹೊತ್ತು ಮುನ್ನಡೆಯುತ್ತಿರುವ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಮಾತೃಮಂಡಳಿಯ ಸಹಯೋಗದಲ್ಲಿ ಡಾ. ಆರತಿ ವಿ. ಬಿ. ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಕೃತಿಯ ಸೌಂದರ್ಯ ಇರುವುದು ಸ್ತ್ರೀಯಲ್ಲಿ ಎಂಬುದು ಮಾತು ಸತ್ಯ, ಪ್ರತಿಯೊಂದರಲ್ಲಿಯೂ ಸುಂದರತೆ ಕಾಣುವ ಮಾತೆಯರಿಂದ ಮಾತ್ರವೇ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ವಿವರಿಸಿದ ಅವರು ಪುರುಷರಲ್ಲಿ ಹಾಗೂ ಸ್ತ್ರೀಯರಲ್ಲಿ ಅನೇಕ ವಿಧದ ವೈಶಿಷ್ಟ್ಯಗಳು ಇರುತ್ತವೆ. ನಾವು ನಾವಾಗಿಯೇ ಇರಬೇಕು. ಪುರುಷ ಸ್ತ್ರೀ ಆಗಲು ಪ್ರಯತ್ನಿಸಲಾಗದು, ಸ್ತ್ರೀ ಪುರುಷರಂತೆ ಆಗಲು ಪ್ರಯತ್ನಿಸುತ್ತಿರುವುದು ಹುಚ್ಚುತನ ಮಾತೃತ್ವ ಇರುವುದು ಸ್ತ್ರೀಯರಲ್ಲಿ, ಸ್ತ್ರೀ ಎಂಬುದೊಂದು ಶಕ್ತಿ ಯಾವ ಸ್ತ್ರೀ ತನ್ನೊಳಗಿನ ವಿದ್ಯೆ, ವಿಜ್ಞಾನ, ಕೌಶಲ, ಮಾತೃತ್ವವನ್ನು ಜಗತ್ತಿಗೆ ಕೊಟ್ಟಾಗ ಎಲ್ಲರೂ ನಮ್ಮನ್ನು ಮಾತೆಯರು ಎನ್ನುವರು. ತ್ಯಾಗ ಮಾಡುವ ಬಗ್ಗೆ ಕಲಿಸಿದವರು ಮಕ್ಕಳು ಅಂತಹ…

Share happily:
Read More

ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನಕ್ಕೆ ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು

Share happily:

ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಸಂಪನ್ನಗೊಂಡ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನಕ್ಕೆ ದಾಪುಗಾಲಿಟ್ಟಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕರುಗಳಾದ ಎಚ್.ಆರ್.ರವಿಶಂಕರ ಹಾಗೂ ಭಾಸ್ಕರ ಹೆಗಡೆ ಇವರ ಸೂಕ್ತ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸೂರ್ಯಕಿರಣ ಎನ್. ಮತ್ತು ಪ್ರಮೋದ ಎಲ್. ನಾಯ್ಕ ಇವರು ಸಾರಿಗೆ ಮತ್ತು ಸಂವಹನ ವಿಷಯದಡಿ ಪ್ರದರ್ಶಿಸಿದ ವಿಜ್ಞಾನ ಮಾದರಿಯು ಭಾರತದ ದಕ್ಷಿಣ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನಗಳಿಸುವುದರ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಶೈಲಿಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸುವಲ್ಲಿ ಹೆಸರುವಾಸಿಯಾಗಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯು ಈ ಮೂಲಕ ಸಂಸ್ಥೆಯ ಸಾಧನೆಯ…

Share happily:
Read More

ರಾಜ್ಯ ಮಟ್ಟಕ್ಕೆ ಕೊಂಕಣದ ವಿದ್ಯಾರ್ಥಿಗಳು

Share happily:

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದೊಂದಿಗೆ ಕುಮಟಾದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2018-19ರಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಮಂಡ್ಯದಲ್ಲಿ ಜರುಗಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕವಿತಾ ಗೋಷ್ಠಿಯಲ್ಲಿ ಶಿಲ್ಪಾ ಡಿ. ಭಟ್ಟ ಪ್ರಥಮ, ಕಾರ್ತಿಕ ಪಿ. ನಾಯ್ಕ ದ್ವಿತೀಯ ಸ್ಥಾನಗಳಿಸಿದರೆ, ಕಥಾ ಗೋಷ್ಠಿಯಲ್ಲಿ ಪ್ರಗತಿ ಜಿ. ಹೆಗಡೆ ಪ್ರಥಮ ಹಾಗೂ ಚುಟುಕು ಗೋಷ್ಠಿಯಲ್ಲಿ ಸಂಜಯ ಡಿ. ನಾಯ್ಕ ಪ್ರಥಮ ಸ್ಥಾನಗಳಿಸುವುದರ ಮೂಲಕ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ, ಶಿಕ್ಷಕರು, ಶೈಕ್ಷಣಿಕ ಸಲಹೆಗಾರರು, ಪಾಲಕರು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

Share happily:
Read More