ಕೊಂಕಣದಲ್ಲಿ ಸಂಭ್ರಮದ 70ನೇ ಗಣರಾಜ್ಯೋತ್ಸವ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಮೂಹ ಸಂಸ್ಥೆಗಳಿಂದ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವಿಠ್ಠಲ ಆರ್. ನಾಯಕರವರು ನೆರವೇರಿಸಿದರು. ನಂತರ ಮಾತನಾಡಿದ ಅವರು, ವಿಶ್ವದ ಆಡಳಿತ ವ್ಯವಸ್ಥೆಯಲ್ಲಿಯೇ ಅತ್ಯಂತ ಉತ್ತಮ ವ್ಯವಸ್ಥೆ ಎನಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ದೇಶವು ಅಳವಡಿಸಿಕೊಂಡಿದೆ. ಈ ದೇಶದಲ್ಲಿ ಸಾಮಾನ್ಯ ಪ್ರಜೆಯೂ ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಅರ್ಹನಾಗಿದ್ದಾನೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ವಿಶಿಷ್ಟ ಶಾಸ್ತ್ರ-ಸಂಪ್ರದಾಯಗಳನ್ನು ಪಾಲಿಸುವ ಹಾಗೂ ಆಚರಿಸುವ ಬ್ರಹತ್ ರಾಷ್ಟ್ರ ನಮ್ಮದು. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಸಂರಕ್ಷಕನಾಗಿರಬೇಕು. ದೇಶದ ಭವಿಷ್ಯದ ಕುಡಿಗಳಾಗಿರುವ ವಿದ್ಯಾರ್ಥಿಗಳಾದ ತಾವು ಸಂವಿಧಾನದಲ್ಲಿರಬೇಕಾದ ನಂಬಿಕೆ ಗೌರವವನ್ನು ಮೈಗೂಡಿಸಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುವುದರ ಮೂಲಕ ಭಾರತವನ್ನು ಪರಮ ವೈಭವ ರಾಷ್ಟ್ರವನ್ನಾಗಿಸುವಲ್ಲಿ ಕಟಿಬದ್ಧರಾಗಬೇಕು ಎಂದರು. ಸಂಸ್ಥೆಯ ವಿಶ್ವಸ್ಥರುಗಳಾದ ರಮೇಶ ಪ್ರಭು, ಡಾ. ವೆಂಕಟೇಶ ಶಾನಭಾಗ, ಗಜಾನನ ಕಿಣಿ, ನಿವೃತ್ತ…

Share happily:
Read More

ಕೊಂಕಣ ಎಜ್ಯುಕೇಶನ್ ಟ್ರಸ್ಟನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Share happily:

ಕುಮಟಾ: ಸಂಸ್ಕಾರ ಹಾಗೂ ಸಂಪ್ರದಾಯದ ತಳಹದಿಯಲ್ಲಿ ಶಿಕ್ಷಣ ನೀಡಬೇಕು ಎಂಬ ಘನ ಉದ್ದೇಶ ಹೊತ್ತು ಮುನ್ನಡೆಯುತ್ತಿರುವ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಮಾತೃಮಂಡಳಿಯ ಸಹಯೋಗದಲ್ಲಿ ಡಾ. ಆರತಿ ವಿ. ಬಿ. ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಕೃತಿಯ ಸೌಂದರ್ಯ ಇರುವುದು ಸ್ತ್ರೀಯಲ್ಲಿ ಎಂಬುದು ಮಾತು ಸತ್ಯ, ಪ್ರತಿಯೊಂದರಲ್ಲಿಯೂ ಸುಂದರತೆ ಕಾಣುವ ಮಾತೆಯರಿಂದ ಮಾತ್ರವೇ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ವಿವರಿಸಿದ ಅವರು ಪುರುಷರಲ್ಲಿ ಹಾಗೂ ಸ್ತ್ರೀಯರಲ್ಲಿ ಅನೇಕ ವಿಧದ ವೈಶಿಷ್ಟ್ಯಗಳು ಇರುತ್ತವೆ. ನಾವು ನಾವಾಗಿಯೇ ಇರಬೇಕು. ಪುರುಷ ಸ್ತ್ರೀ ಆಗಲು ಪ್ರಯತ್ನಿಸಲಾಗದು, ಸ್ತ್ರೀ ಪುರುಷರಂತೆ ಆಗಲು ಪ್ರಯತ್ನಿಸುತ್ತಿರುವುದು ಹುಚ್ಚುತನ ಮಾತೃತ್ವ ಇರುವುದು ಸ್ತ್ರೀಯರಲ್ಲಿ, ಸ್ತ್ರೀ ಎಂಬುದೊಂದು ಶಕ್ತಿ ಯಾವ ಸ್ತ್ರೀ ತನ್ನೊಳಗಿನ ವಿದ್ಯೆ, ವಿಜ್ಞಾನ, ಕೌಶಲ, ಮಾತೃತ್ವವನ್ನು ಜಗತ್ತಿಗೆ ಕೊಟ್ಟಾಗ ಎಲ್ಲರೂ ನಮ್ಮನ್ನು ಮಾತೆಯರು ಎನ್ನುವರು. ತ್ಯಾಗ ಮಾಡುವ ಬಗ್ಗೆ ಕಲಿಸಿದವರು ಮಕ್ಕಳು ಅಂತಹ…

Share happily:
Read More

ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನಕ್ಕೆ ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು

Share happily:

ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಸಂಪನ್ನಗೊಂಡ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನಕ್ಕೆ ದಾಪುಗಾಲಿಟ್ಟಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕರುಗಳಾದ ಎಚ್.ಆರ್.ರವಿಶಂಕರ ಹಾಗೂ ಭಾಸ್ಕರ ಹೆಗಡೆ ಇವರ ಸೂಕ್ತ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸೂರ್ಯಕಿರಣ ಎನ್. ಮತ್ತು ಪ್ರಮೋದ ಎಲ್. ನಾಯ್ಕ ಇವರು ಸಾರಿಗೆ ಮತ್ತು ಸಂವಹನ ವಿಷಯದಡಿ ಪ್ರದರ್ಶಿಸಿದ ವಿಜ್ಞಾನ ಮಾದರಿಯು ಭಾರತದ ದಕ್ಷಿಣ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನಗಳಿಸುವುದರ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಶೈಲಿಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸುವಲ್ಲಿ ಹೆಸರುವಾಸಿಯಾಗಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯು ಈ ಮೂಲಕ ಸಂಸ್ಥೆಯ ಸಾಧನೆಯ…

Share happily:
Read More

ರಾಜ್ಯ ಮಟ್ಟಕ್ಕೆ ಕೊಂಕಣದ ವಿದ್ಯಾರ್ಥಿಗಳು

Share happily:

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದೊಂದಿಗೆ ಕುಮಟಾದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2018-19ರಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಮಂಡ್ಯದಲ್ಲಿ ಜರುಗಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕವಿತಾ ಗೋಷ್ಠಿಯಲ್ಲಿ ಶಿಲ್ಪಾ ಡಿ. ಭಟ್ಟ ಪ್ರಥಮ, ಕಾರ್ತಿಕ ಪಿ. ನಾಯ್ಕ ದ್ವಿತೀಯ ಸ್ಥಾನಗಳಿಸಿದರೆ, ಕಥಾ ಗೋಷ್ಠಿಯಲ್ಲಿ ಪ್ರಗತಿ ಜಿ. ಹೆಗಡೆ ಪ್ರಥಮ ಹಾಗೂ ಚುಟುಕು ಗೋಷ್ಠಿಯಲ್ಲಿ ಸಂಜಯ ಡಿ. ನಾಯ್ಕ ಪ್ರಥಮ ಸ್ಥಾನಗಳಿಸುವುದರ ಮೂಲಕ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ, ಶಿಕ್ಷಕರು, ಶೈಕ್ಷಣಿಕ ಸಲಹೆಗಾರರು, ಪಾಲಕರು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

Share happily:
Read More

ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಶಿಕ್ಷಕರಿಗೆ ಸನ್ಮಾನ

Share happily:

ಕುಮಟಾ: ಅಪರ ಆಯುಕ್ತಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಹಾಗೂ ಡಾ. ಎಚ್. ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಕುಮಟಾದ ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ, 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ವಿಷಯವಾರು ಗರಿಷ್ಠ ಶೇಕಡಾವಾರು ಸರಾಸರಿ ಅಂಕಗಳನ್ನು ದಾಖಲಿಸಿದ ಕುಮಟಾದ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ನಾಲ್ಕು ವಿಷಯ ಶಿಕ್ಷಕರನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸವರಾಜ ಹೊರಟ್ಟಿಯವರು ಗೌರವಿಸಿ ಸನ್ಮಾನಿಸಿದರು. ವಿಷಯವಾರು ಬೋಧನೆಯ ಅನುಸಾರ ಇಂಗ್ಲೀಷ್ ವಿಷಯದಲ್ಲಿ ಶ್ರೀಮತಿ ವಿನಯಾ ನಾಯಕ ಶೇ.92.48, ಸಮಾಜ ವಿಜ್ಞಾನ ವಿಷಯದಲ್ಲಿ ಶ್ರೀ ಪ್ರಕಾಶ ಗಾವಡಿ ಶೇ.91.41, ಗಣಿತ ವಿಷಯದಲ್ಲಿ ಶ್ರೀ ರಾಜೇಶ ಎಚ್.ಜಿ ಶೇ.83.35, ಹಾಗೂ ವಿಜ್ಞಾನ ವಿಷಯದಲ್ಲಿ ಶ್ರೀ ಭಾಸ್ಕರ ಹೆಗಡೆ ಶೇ.74.1 ಸರಾಸರಿ ಶೇಕಡಾವಾರು ಅಂಕ…

Share happily:
Read More