ಕುಮಟಾ: ಶಕ್ತಿ ಮತ್ತು ಆರ್ದೃ ಭೂ ಸಂಶೋಧನಾ ಗುಂಪು, ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇವರು ಸಂಘಟಿತ 12ನೆಯ ದ್ವೈವಾರ್ಷಿಕ ಲೇಕ್ 2020 – ಪರಿಸರ ವ್ಯವಸ್ಥೆಯ ರಚನೆ, ಕಾರ್ಯ, ಸರಕು ಮತ್ತು ಸೇವೆಗಳ ಕುರಿತಾದ ಸಮಾವೇಶ ಸ್ಪರ್ಧೆಯಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್ಕೆ ಪ್ರೌಢಶಾಲೆಯ 9ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಸುಶ್ಮಿತಾ ಎಚ್. ನಾಯ್ಕ ಇವಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಗ್ರಾಮದ ಮನೆಮದ್ದುಗಳ ಕುರಿತಾದ ಪೇಪರ್ ಪ್ರೆಸೆಂಟೇಶನ್‌ನಲ್ಲಿ ದ್ವಿತೀಯ ಸ್ಥಾನ, ಮತ್ತು 8ನೇ ವರ್ಗದ ವಿದ್ಯಾರ್ಥಿ ಕುಮಾರ ಪರಮೇಶ್ವರ ಭಟ್ಟ ಇವನು ಕುಮಟಾದ ಹೆಗಡೆ ಗ್ರಾಮದ ವೈದ್ಯಕೀಯ ಸಸ್ಯಗಳು ಹಾಗೂ ಅವುಗಳ ಉತ್ಪನ್ನಗಳ ಕುರಿತಾದ ಪೋಸ್ಟರ್ ಪ್ರೆಸೆಂಟೇಶನ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ʼಸಹ್ಯಾದ್ರಿ ಯಂಗ್ ಎಕಾಲಾಜಿಸ್ಟ್ʼ ಪ್ರಶಸ್ತಿ ಪಡೆಯುವುದರ ಮೂಲಕ ಸಂಸ್ಥೆಯ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.…
Read MoreMonth: March 2021
ಕೊಂಕಣದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಪ್ರತಿಸಲದಂತೆ ಈ ವರ್ಷವೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗಾಗಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ದೇಶದ ಪ್ರತಿಯೊಂದು ಮಗು ದೇಶಭಕ್ತನಾಗಬೇಕು. ನಾವು ಮಾಡುವ ಕೈಂಕರ್ಯ ಭಾರತ ಮಾತೆಯ ಗೌರವವನ್ನು ಹೆಚ್ಚಿಸಬೇಕು ಎಂದು ಹಲವಾರು ಮಹಾಪುರುಷರ ಉದಾಹರಣೆಯೊಂದಿಗೆ ವಿವರಿಸಿದರು. ಆಶೀರ್ವಾದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಅಪಾರ ಮಹತ್ವವಿದ್ದು, ಪುರಾಣದಲ್ಲಿ ಕೃಷ್ಣ ದ್ರೌಪದಿಗೆ, ಭೀಷ್ಮ-ದುರ್ಯೋಧನರಿಗೆ, ಗಾಂಧಾರಿ-ಪಾಂಡವರಿಗೆ ಆಶೀರ್ವಾದ ಮಾಡಿದ ಸನ್ನಿವೇಶವನ್ನು ರೋಮಾಂಚನಕಾರಿಯಾಗಿ ಬಣ್ಣಿಸಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಯಾವತ್ತೂ ಶ್ಲಾಘನೆಗೆ ಒಳಗಾಗಿದೆ, ಇದು ಸರ್ವರಿಗೂ ತಿಳಿದ ವಿಚಾರವೇ ಆಗಿದೆ ಎಂದರು. ಕಾರ್ಯಕ್ರಮದ ಅತಿಥಿಯಾಗಿ ಉಪಸ್ಥಿತರಿದ್ದ ಇದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಡಾ.ಜಯಶ್ರೀ…
Read Moreಕೊಂಕಣದ ಸಿವಿಎಸ್‍ಕೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಕುಮಟಾ: ಶೈಕ್ಷಣಿಕ ಚಟುವಟಿಕೆಗಳ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್ಕೆ ಪ್ರೌಢಶಾಲೆಯ ಒಂಭತ್ತನೇ ವರ್ಗದ ವಿದ್ಯಾರ್ಥಿಗಳಾದ ಕುಮಾರ ತಿಲಕ ಕುಮಟಾ ಹಾಗೂ ಕುಮಾರ ವೈಭವ ಶಾನಭಾಗ ಇವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ದೂರದರ್ಶನ ಕೇಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಕಾರವಾರದ ವಿಜ್ಞಾನ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುದಲ್ಲದೆ, ಬಾಹ್ಯಾಕಾಶ ವಿಜ್ಞಾನದ ವಿವಿಧ ಚಟುವಟಿಕೆಗಳು ಮತ್ತು ಅಂಶಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಬಾಹ್ಯಾಕಾಶ ಇಲಾಖೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವತಿಯಿಂದ ನಡೆಸಲಾದ ಯುವಿಕಾ ಯುವ ವಿಜ್ಞಾನಿ…
Read More