ದಿವಂಗತ ಶ್ರೀ ಪಿ.ಎಸ್.ಕಾಮತ ಸ್ಮರಣಾರ್ಥ ತಾಲೂಕಾ ಮಟ್ಟದ ಚರ್ಚಾ ಸ್ಪರ್ಧೆ

Share happily:

“ಕಪ್ಪು ಹಣದ ನಿಯಂತ್ರಣಕ್ಕೆ ನೋಟು ರದ್ದತಿ ಸಹಾಯಕವಾಗಿದೆ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಾ ಮಟ್ಟದ ಪದವಿ ಪೂರ್ವ, ಪದವಿ, ಡಿ.ಎಡ್., ಬಿ.ಎಡ್. ಹಾಗೂ ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ನಾಡು-ನುಡಿಯ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ದಿವಂಗತ ಶ್ರೀ ಪಿ.ಎಸ್.ಕಾಮತ ಸ್ಮರಣಾರ್ಥ ತಾಲೂಕಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಸರಸ್ವತಿ ಪದವಿ ಪೂರ್ವ ಕಾಲೇಜು ಕುಮಟಾದಲ್ಲಿ ನೇರವೇರಿಸಲಾಯಿತು. ಸಂಘಟಕರಾದ ಶ್ರೀ ಅಶೋಕ ಭಟ್ಟ ಶಿಕ್ಷಕರು, ಕತಗಾಲ ಇವರ ಮಾರ್ಗದರ್ಶನದಲ್ಲಿ ನಡೆದ ಈ ಸ್ಪರ್ಧೆಗೆ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳು, ಚಿಂತಕರಾದ ಶ್ರೀ ಪುಟ್ಟು ಕುಲಕರ್ಣಿ, ಶ್ರೀ ಜಿ.ಎಸ್. ಭಟ್ಟ ನಿವೃತ್ತ ಪ್ರಾಂಶುಪಾಲರು ಏ.ವಿ.ಬಾಳಿಗ ವಾಣಿಜ್ಯ ಮಹಾವಿದ್ಯಾಲಯ, ಕುಮಟಾ ಮತ್ತು ಶ್ರೀಮತಿ ಸುಧಾ ಬಿ. ಗೌಡ ವಕೀಲರು ಮತ್ತು ಸಮಾಜ ಸೇವಾಕರ್ತರು ಮಚಗೋಣ, ಕುಮಟಾ ಇವರು ಆಗಮಿಸಿದ್ದರು. ಚರ್ಚಾ ಸ್ಪರ್ಧೆಯಲ್ಲಿ…

Share happily:
Read More

ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

Share happily:

ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಉದ್ಘಾಟಕರಾಗಿ ಆಗಮಿಸಿದ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಜಿ.ಯು.ಭಟ್ಟ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪುರಸ್ಕಾರ ನೀಡಿ ಮಾತನಾಡಿದ ಅವರು ಪ್ರತಿಭೆಗಳು ಅನಾವರಣಗೊಳ್ಳಬೇಕು ಎಲೆಮರೆಯ ಕಾಯಾಗಬಾರದು. ವಿದ್ಯಾರ್ಥಿಗಳು ಅಭ್ಯಾಸದೋಂದಿಗೆ ಇತರ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕಾಶೀನಾಥ ನಾಯಕರವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಹಾಗೂ ಪ್ರಾಂಶುಪಾಲರಾದ ಸುಲೋಚನಾ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ವಿಜಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕರಾದ ಶಿವಾನಂದ ಭಟ್ ವಂದನಾರ್ಪಣೆಗೈದರು.

Share happily:
Read More

‘ಇಂಟರ್ ನ್ಯಾಶನಲ್ ಸೈನ್ಸ್ ಓಲಂಪಿಯಾಡ್’ ನಲ್ಲಿ ಎರಡನೇ ಹಂತಕ್ಕೆ ಆಯ್ಕೆ

Share happily:

ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕು. ಅಂಕಿತಾ ಬಾಳೇರಿ, ಸನ್ನಿಧಿ ಹಬ್ಬು, ಜಯೇಶ್ ರಾವ್ ಇಂಟರ್ ನ್ಯಾಶನಲ್ ಸೈನ್ಸ್ ಓಲಂಪಿಯಾಡ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಅನುಕ್ರಮವಾಗಿ 21, 30, 32ನೇ ರ್ಯಾಂಕ್ ಗಳಿಸಿ, ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ಇವರ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಡಾ. ಸುಲೋಚನಾ ಬಿ. ರಾವ್ ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Share happily:
Read More

NEET ಪರೀಕ್ಷೆಯಲ್ಲಿ ಸರಸ್ವತಿ ಪದವಿ ಪೂರ್ವ ಕಾಲೇಜಿನ ಸಾಧನೆ

Share happily:

ಸರಸ್ವತಿ ಪದವಿ ಪೂರ್ವ ಕಾಲೇಜಿನ 50ವಿದ್ಯಾರ್ಥಿಗಳು ರಾಷ್ಟ್ರೀಯ ವೈದ್ಯಾಕೀಯ ಪರೀಕ್ಷೆಯಲ್ಲಿ 33 ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸಿರುತ್ತಾರೆ. ಪ್ರಿಯಾಂಕ ನಾಯಕ(93%), ಕಾತ್ಯಾಯಿನಿ ಭಟ್(88%), ಸನ್ನಿಧಿ ಪ್ರಭು(82.8%) ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ. ಇವರ ಈ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Share happily:
Read More

ತಾಲೂಕಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆ

Share happily:

ದಿನಾಂಕ 08-09-2017 ರಂದು ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭಾಗವಹಿಸಿದ 20 ವಿಧದ ಸ್ಪರ್ಧೆಯಲ್ಲಿ 14ರಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸೃಜನಾ ಡಿ.ನಾಯಕ (ಇಂಗ್ಲೀಷ ಕಥೆ ಹೇಳುವುದು,ಅಭಿನಯ ಗೀತೆ)ಅಕ್ಷತಾ ಎಸ್.ಭಟ್ಟ (ಕನ್ನಡ ಕಂಠಪಾಠ),ಕನ್ನಿಕಾ ಆರ್ ಭಟ್ಟ(ಹಿಂದಿ ಕಂಠಪಾಠ),ಶ್ರಾವಣಿ ಎಮ್ ಪೂಜೇರಿ (ಛದ್ಮ ವೇಷ),ವಿಘ್ನೇಶ ಹೊಸಮನೆ(ಚಿತ್ರಕಲೆ),ಶುಭಾ ವಿಷ್ಣು ನಾಯ್ಕ(ಕಥೆ ಹೇಳುವುದು,ಅಭಿನಯ ಗೀತೆ),ಜೀವನ ಪ್ರಕಾಶ ನಾಯ್ಕ(ಕ್ಲೇ ಮಾಡಲಿಂಗ್) ಆಶ್ರೀತಾ ಜಿ ಭಟ್ಟ (ಭಕ್ತಿಗೀತೆ),ಸ್ನೇಹಾ ಉದಯ ನಾಯ್ಕ (ಆಶುಭಾಷಣ)ಚಂದನ ಹೆಗq, ವಿಶೇಷ ಕಾಮತ (ಕ್ವಿಜ್) ಗೌರವ ಶ್ರವಣ ಭಟ್ಟ ,ಸಮೀರ ದಿವಾಣ, ಶ್ರೇಯಾ ಹೆಬ್ಬಾರ,ಸಂಜನಾ ಪಂಡಿತ, ವಿನುತಾ ನಾಯ್ಕ, ಸ್ನೇಹಾ ನಾಯ್ಕ,(ದೇಶಭಕ್ತಿಗೀತೆ)ಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶ್ರೇಯಾ ಹೆಬ್ಬಾರ(ಕನ್ನಡ…

Share happily:
Read More

ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Share happily:

ಇತ್ತೀಚೆಗೆ ಏಮ್.ಜಿ.ಸಿ ಪದವಿ ಪೂರ್ವ ಕಾಲೇಜು ಸಿದ್ಧಾಪುರದಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಧನುಷ ವಿ ಹೆಗಡೆ 200ಮೀ ಓಟ ಪ್ರಥಮ ಸ್ಥಾನ ಪಡೆದು, ರಮ್ಯಶ್ರೀ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು, ಶಿಲ್ಪಾ ಕಿಣಿ, ವಾಣಿಶ್ರೀ ಮತ್ತು ರಮ್ಯಶ್ರೀ ಥ್ರೋಬಾಲ್ ನಲ್ಲಿ, ಸನ್ನಿಧಿ ಪ್ರಭು ಬ್ಯಾಟ್ ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ. ರಮ್ಯಶ್ರೀ ಭರ್ಜಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ, ಮಯೂರ್ ನಾಯ್ಕ ಹರ್ಡಲ್ಸನಲ್ಲಿ ತೃತೀಯ ಸ್ಧಾನ ಪಡೆದಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Share happily:
Read More

ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಪುಟಾಣಿಗಳ ಪ್ರತಿಭಾ ಪ್ರದರ್ಶನ

Share happily:

ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನೆರವೇರಿತು. ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ಕೃಷ್ಣ ವೇಷ, ಹನುಮಂತನ ವೇಷ, ಬುಡಬುಡಕಿದಾಸ, ಬಳೆಗಾರನ ವೇಷ ಮುಂತಾದ ವೇಷಭೂಷಣ ಮಾಡಿ ಜನರಿಂದ ಮೆಚ್ಚುಗೆ ಗಳಿಸಿದರು.ನೃತ್ಯ, ಹಾಡು, ಕಥೆಗಳನ್ನು ಹೇಳಿ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹೊಮ್ಮಿಸಿದರು. ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಹಾಗೂ ಶೈಕ್ಷಣಿಕ ಸಲಹೆಗಾರರಾದ ಶ್ರೀ.ಆರ್.ಎಸ್.ದೇಶಭಂಡಾರಿಯವರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದು ಮಕ್ಕಳ ಪ್ರತಿಭೆಯ ಅನಾವರಣವನ್ನು ಕಣ್ತುಂಬಿಕೊಂಡರು.

Share happily:
Read More

ಅಂತರಾಷ್ಟ್ರೀಯಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಪಡೆದ ಅಭಿರಾಮ ಎ.ಎನ್.

Share happily:

ಕುಮಟಾದ ಬಾಡ ಗ್ರಾಮದ ನಿವಾಸಿ ಪ್ರಸ್ತುತ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಏಳನೇ ವರ್ಗದಲ್ಲಿ ಓದುತ್ತಿರುವ ಅಭಿರಾಮ ಎ.ಎನ್ ಈತನು ಹೈದ್ರಾಬಾದಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟಾ ಕ್ರೀಡಾಕೂಟದಲ್ಲಿ ಕಟಾದಲ್ಲಿ ಚಿನ್ನದ ಪದಕ ಹಾಗೂ ಗ್ರಾಂಡ್ ಚಾಂಪಿಯನ್ ಕುಮಿಟೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಇವನು ಕರಾಟೆ ಶಿಕ್ಷಕರಾದ ಅರವಿಂದ ನಾಯ್ಕ ಅವರಿಂದ ಕರಾಟೆ ಅಭ್ಯಾಸ ನಡೆಸಿರುತ್ತಾನೆ. ಇವನ ಸಾಧನೆಗೆ ಶಾಲಾ ಆಡಳಿತಮಂಡಳಿಯವರು, ಮುಖ್ಯಶಿಕ್ಷಕರು, ಶಿಕ್ಷಕವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Share happily:
Read More

ಕ್ರೀಡಾ ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೊಂಕಣ ಎಜ್ಯುಕೇಶನ್ ವಿದ್ಯಾರ್ಥಿಗಳು

Share happily:

ತಾಲೂಕಿನ ಮಿರ್ಜಾನಿನ ಬಿ.ಜಿ.ಎಸ್.ಕೇಂದ್ರೀಯ ವಿದ್ಯಾಲಯದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ನಡೆದ ಕ್ರೀಡಾ ಕಲೋತ್ಸವದಲ್ಲಿ ಭಾಗವಹಿಸಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರ ಹಾಗೂ ಸಿ.ವಿ.ಎಸ್.ಕೆ.ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಸರಸ್ವತಿ ವಿದ್ಯಾಕೇಂದ್ರ: ವಿಘ್ನೇಶ ಹೊಸಮನೆ ಪೇಂಟಿಂಗ್‍ನಲ್ಲಿ ಪ್ರಥಮ, ಶ್ರೀರಾಮ ಜಿ. ಪಟಗಾರ ಚಿತ್ರಕಲೆಯಲ್ಲಿ ದ್ವಿತೀಯ, ಚಂದನ ಹೆಗಡೆ, ವಿಶೇಷ ಕಾಮತ್ ರಸಪ್ರಶ್ನೆಯಲ್ಲಿ ಪ್ರಥಮ, ಹರ್ಷಿತಾ ಎ.ಗೌಡ ರಂಗೋಲಿಯಲ್ಲಿ ಪ್ರಥಮ, ಶುಭಾ, ವಿಭಾ,ಖುಷಿ,ದೀಪಾ,ಶ್ರೇಯಾ,ಸುಷ್ಮಿತಾ ಇವರ ತಂಡ ಜಾನಪದ ನೃತ್ಯದಲ್ಲಿ ಪ್ರಥಮ ಹಾಗೂ ಸಂಜನಾ ಪಂಡಿತ್À ಸ್ಮರಣಶಕ್ತಿಯಲ್ಲಿ ದ್ವಿತೀಯ ಸ್ಥಾನ ಹಾಗೂ ಬಾಲಕರ ಕಬಡ್ಡಿ ತಂಡ ದ್ವಿತೀಯ ಮತ್ತು ಬಾಲಕಿಯರ ಕಬಡ್ಡಿ ತಂಡ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆದು ವಿಶೇಷ ಗಮನ ಸೆಳೆದರು. ಸಿ.ವಿ.ಎಸ್.ಕೆ.ಪ್ರೌಢ ಶಾಲೆ: ಶಿಲ್ಪಾ ಪಟಗಾರ ರಂಗೋಲಿಯಲ್ಲಿ ಪ್ರಥಮ, ವರುಣ ಹೆಗಡೆ…

Share happily:
Read More

ಸರಸ್ವತಿ ವಿದ್ಯಾ ಕೇಂದ್ರದಲ್ಲಿ “ಗುರು ಪೂರ್ಣಿಮೆ”

Share happily:

ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಗುರುಪೂರ್ಣಿಮೆಯನ್ನು ವಿದ್ಯಾರ್ಥಿಪ್ರತಿನಿಧಿಗಳು ಮತ್ತು ಶಿಕ್ಷಕ ವೃಂದದವರು ವ್ಯಾಸಪೂಜೆ ನೆರವೇರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಆಷಾಢ ಮಾಸದ ಹುಣ್ಣಿಮೆಯಂದು ಪ್ರತೀವರ್ಷ ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಪ್ರಾರಂಭದಲ್ಲಿ ಕುಮಾರಿ ಶ್ರೇಯಾ ಹೆಬ್ಬಾರ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಏಳನೇ ವರ್ಗದ ವಿದ್ಯಾರ್ಥಿ ಶುಭಾ ವಿಷ್ಣು ನಾಯ್ಕ ಗುರುಪೂರ್ಣಿಮೆಯ ಕುರಿತಾಗಿ ಮಾತನಾಡುತ್ತ. ಒಂದಕ್ಷರ ಕಲಿಸಿದವನೂ ಗುರುವಾಗುತ್ತಾನೆ. ಅಜ್ಞಾನದ ಕಣ್ಣಿಗೆ ಜ್ಞಾನದ ಅಂಜನ ಹಚ್ಚಿ ಕಣ್ಣು ತೆರೆಸುವವನು ಗುರು. ನಮ್ಮ ವಿದ್ಯಾರ್ಥಿಜೀವನದಲ್ಲಿ ಕಲಿಸುವ ಶಿಕ್ಷಕರೇ ನಮಗೆ ಗುರುವಿನ ಸ್ಥಾನದಲ್ಲಿ ಇರುವವರು. ಶಿಕ್ಷಕರನ್ನು ಗೌರವಿಸುವವರು ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು. ಹಿರಿಯರನ್ನು ಗುರುಗಳನ್ನು ಗೌರವಿಸಬೇಕು ಎಂದರು. ಶಿಕ್ಷಕಿ ಸುವರ್ಣ ಮಯ್ಯರ್ ದಿಕ್ಸೂಚಿ ಮಾತನ್ನಾಡಿದರು. ಜಗತ್ತು ನಿಂತಿರುವುದು ಗುರುವಿನ ತತ್ವದ ಮೇಲೆ ಗುರು ಎಂದರೆ ಅಂಧಕಾರ ಕಳೆಯುವವನು, ಗುರುವೆಂದರೆ ಅಕ್ಷಯ, ಅದಮ್ಯ ಚೈತನ್ಯ, ಗುರುವಿಗೆ ವಂದನೆ ಮೊದಲು ಸಲ್ಲಬೇಕು…

Share happily:
Read More