ಕೊಂಕಣದಲ್ಲಿ ವಿದ್ಯಾರ್ಥಿವೇತನ ಹಾಗೂ ‘ಸಜ್ಜನಿ’ ಪ್ರಶಸ್ತಿ ಪ್ರದಾನ ಭವ್ಯ ಸಮಾರಂಭ

Share happily:

ಕುಮಟಾ :  ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನವರು ಪ್ರತಿವರ್ಷವೂ ನೀಡುವ ಶಿಷ್ಯವೇತನ-ಹಾಗೂ ಸಜ್ಜನಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸುನಿಲ್‍ ಪೈ ಟ್ರಸ್ಟಿಗಳು ಶ್ರೀ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‍ ಮಾದನಗೇರಿ ಕುಮಟಾರವರು ಉದ್ಘಾಟಿಸಿ, “ಕೊಂಕಣ ವಿದ್ಯಾಸಂಸ್ಥೆ ಎಂತಹ ದಡ್ಡ ವಿದ್ಯಾರ್ಥಿಯನ್ನಾದರೂ ಕೂಡ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಹಾಗೆ ತಯಾರುಮಾಡುವ ಬೋಧಕ ವರ್ಗ ಹಾಗೂ ಕ್ರಿಯಾಶೀಲ ಆಡಳಿತ ಮಂಡಳಿ ಹೊಂದಿದೆ. ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ಲಾಘನೀಯ ಸಂಸ್ಥೆಯಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, “ನಾವು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರವಲ್ಲದೆ ಸಂಸ್ಕಾರವನ್ನು ಮೈಗೂಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಉತ್ತಮ ಭಾವಿ ಪ್ರಜೆಗಳನ್ನು ಸಮಾಜಕ್ಕೆ ನೀಡುವುದು ನಮ್ಮ ಆದ್ಯ ಕರ್ತವ್ಯ. ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ” ಎಂದು ಶುಭ ಹಾರೈಸಿದರು. ಈ ಸಮಾರಂಭದಲ್ಲಿ ಕೊಂಕಣ ಸಂಸ್ಥೆಯವರು ಹಾಗೂ ದಾನಿಗಳು ಇಟ್ಟ…

Share happily:
Read More

ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರದ ವಿಶೇಷವಾಗಿ Maths Talent Show

Share happily:

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರದ ವಿಶೇಷವಾಗಿ ನಡೆದ Maths Talent Show ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು, ರುಬಿಕ್ಯ್ ಕ್ಯೂಬ್ , ಉಲ್ಟಾ ಮಗ್ಗಿ, ಗಣಿತಜ್ಞರ ಕುರಿತಾದ ಮಾಹಿತಿ, ಅಬಾಕಸ್ ಲೆಕ್ಕಗಳ ಮೂಲಕ ಮಕ್ಕಳು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ನಾಯ್ಕ, ಶಿಕ್ಷಕಿಯರಾದ ಮಹೇಶ್ವರಿ ನಾಯ್ಕ, ಉಷಾ ಭಟ್ಟ, ಉಷಾ ನಾಯ್ಕ, ಕಾವ್ಯಶ್ರೀ ಪಟಗಾರ ಸಹಕರಿಸಿದರು.

Share happily:
Read More

ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿಜ್ಞಾನ ರೋಚಕದ ಕುರಿತು ಮಾಹಿತಿ ಕಾರ್ಯಕ್ರಮ.

Share happily:

ಕುಮಟಾ : ಚಂದ್ರನಲ್ಲಿಗೆ ಮನುಷ್ಯ ಹೋಗಿದ್ದು 20ನೆಯ ಶತಮಾನದ ಮಹತ್ವದ ಬಾಹ್ಯಾಕಾಶ ಸಾಧನೆಯಾಗಿದೆ. ಚಂದ್ರನಿದ್ದಲ್ಲಿಗೆ ಮಾನವ ಪಯಣದ ದಾರಿಯೇ ರೋಚಕ ಅಂತಹ ಘಟನೆಗಳ ಬಗ್ಗೆ ಮಕ್ಕಳು ಕುತೂಹಲ ಬೆಳೆಸಿಕೊಳ್ಳಬೇಕಾಗಿದೆ ಎಂದು ಶಿಕ್ಷಕಿ ತನುಜಾ ನಾಯ್ಕ ಅಭಿಪ್ರಾಯಪಟ್ಟರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ನಡೆದ ಚಂದ್ರನ ಮೇಲೆ ಮಾನವ ಕಾಲಿಟ್ಟ ದಿನದ ಬಗ್ಗೆ ವಿವರಿಸುವ ವಿಶೇಷ ಕಾರ್ಯಕ್ರಮ ಹಾಗೂ “ಆಧುನಿಕ ತಳಿವಿಜ್ಞಾನದ ಪಿತಾಮಹ” ಎಂದೇ ಖ್ಯಾತರಾದ ಗ್ರೆಗೋರ್ ಜೊಹಾನ್ ಮೆಂಡಲ್ ಅವರ ಜನ್ಮದಿನದ ಕುರಿತಾಗಿ ಮಕ್ಕಳಿಗೆ ಮಾಹಿತಿ ನೀಡಿದರು. ಬಾಹ್ಯಾಕಾಶದಲ್ಲಿನ ಇದುವರೆಗಿನ ಪ್ರಮುಖ ಸಾಧನೆಯೆಂದರೆ ಚಂದ್ರನ ಮೇಲೆ ಮಾನವ ಪದಾರ್ಪಣೆ ಮಾಡಿದ್ದು. ಚಂದ್ರನ ಮೇಲೆ ಮನುಷ್ಯ ಇಳಿದು, ನಡೆದಾಡಿದ್ದು 20ನೆಯ ಶತಮಾನದ ಮಹತ್ವದ ಬಾಹ್ಯಾಕಾಶ ಸಾಧನೆಯಾಗಿದೆ. ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಪೂರ್ವದಲ್ಲಿ ಅದಕ್ಕಾಗಿ ಅನೇಕ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಯಿತು. ಚಂದ್ರನನ್ನು ಅಭ್ಯಸಿಸಲು ಮೊದಲು…

Share happily:
Read More

ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ಸಾಧನೆ.

Share happily:

ಕುಮಟಾ: ಶಾಂಕರ ತತ್ವ ಪ್ರಸಾರ ಸಮಿತಿ ಕುಮಟಾ ಇವರು ಜು.16 ರಂದು ತಾಲೂಕಿನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡ ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಶಿವ ಪಂಚಾಕ್ಷರ ಸ್ತೋತ್ರ ಹಾಗೂ ಶಂಕರಾಚಾರ್ಯ ವಿರಚಿತ ಭಜಗೋವಿಂದಂ ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ, ಸಾಧನೆ ಮಾಡಿದ್ದಾರೆ. 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಶಿವ ಪಂಚಾಕ್ಷರ ಸ್ತೋತ್ರ ಪಠಣ ಸ್ಫರ್ಧೆಯಲ್ಲಿ ಶ್ರೇಯಾ ಗಿರೀಶ ಹೆಬ್ಬಾರ ಪ್ರಥಮ ಸ್ಥಾನ ಪಡೆದರೆ, 6 ರಿಂದ 8ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಭಜಗೋವಿಂದಂ ಸ್ತೋತ್ರ ಪಠಣದ ಸ್ಪರ್ಧೆಯಲ್ಲಿ ಸೃಜನಾ ಡಿ ನಾಯಕ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡುವ ಜೊತೆಗೆ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಹಾಗೂ ಶಾಲಾ ಸಾಂಸ್ಕೃತಿಕ ಸಮಿತಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

Share happily:
Read More

ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿ ವಿಜ್ಞಾನಿಗಳಿಂದ ವಿಜ್ಞಾನ ದಿನ ಆಚರಣೆ

Share happily:

ಕುಮಟಾ: 1928 ರ ಫೆಬ್ರವರಿ 28 ರಂದು ಮಹಾನ್ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ವಿಶ್ವ ಪ್ರಸಿದ್ಧವಾದ “ರಾಮನ್ ಎಫೆಕ್ಟ”ನ್ನು ಜಗತ್ತಿಗೆ ಬಹಿರಂಗ ಪಡಿಸಿದರು. ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿಗಳೇ ವಿಜ್ಞಾನಿಗಳ ವೇಷ ಧರಿಸಿ ಆಯಾ ವಿಜ್ಞಾನಿಗಳ ಸಂಶೋಧನೆ ಆವಿಷ್ಕಾರಗಳ ಕುರಿತಾಗಿ ಬೆಳಕು ಚೆಲ್ಲುವ ಮೂಲಕ ಅರ್ಥಪೂರ್ಣವಾಗಿ ವಿಜ್ಞಾನ ದಿನವನ್ನು ಆಚರಿಸಿದರು. ಆಕಾಶ ನಾಯಕ ಸರ್.ಸಿ.ವಿ.ರಾಮನ್ ಪಾತ್ರದಲ್ಲಿ ಬಂದು ರಾಮನ್ ಎಫೆಕ್ಟ ಬಗ್ಗೆ ವಿವರಿಸಿ ಎಲ್ಲರನ್ನು ಮೆಚ್ಚಿಸಿದರೆ, ಚಂದನ ಹೆಗಡೆ ಜಗದೀಶ ಚಂದ್ರ ಬೋಸ್ ಆಗಿ, ವಿರಾಜ್ ಎಂ.ವಿಶ್ವೇಶ್ವರಯ್ಯರ ವೇಶ ತೊಟ್ಟು, ಸುದರ್ಶನ ಹೆಗಡೆ ವಿಕ್ರಂ ಸಾರಾಭಾಯಿಯ ರೂಪದಲ್ಲಿ ಹಾಗೂ ಮಯೂರ್ ನಾಯ್ಕ ಸಲೀಂ ಅಲಿಯಾಗಿ ಮಿಂಚಿ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಸಭೆಗೆ ಪರಿಚಯಿಸಿದರು. ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಉಷಾ ಭಟ್ಟ, ಮಹೇಶ್ವರಿ…

Share happily:
Read More

ಕೊಂಕಣ ಎಜ್ಯುಕೇಶನ್ ಟ್ರಸ್ಟನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Share happily:

ಕುಮಟಾ: ಸಂಸ್ಕಾರ ಹಾಗೂ ಸಂಪ್ರದಾಯದ ತಳಹದಿಯಲ್ಲಿ ಶಿಕ್ಷಣ ನೀಡಬೇಕು ಎಂಬ ಘನ ಉದ್ದೇಶ ಹೊತ್ತು ಮುನ್ನಡೆಯುತ್ತಿರುವ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಮಾತೃಮಂಡಳಿಯ ಸಹಯೋಗದಲ್ಲಿ ಡಾ. ಆರತಿ ವಿ. ಬಿ. ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಕೃತಿಯ ಸೌಂದರ್ಯ ಇರುವುದು ಸ್ತ್ರೀಯಲ್ಲಿ ಎಂಬುದು ಮಾತು ಸತ್ಯ, ಪ್ರತಿಯೊಂದರಲ್ಲಿಯೂ ಸುಂದರತೆ ಕಾಣುವ ಮಾತೆಯರಿಂದ ಮಾತ್ರವೇ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ವಿವರಿಸಿದ ಅವರು ಪುರುಷರಲ್ಲಿ ಹಾಗೂ ಸ್ತ್ರೀಯರಲ್ಲಿ ಅನೇಕ ವಿಧದ ವೈಶಿಷ್ಟ್ಯಗಳು ಇರುತ್ತವೆ. ನಾವು ನಾವಾಗಿಯೇ ಇರಬೇಕು. ಪುರುಷ ಸ್ತ್ರೀ ಆಗಲು ಪ್ರಯತ್ನಿಸಲಾಗದು, ಸ್ತ್ರೀ ಪುರುಷರಂತೆ ಆಗಲು ಪ್ರಯತ್ನಿಸುತ್ತಿರುವುದು ಹುಚ್ಚುತನ ಮಾತೃತ್ವ ಇರುವುದು ಸ್ತ್ರೀಯರಲ್ಲಿ, ಸ್ತ್ರೀ ಎಂಬುದೊಂದು ಶಕ್ತಿ ಯಾವ ಸ್ತ್ರೀ ತನ್ನೊಳಗಿನ ವಿದ್ಯೆ, ವಿಜ್ಞಾನ, ಕೌಶಲ, ಮಾತೃತ್ವವನ್ನು ಜಗತ್ತಿಗೆ ಕೊಟ್ಟಾಗ ಎಲ್ಲರೂ ನಮ್ಮನ್ನು ಮಾತೆಯರು ಎನ್ನುವರು. ತ್ಯಾಗ ಮಾಡುವ ಬಗ್ಗೆ ಕಲಿಸಿದವರು ಮಕ್ಕಳು ಅಂತಹ…

Share happily:
Read More

ಜಿಲ್ಲಾ ಮಟ್ಟದಲ್ಲಿ ಮಿಂಚಿದ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು

Share happily:

ಕುಮಟಾ: ತಾಲೂಕಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸದಾ ಮುಂದು ಎನಿಸಿಕೊಂಡಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗಲ್ಲಿ ಮಿಂಚಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿತಂದಿರುತ್ತಾರೆ. ಕಿರಿಯರ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶ್ರೇಯಾ ಗಿರೀಶ ಹೆಬ್ಬಾರ ಭಕ್ತಿಗೀತೆ ಸ್ಫರ್ಧೆಯಲ್ಲಿ ಪ್ರಥಮ, ಆಶುಭಾಷಣ ಸ್ಪರ್ಧೆಯಲ್ಲಿ ಸ್ನೇಹಾ ಉದಯ ನಾಯ್ಕ ಪ್ರಥಮಸ್ಥಾನ ಗಳಿಸಿರುತ್ತಾರೆ. ಹಿರಿಯರ ವಿಭಾಗದ ಸ್ಫರ್ಧೆಗಳಾದ ಇಂಗ್ಲೀಷ್‍ ಕಂಠಪಾಠ, ಹಾಗೂ ಸಾಭಿನಯಗೀತೆಯಲ್ಲಿ ಸೃಜನಾ ದತ್ತಾ ನಾಯ್ಕ ಪ್ರಥಮ ಸ್ಥಾನ ಪಡೆದು ತೃತೀಯ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ಪಲ್ಲವಿ ಶಾನಭಾಗ ತುಳು ಕಂಠಪಾಠ, ಅಕ್ಷತಾ ಶಾನಭಾಗ ಮರಾಠಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದು ಸಾದನೆ ಮಾಡಿದರೆ, ಸೋನಾಲಿ ಶೇಟ್, ನಿಖಿಲ್ ಪಟಗಾರ ಇವರು ಹಿರಿಯ…

Share happily:
Read More

ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮಕ್ಕೆ ನಾಂದಿ ಹಾಡಿದ ಕೊಂಕಣದ ‘ಪರಂಪರಾ ಕೂಟ’

Share happily:

ಕುಮಟಾ: ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ವಿನೂತನ ಪ್ರಯೋಗಗಳ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಕುಮಟಾದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ, ರೌಪ್ಯ ಮಹೋತ್ಸವದ ಈ ಸುಸಂದರ್ಭದಲ್ಲಿ, ‘ಹಳೆ ಬೇರು-ಹೊಸ ಚಿಗುರು’ ಎಂಬ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ಪರಿಸರದಲ್ಲಿ ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮ ಕಾರ್ಯಕ್ರಮ ಅಭೂತಪೂರ್ವವಾಗಿ ಜರುಗಿ ಯಶಸ್ವಿಯಾಯಿತು. ‘ದೀಪಾವಳಿ ಮೇಳ’ದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಗುರುಪ್ರಸಾದ ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಯಂತ ನಾಯ್ಕ ಉದ್ಘಾಟಿಸಿದರು. ಸಂಸ್ಥೆಯ ಕುರಿತಾಗಿ ಹೆಮ್ಮೆಯ ಮಾತಗಳನ್ನಾಡಿದ ಅವರು, ತಮ್ಮ ಮೊಮ್ಮಕ್ಕಳು ಇದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದು ಅವರಲ್ಲಿ ಸಂಸ್ಕೃತಿ ಮೂಡುವಲ್ಲಿ ಶಿಕ್ಷಕರು ಹಾಗೂ ಸಂಸ್ಥೆಯವರ ಕಾರ್ಯ, ಕಾಳಜಿ ಶ್ಲಾಘನೀಯ ಎಂದು ನಿದರ್ಶನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ರಜತ…

Share happily:
Read More

ಅತ್ಯುತ್ತಮ ಪ್ರದರ್ಶನ ತೋರಿ ಸಾಧನೆ ಮಾಡಿದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು

Share happily:

ಕುಮಟಾ: ಇಲ್ಲಿನ ಶಾಸಕರ ಮಾದರಿ ಶಾಲೆ ನೆಲ್ಲಿಕೇರಿಯಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ 10 ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಭಾಗವಹಿಸಿದ ಬಹುತೇಕ ಸ್ಪರ್ಧೆಗಳಲ್ಲಿ ಸ್ಥಾನಗಳಿಸುವ ಮೂಲಕ ಸಾಧನೆ ಮಾಡಿರುತ್ತಾರೆ. ಕಿರಿಯರ ವಿಭಾಗ ಪಲ್ಲವಿ ಶಾನಭಾಗ (ತುಳು ಕಂಠಪಾಠ ಪ್ರಥಮ), ನಿಖಿಲ ಪಟಗಾರ (ಚಿತ್ರಕಲೆ ಪ್ರಥಮ), ಶ್ರೇಯಾ ಹೆಬ್ಬಾರ (ಭಕ್ತಿ ಗೀತೆ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಲಘುಸಂಗೀತ ದ್ವಿತೀಯ), ಸುಮುಖ ನಾಯ್ಕ (ಕ್ಲೇ ಮಾಡಲಿಂಗ ದ್ವಿತೀಯ), ಸ್ನೇಹಾ ನಾಯ್ಕ (ಆಶುಭಾಷಣ ಪ್ರಥಮ, ಮರಾಠಿ, ಹಿಂದಿ, ಕಥೆಯಲ್ಲಿ ದ್ವಿತೀಯ), ಕೃತಿಕಾ ಭಟ್ಟ (ಧಾರ್ಮಿಕ ಪಠಣ ದ್ವಿತೀಯ) ಹಾಗೂ ದೇಶಭಕ್ತಿಗೀತೆಯಲ್ಲಿ ಶ್ರೀಷಾ, ದೀಕ್ಷಾ, ಸೃಷ್ಟಿ, ಶ್ರೀಲಕ್ಷ್ಮಿ, ನಂದನ, ಕುಶಾಲರವರ ತಂಡ ಪ್ರಥಮ ಬಹುಮಾನ ಪಡೆದಿದೆ. ಸ್ನೇಹಾ, ಸಮೀರ, ಕೃತಿಕಾ, ಪುಂಡಲೀಕ, ದ್ರುವ, ವಿನುತಾರವರ ತಂಡ…

Share happily:
Read More

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು

Share happily:

ಕುಮಟಾ: ಕರ್ನಾಟಕ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ೨೦೧೮–೧೯ನೇ ಸಾಲಿನ ಇಲಾಖಾ ಕ್ರೀಡಾಕೂಟದಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿನಾಂಕ ೦೪/೧೦/೨೦೧೮ ಗುರುವಾರ ಹೊನ್ನಾವರದ ಸೆಂಟ್ ಅಂಥೋನಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಈ ಸಾಧನೆ ಮಾಡಿರುತ್ತಾರೆ. ಕು.ನಯನಾ ರಾಮಕೃಷ್ಣ ಭಟ್ಟ ೧೦೦ಮೀ ಓಟದಲ್ಲಿ ಹಾಗೂ ೨೦೦ಮೀ.ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಎರಡೂ ಸ್ಪರ್ಧೆಯಲ್ಲಿಯೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲಾ ಮಟ್ಟಕ್ಕೆ ಇತಿಹಾಸ ನಿರ್ಮಿಸಿದ್ದಾಳೆ. ಅನನ್ಯಾ ಅರುಣ ಕಾಮತ ೪೦೦ಮೀ.ಓಟದಲ್ಲಿ ಪ್ರಥಮಸ್ಥಾನ ಪಡೆದು ಸಾಧನೆ ಮಾಡಿದರೆ ಗಗನ ಎನ್ ನಾಯ್ಕ ಬಾಲಕರ ೧೦೦ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ೪x೧೦೦ಮೀ ರೀಲೇಯಲ್ಲಿ ಸರಸ್ವತಿ ವಿದ್ಯಾಕೇಂದ್ರದಿಂದ ಕುಮಟಾ ತಾಲೂಕನ್ನು ಪ್ರತಿನಿಧಿಸಿದ್ದ ಅನನ್ಯಾ ಅರುಣ ಕಾಮತ,ನಯನಾ ಭಟ್ಟ,ಗಾಯತ್ರಿ ಗುನಗ,ಸೌಮ್ಯ ಪಟಗಾರ…

Share happily:
Read More