ಕೊಂಕಣದಲ್ಲಿ ವನಮಹೋತ್ಸವ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ, ರೋಟರಿ ಕ್ಲಬ್ ಕುಮಟಾ ಹಾಗೂ ಇಂಟರಾಕ್ಟ್ ಕ್ಲಬ್ ಸಿ.ವಿ.ಎಸ್.ಕೆ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾ ಅರಣ್ಯ ಇಲಾಖೆಯ ಏ.ಸಿ.ಎಫ್ ಪ್ರವೀಣಕುಮಾರ ಬಸ್ರೂರ್ ಅವರು ಜಾಗತಿಕ ತಾಪಮಾನದ ಏರಿಕೆಯ ಕುರಿತು ಮಾತನಾಡಿ, ಗಿಡ-ಮರಗಳ ಮಹತ್ವ ವಿವರಿಸಿದರು.  ಪ್ರಕೃತಿ ಮಾನವನ ಆಸೆಯನ್ನು ಪೂರೈಸುತ್ತದೆಯಲ್ಲದೇ ಅವರ ದುರಾಸೆಗಳನ್ನಲ್ಲ ಎನ್ನುವುದನ್ನು ವಿದ್ಯಾರ್ಥಿಗಳಿಂದ ಪ್ರಹಸನ ಮಾಡಿಸಿ ಮನಮುಟ್ಟುವಂತೆ ವಿವರಿಸಿದರು. ನಂತರ, ರೋಟರಿ ಅಸಿಸ್ಟಂಟ್ ಗವರ್ನರ್ ವಿನಾಯಕ ಬಾಳೇರಿ ಮಾತನಾಡಿ, ಶಾಲಾ ಇಂಟರಾಕ್ಟ್ ಕ್ಲಬ್ ಇದರ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಮಾತನಾಡಿ, ನಮ್ಮ ಸಂಸ್ಥೆಯ ಹಾಗೂ ರೋಟರಿ ಸಂಸ್ಥೆಯ ಸಂಬಂಧ ಕುರಿತು ವಿವರಿಸಿದರು. ರೋಟರಿ ಅಧ್ಯಕ್ಷರಾದ ಕಿರಣ ಕುವಾಳ್‌ಕರ್ ಮಾತನಾಡಿ, ಕುಮಟಾವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ…

Share happily:
Read More

ಕೊಂಕಣದ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶಾಲಾ ಸಂಸತ್ ಉದ್ಘಾಟನೆ

Share happily:

ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ನಮಗೆ ನೀಡಿದ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳ ಅರಿವು ನಮಗೆ ಇರಬೇಕು.ಹಕ್ಕುಗಳನ್ನು ಚಲಾಯಿಸುವ ಭರದಲ್ಲಿ ಕರ್ತವ್ಯ ಮರೆಯಬಾರದು ಎಂದು ಶ್ರೀ ಜಯದೇವ ಒಳಗುಂಡಿ ಹೇಳಿದರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ನಡೆದ 2018–19 ರ ಶಾಲಾ ಸಂಸತ್ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಅತ್ಯುತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಉತ್ತಮವಾಗಿದ್ದರೆ ಜೀವನ ಸರಳ ಸುಂದರವಾಗುವುದು. ಆದರ್ಶ ವ್ಯಕ್ತಿತ್ವವನ್ನು ಬೆಳಿಸಿಕೊಂಡು ಜೀವನ ಸಾಗಿಸಿದರೆ ಪರರಿಗೆ ಉಪಕಾರಿಯಾಗಿ ಬದುಕಿದರೆ ಜೀವನ ಸಾರ್ಥಕವಾಗುವುದು ಎಂದರು. ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಕಲಿಸುವ ಈ ಶಾಲೆ ಸಂಸ್ಕೃತಿ ಮಂದಿರ ಸರಸ್ವತಿ ವಿದ್ಯಾಕೇಂದ್ರ. ಅದು ಸಂಸ್ಕೃತಿ ಕೇಂದ್ರ ಎಂದು ಬಣ್ಣಿಸಿದ ಅವರು ಮಕ್ಕಳು ನಾಯಕತ್ವ ಬೆಳೆಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು. ಹಣ್ಣಿನ ಬುಟ್ಟಿಯಲ್ಲಿ ಒಳಿತನ್ನು ಆರಿಸುವಂತೆ, ವಿದ್ಯಾರ್ಥಿಗಳೇ ನೈಜ ಚುನಾವಣೆಯ ಮೂಲಕ…

Share happily:
Read More