ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸರಸ್ವತಿ ವಿದ್ಯಾಕೇಂದ್ರ

Share happily:

ದಿನಾಂಕ 06-10-2017 ರಂದು ಕಾರವಾರದ ಬಾಲಮಂದಿರ ಸಂಸ್ಥೆಯಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಶಿಕ್ಷಣ ಇಲಾಖಾ ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿರುತ್ತಾರೆ. ಸೃಜನಾ ಡಿ.ನಾಯಕ ಇಂಗ್ಲೀಷ ಕಂಠಪಾಠ ಮತ್ತು ಅಭಿನಯ ಗೀತೆಯಲ್ಲಿ ಪ್ರಥಮ, ಕಥೆ ಹೇಳುವುದು ದ್ವಿತೀಯ, ಅಕ್ಷತಾ ಎಸ್.ಭಟ್ಟ ಕನ್ನಡ ಕಂಠಪಾಠ ಪ್ರಥಮ, ವಿಘ್ನೇಶ ಹೊಸಮನೆ ಚಿತ್ರಕಲೆಯಲ್ಲಿ ಪ್ರಥಮ, ಸ್ನೇಹಾ ಉದಯ ನಾಯ್ಕ ಆಶುಭಾಷಣದಲ್ಲಿ ಪ್ರಥಮಸ್ಥಾನ ಗಳಿಸಿರುತ್ತಾರೆ.

ಶುಭಾ ವಿಷ್ಣು ನಾಯ್ಕ ಅಭಿನಯ ಗೀತೆಯಲ್ಲಿ ದ್ವಿತೀಯ ಕಥೆ ಹೇಳುವುದರಲ್ಲಿ ತೃತೀಯಸ್ಥಾನ, ಆಶ್ರೀತಾ ಜಿ ಭಟ್ಟ ಭಕ್ತಿಗೀತೆ ದ್ವಿತೀಯ, ಜೀವನ ಪ್ರಕಾಶ ನಾಯ್ಕ ಕ್ಲೇ ಮಾಡಲಿಂಗ್ ನಲ್ಲಿ ದ್ವಿತೀಯ, ಗೌರವ ಭಟ್ , ಸಮೀರ ದಿವಾಣ, ಸ್ನೇಹಾ ನಾಯ್ಕ, ಸಂಜನಾ ಪಂಡಿತ, ವಿನುತಾ ನಾಯ್ಕ, ಶ್ರೇಯಾ ಹೆಬ್ಬಾರ ಇವರು ದೇಶ ಭಕ್ತಿಗೀತೆಯಲ್ಲಿ ದ್ವಿತೀಯ, ಚಂದನ ಹೆಗಡೆ ವಿಶೇಷ ಕಾಮತ್ ರಸಪ್ರಶ್ನೆಯಲ್ಲಿ ದ್ವಿತೀಯುಸ್ಥಾನ ಗಳಿಸಿರುತ್ತಾರೆ.

ಶ್ರಾವಣಿ ಎಮ್ ಪೂಜೇರಿ ಛದ್ಮವೇಷ ತೃತೀಯ, ಕನ್ನಿಕಾ ಆರ್.ಭಟ್ಟ ಹಿಂದಿ ಕಂಠಪಾಠದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಇವರ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರಾದ ಸುಜಾತಾ ನಾಯ್ಕ ಹಾಗೂ ಆಡಳಿತ ಮಂಡಳಿಯವರು, ಶಾಲಾ ಸಾಂಸ್ಕøತಿಕ ಸಮಿತಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Share happily:

Related posts

Leave a Comment