ಕೊಂಕಣದ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾರಂಭೋತ್ಸವ

Share happily:

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೊಂಕಣ ಎಜ್ಯುಕೇಶನ್ ಟ್ರಸ್ಟ ಕುಮಟಾದ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಬುಧವಾರ ಜರುಗಿತು.

ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಪ್ರಾಸ್ತವಿಕ ನುಡಿಗಳ ಮೂಲಕ ಹೊಸ ವಿದ್ಯಾಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಕುಮಾರಿ ಶಾಹೀನ್ ಶೇಖ್, ಕುಮಾರ ಶೀನಿವಾಸ ಶ್ಯಾನಭಾಗ, ಶ್ರೀಧರ ಹೆಗಡೆ, ಮನೀಷ್ ಉಗ್ರು, ಕುಮಾರಿ ಪೂಜಾ ಪಂಡಿತ, ಚಿತ್ರಾ ನಾಯಕ, ದಿವ್ಯಾ ಭಟ್ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ತಪಸ್ಯ ಲರ್ನಿಂಗ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಶ್ರೀಮತಿ ಪಿ.ಥಾಮಸರವರು ಮುಖ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಥಿಗಳು ನಿಶ್ಚಿತವಾದ ಗುರಿಯನ್ನು ಹೊಂದಿರಬೇಕು ಪಾಲಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡವನ್ನು ಹೇರಬಾರದು ವೈಯಕ್ತಿಕ ಸಮಸ್ಯೆಗಳನ್ನು ತಂದೆ-ತಾಯಿಯರು ಮಕ್ಕಳ ಎದುರು ಚರ್ಚಿಸದೇ ಅವರನ್ನು ಪ್ರೋತ್ಸಾಹಿಸಿ ಉತ್ತಮ ಶಿಕ್ಷಣ ನೀಡಬೇಕು ಎಂದು ಉಪಸ್ಥಿತರಿದ್ದ ಪಾಲಕರಿಗೆ ಸೂಚಿಸಿದರು.

ವಾಣಿಜ್ಯ ವಿದ್ಯಾರ್ಥಿಗಳಿಗೆ ಶ್ರೀ ಕಾರ್ತಿಕ ರಾಜು ಅವರು ಅಮೂಲ್ಯ ಸಲಹೆಯನ್ನು ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಾಶೀನಾಥ ನಾಯಕರವರು ವಹಿಸಿದ್ದರು. ಪ್ರಾಚಾರ್ಯರಾದ ಡಾ. ಸುಲೋಚನಾ ರಾವ್. ಬಿ. ಸ್ವಾಗತಿಸಿ ಕಾಲೇಜಿನ ನಿಭಂದನೆಗಳನ್ನು ತಿಳಿಸಿದರು.

ವೇದಿಕೆಯಲ್ಲಿ ವಿಶ್ವಸ್ಥರಾದ ರಮೇಶ ಪ್ರಭು ಹಾಗೂ ಡಿ.ಡಿ. ಕಾಮತ ಉಪಸ್ಥಿತರಿದ್ದರು.ಪ್ರೋ ಶಿವಾನಂದ ಭಟ್ಟರವರು ಎಲ್ಲ ಉಪನ್ಯಾಸಕ ಹಾಗೂ ಸಿಬ್ಬಂಧಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಚಿದಾನಂದ ಭಂಡಾರಿಯವರು ವಂದನಾರ್ಪಣೆಗೈದರು. ಕುಮಾರಿ ಭಾಗ್ಯಶ್ರಿ ಪ್ರಾರ್ಥಿಸಿದರು.

Share happily:

Related posts

Leave a Comment