ಕೊಂಕಣದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ವಾಣಿಜ್ಯ ಕಾರ್ಯಾಗಾರ

Share happily:

ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯ ವಿಭಾಗ ಲೆಕ್ಕಶಾಸ್ತ್ರ ಮತ್ತು ವ್ಯಹಾರ ಅಧ್ಯಯನ ವಿಷಯಗಳ ಒಂದು ದಿನದ ಕಾರ್ಯಾಗಾರ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಎರ್ಪಡಿಸಲಾಗಿತ್ತು.

ಜಿಲ್ಲೆಯ ಎಲ್ಲಾ ವಾಣಿಜ್ಯ ಉಪನ್ಯಾಸಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಕೆ.ಟಿ.ಭಟ್ ರವರು ಕಾರ್ಯಾಗಾರ ವನ್ನು ಉದ್ಘಾಟಿಸಿ ಶಿಕ್ಷಕರಲ್ಲಿ ಶೈಕ್ಷಣಿಕ ಗುಣಮಟ್ಟವಿರಬೇಕು ಎಂಬ ಬಗ್ಗೆ ಮಾತಾನಾಡಿದರು.

ಲೆಕ್ಕಶಾಸ್ತ್ರದ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋ. ಡಿ. ಎನ್. ಭಟ್, ವ್ಯವಹಾರ ಅಧ್ಯಯನದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಆರ್.ಎಚ್.ನಾಯಕ್ ರವರು ಪ್ರಥಮ ಪಿ.ಯು. ಬದಲಾದ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸರಸ್ವತಿ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಡಾ ಸುಲೋಚನಾ ಬಿ. ರಾವ್ ಕಾರ್ಯಗಾರವನ್ನು ಸ್ವಾಗತಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕ ವಹಿಸಿದ್ದರು.

ಪ್ರಾಂಶುಪಾಲರ ಸಂಘದ ಉಪಧ್ಯಾಕ್ಷರಾದ ಶ್ರೀ ಎಸ್.ಜಿ.ಭಟ್, ಪ್ರಾಚಾರ್ಯ ಸಂಘದ ಕಾರ್ಯದರ್ಶಿ ಶ್ರೀ ಪ್ರಕಾಶ ರಾಣೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಎನ್.ಜಿ.ಹೆಗಡೆ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಅದೇ ಸಂಭರ್ದದಲ್ಲಿ ಕಾಲೇಜಿಗೆ ಭೇಟಿ ನೀಡಿದ ಶ್ರೀ ಕೆ.ಟಿ.ಭಟ್ ರವರು ಜೀವನದ ಮೌಲ್ಯದ ಬಗ್ಗೆ ಪ್ರಥಮ ಮತ್ತು ದ್ವಿತೀಯ ಪಿ.ಯು. ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.

Share happily:

Related posts

Leave a Comment