ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ

Share happily:

ಇತ್ತೀಚೆಗೆ ಕುಮಟಾ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪಿ.ಯು. ಕಾಲೇಜಿನ ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ನಡೆಯಿತು. ಅತಿಥಿಗಳಾಗಿ ಶಿವಮೊಗ್ಗದ ರೆಸಿಡೆಂಟ್ ಸರ್ಜನ್ ಮತ್ತು ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಹಳೇ ವಿದ್ಯಾರ್ಥಿಯಾದ ಡಾ. ಮಧುಕರ ನಾಯ್ಡು ಅವರು ಆಗಮಿಸಿದ್ದರು.

ಪ್ರಾಂಶುಪಾಲರಾದ ಡಾ. ಸುಲೋಚನಾ ರಾವ್.ಬಿ ಸ್ವಾಗತಿಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಕಾರ್ಯದರ್ಶಿಗಳಾದ ಶ್ರೀ ಮುರಳೀಧರ ಪ್ರಭುರವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಡಾ. ಮಧುಕರ ನಾಯ್ಡು ಅವರ ಅಮೋಘ ಸಾಧನೆಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮತ್ತು ತಮ್ಮ ಸಾಧನೆಗೆ ಕಾರಣವಾದ ಹಲವೊಂದು ಅಂಶಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಅವರ ಮುಂದಿನ ಗುರಿಯನ್ನು ಸ್ಪಷ್ಟ ಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ, ಉಪನ್ಯಾಸಕರು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಸಲಹೆವಿತ್ತರು. ಉಪನ್ಯಾಸಕರಾದ ಶಿರಸಿ ಮಾರಿಕಾಂಬಾ ಕಾಲೇಜಿನ ನಿವೃತ್ತ ಪ್ರಾಶುಂಪಾಲರಾದ ಶ್ರೀ ಡಿ.ಎನ್.ಭಟ್‍ರವರು ಶಿಕ್ಷಣಕ್ಕೂ ಜೀವನಕ್ಕೂ ಇರುವ ಸಮ್ಯತೆಯನ್ನು ಮತ್ತು ಹಿರಿಯರಿಗೆ ಗೌರವ ನೀಡುವ ಬಗ್ಗೆ ವಿವರಿಸಿದರೆ, ಉಪನ್ಯಾಸಕರಾದ ಚಿದಾನಂದ ಭಂಡಾರಿಯವರು ವಿದ್ಯಾರ್ಥಿಗಳಿಗೆ ಡಾ. ಮಧುಕರ ನಾಯ್ಡುರವರು ಆದರ್ಶರಾಗಬೇಕೆಂಬ ಬಗ್ಗೆ ತಿಳಿಸಿದರು.

ಅಧ್ಯಕ್ಷೀಯ ಮಾತುಗಳಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕಾಶೀನಾಥ ನಾಯಕರವರು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸುವಂತೆ ಕರೆನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಧರಾದ ಶ್ರೀ ಡಿ.ಡಿ.ಕಾಮತ, ಶ್ರೀ ವಿಠ್ಠಲ ನಾಯಕ, ಶ್ರೀ ರಾಮನಾಥ ಕಿಣಿ, ಶೈಕ್ಷಣಿಕ ಸಲಹೆಗಾರದ ಶ್ರೀ ಆರ್.ಎಚ್.ದೇಶಭಂಡಾರಿ ಉಪಸ್ಧತರಿದ್ದರು.

ಉಪನ್ಯಾಸಕರಾದ ಗಾಯತ್ರಿ ಕಾಮತ ವಂದಿಸಿದರು ಮತ್ತು ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

Share happily:

Related posts

Leave a Comment