SSLC ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಾಗಾರ

Share happily:

ಇಲ್ಲಿನ ಕೊಂಕಣ ಎಜ್ಯುಕೇಶನ್ ಸಂಸ್ಥೆಯು ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಲ್ಲಿರಬಹುದಾದ ಸಂಶಯಗಳಿಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಎರಡು ದಿನಗಳ ತಾಲೂಕಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಇ.ಮುಲ್ಲಾರವರು, ಅತ್ಯುತ್ತಮ ಶೈಕ್ಷಣಿಕ ಕಾರ್ಯಾಗಾರ ಇದಾಗಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು, ರಾಜ್ಯಮಟ್ಟದಲ್ಲಿ ಕುಮಟಾವನ್ನು ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೊಂಕಣ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ ವಹಿಸಿದ್ದರು. ನಂತರ ಮಾತನಾಡಿದ ಅವರು, ಸಮಯದ ಸದುಪಯೋಗ ಹಾಗೂ ಅತೀ ಹೆಚ್ಚು ಅಂಕ ಪಡೆದು ಕೀರ್ತಿ ತರುವಂತಹ ಶೈಕ್ಷಣಿಕ ಕಾರ್ಯಾಗಾರ ಇದಾಗಿದ್ದು ಇದರ ಲಾಭ ಪಡೆದುಕೊಳ್ಳಲು ಕರೆ ನೀಡಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಚ್.ಎನ್.ಪೈ, ವಾಸುದೇವ ನಾಯ್ಕ, ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ದಯಾನಂದ ಭಂಡಾರಿ, ಪ್ರಾಚಾರ್ಯೆ ಸುಲೋಚನಾ ರಾವ್, ಅರ್ಜುನ್ ಅಕಾಡೆಮಿ ಸಂಸ್ಥೆಯ ಸೂರ್ಯಕಾಂತ, ಶ್ರೀವತ್ಸ, ಸಂತೋಷ, ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು, ಸಾವಿತ್ರಿ ಹೆಗಡೆ, ಶೈಕ್ಷಣಿಕ ಸಲಹೆಗಾರರಾದ ಲೀಲಾವತಿ ನಾಯಕ, ಆರ್.ಎಚ್.ದೇಶಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕ ಚಿದಾನಂದ ಭಂಡಾರಿ ಪ್ರಾಸ್ತಾವಿಸಿದರು, ಶಿಕ್ಷಕ ಶಿವಾನಂದ ಭಟ್ಟ ಧನ್ಯವಾದ ಸಮರ್ಪಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು, ವಿದ್ಯಾರ್ಥಿನಿ ಬಿ.ವಿ.ದಿಶಾ ಸಂಗಡಿಗರು ಪ್ರ್ರಾರ್ಥಿಸಿದರು.

Share happily:

No Comment.