Share happily:

ಕುಮಟಾ: ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರೊಟ್ಟಿಗೆ ಒಳ್ಳೆಯ ಚಾರಿತ್ರತ್ರೆಯ ನಿರ್ಮಾಣ ಮಾಡಿಕೊಂಡು ದೇಶಭಕ್ತರಾಗಬೇಕು, ಆಗಲೇ ಜೀವನ ಸಾರ್ಥಕ ಎಂದು ಹುಬ್ಬಳ್ಳಿಯ ಶ್ರಿÃಮಾತಾ ಆಶ್ರಮದ ಮಾತಾಜೀ ತೇಜೋಮಯಿ ಅವರು ನುಡಿದರು.

ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನವರು ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಾಧನೆಯ ಪ್ರಯತ್ನ ಇಲ್ಲಿಗೇ ಸೀಮಿತಗೊಳ್ಳದೆ ಮುಂದೆಯೂ ನಿರಂತರವಾಗಿ ಸಾಗಬೇಕು. ಸಾಧನೆಗೆ ಜೀವನದಲ್ಲಿ ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ, ಅವರ ಉನ್ನತ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಿ, ಸಾರ್ಥಕತೆಯ ಜೀವನವನ್ನು ಬಾಳಿ. ವಿವೇಕಾನಂದರ ದಯೆ ತಮ್ಮ ಮೇಲೆ ಸದಾ ಇರಲಿ ಎಂದು ವಿವೇಕಾನಂದರ ಕೆಲವು ದೃಷ್ಟಾಂತಗಳÀನ್ನು ಮಾರ್ಮಿಕವಾಗಿ ವಿವರಿಸುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರವಾರದ ಶ್ರಿÃ ರಾಮಕೃಷ್ಣ ಆಶ್ರಮದ ಶ್ರಿÃ ಭವೇಶಾನಂದ ಸ್ವಾಮೀಜಿಯವರು ಮಾತನಾಡಿ, ಕೊಂಕಣ ಎಂಬುದು ಸರಸ್ವತಿಯ ವಿದ್ಯಾಲಯ. ಇಲ್ಲಿ ಅಭ್ಯಾಸ ಮಾಡುವವರು ಭಾಗ್ಯವಂತರು. ಈ ತಮ್ಮ ಸಾಧನೆ ವಿದ್ಯಾರ್ಥಿ ಜೀವನದ ಮೊದಲ ಗುರುತರ ಹೆಜ್ಜೆ. ಸಂಸ್ಕಾರಯುತ ಶಿಕ್ಷಣದಿಂದ ಜೀವನದ ಹಂತ-ಹಂತದಲ್ಲಿಯೂ ಸಾಧನೆ ಮಾಡುವ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸುತ್ತಿರುವ ಕೊಂಕಣ ಸಂಸ್ಥೆಗೆ ಶ್ರೇಯಸ್ಸಾಗಲಿ, ಸಮಾಜಕ್ಕೆ ಆದರ್ಶವಾಗಲಿ ಎಂದು ಆಶೀರ್ವದಿಸಿದರು. ಮುಖ್ಯ ಅತಿಥಿಗಳಾದ ಹರೀಶ ಗಾಂವಕರ ನಿವೃತ್ತ ಡಿಡಿಪಿಐ ಕಾರವಾರ ಇವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಕೋರಿ, ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ 625 ಕ್ಕೆ 625 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಕುಮಾರಿ ದೀಕ್ಷಾ ಪಾಂಡುರಂಗ ನಾಯ್ಕ, ಕುಮಾರ ಕಾರ್ತಿಕ ಭಟ್ಟ, ಹಾಗೂ ಕುಮಾರಿ ಮೇಘನಾ ವಿಷ್ಣು ಭಟ್ಟ ಇವರುಗಳಿಗೆ ತಲಾ ರೂ. 25,000/-, ರಾಜ್ಯಮಟ್ಟದ ಟಾಪ್ 10 ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ 29 ವಿದ್ಯಾರ್ಥಿಗಳಿಗೆ ತಲಾ ರೂ. 10,000/-, ಅಲ್ಲದೆ ಉಳಿದ ಸಾಧಕ ವಿದ್ಯಾರ್ಥಿಗಳೊಳಗೂಡಿ ಸರಿಸುಮಾರು ಐದು ಲಕ್ಷ ರೂ.ಗಳನ್ನು ಕೊಂಕಣ ಸಂಸ್ಥೆಯು ಪುರಸ್ಕಾರ ರೂಪದಲ್ಲಿ ನೀಡಿ ಗೌರವಿಸಿದೆ. ಹಾಗೆಯೇ, ಪ್ರತಿ ವರ್ಷದಂತೆ ವಿದ್ಯಾರ್ಥಿಗಳ ಸಾಧನೆಗೆ ಕಾರಣೀಭೂತರಾದ ಶಿಕ್ಷಕವೃಂದವನ್ನೂ ಸಂಸ್ಥೆ ಗೌರವಿಸಿ ತನ್ನ ಘನತೆ ಹೆಚ್ಚಿಸಿಕೊಂಡಿದೆ.

ಸಂಸ್ಥೆಯ ವಾಡಿಕೆಯಂತೆ, ವಿದ್ಯಾರ್ಥಿಗಳಿಗೆ ಮಾದರಿಯಾಗಿ ಶಾಲೆಯ ಪೂರ್ವ ವಿದ್ಯಾರ್ಥಿನಿ ಡಾ.ದೀಕ್ಷಾ ಪಿ. ಭಟ್ಟ ಎಂ.ಬಿ.ಬಿ.ಎಸ್., ಎಂ.ಎಸ್., ಒ.ಬಿ.ಜಿ. ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ, ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಪ್ರಾರಂಭದ ಹನ್ನೆರಡು ವರ್ಷಗಳ ಶಿಕ್ಷಣ ಈ ಸಂಸ್ಥೆಯಲ್ಲಿಯೇ ಮಾಡಿದ್ದೇನೆ. ನನ್ನ ವೃತ್ತಿ ಜೀವನಕ್ಕೆ ಅವಶ್ಯವಾದ ಭದ್ರ ಬುನಾದಿಯನ್ನು ಹಾಕಿಕೊಟ್ಟ ನನ್ನ ಹೆಮ್ಮೆಯ ಈ ಸಂಸ್ಥೆಗೆ ನಾನು ಚಿರಋಣಿ. ನೂರು ಪ್ರತಿಶತ ಫಲಿತಾಂಶ ದಾಖಲಿಸುವುದು ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈಗ ಬಂದ ಫಲಿತಾಂಶ ಇದಕ್ಕೆ ಹೊಸತೇನಲ್ಲ. ಪ್ರತಿ ವರ್ಷವೂ ಅಚ್ಚರಿಯ ಉತ್ಕೃಷ್ಟ ಫಲಿತಾಂಶ ದಾಖಲೆಗೆ ಈ ಸಂಸ್ಥೆ ಪ್ರಸಿದ್ಧಿ. ಶಿಕ್ಷಕರ ಕಾರ್ಯತತ್ಪರತೆ ಹಾಗೂ ಆಡಳಿತ ಮಂಡಳಿಯ ಸಮಯೋಚಿತ ಕಾರ್ಯವೈಖರಿ, ಸಂಸ್ಥೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣದೊಂದಿಗೆ ವರ್ಷದಿಂದ ವರ್ಷಕ್ಕೆ ದಾಖಲೆಯ ಫಲಿತಾಂಶ ನೀಡುತ್ತಿರುವದಕ್ಕೆ ಮುಖ್ಯ ಕಾರಣವಾಗಿದ್ದು ಅದು ಕೊಂಕಣವನ್ನು ಉಳಿದ ಸಂಸ್ಥೆಗಳಿಗಿಂತ ವಿಭಿನ್ನವಾಗಿಸಿದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, ಈ ಶ್ರೇಷ್ಠ ಸಾಧನೆಗೆ ವಿದ್ಯಾರ್ಥಿಗಳ ಸತತ ಅಭ್ಯಾಸ, ಶಿಕ್ಷಕ ವರ್ಗದವರ ನಿರಂತರ ಮಾರ್ಗದರ್ಶನ, ಹಾಗೂ ಗುರುಹಿರಿಯರ ಆಶೀರ್ವಾದದೊಟ್ಟಿಗೆ ಸ್ಥಳದೈವ ವೀರನಾರಾಯಣನ ಅನುಗ್ರಹವೂ ಕಾರಣ ಎಂಬ ಬಲವಾದ ನಂಬಿಕೆ ನಮ್ಮದು. ಈ ದಾಖಲೆಯ ಫಲಿತಾಂಶವು ಸಮಾಜದಲ್ಲಿ ಸಂಸ್ಥೆಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಪರಿಣಾಮ ಈ ಹಿಂದಿನ ವರ್ಷಕ್ಕಿಂತ ಈ ಬಾರಿ ನಮ್ಮ ಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳಲ್ಲಿಯೂ ಪ್ರವೇಶಾತಿಯನ್ನು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದ್ದು ನಮಗೆಲ್ಲರಿಗೂ ಸಂತೋಷವನ್ನು ತಂದಿದೆಯಲ್ಲದೆ ಸಂಸ್ಥೆಯ ಮತ್ತು ಶಿಕ್ಷಕರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು, ಮುಂದಿನ ದಿನಗಳಲ್ಲಿಯೂ ಸಂಸ್ಥೆಯು ಉತ್ತಮ ಫಲಿತಾಂಶ ನೀಡುವ ಪರಂಪರೆಯನ್ನು ಕಾಯ್ದುಕೊಂಡು ಬದಲಾದ ಶಿಕ್ಷಣ ನೀತಿಗೆ ಒಗ್ಗಿಕೊಂಡು ಮುನ್ನಡೆಯೋಣ ಎಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮೇಘನಾ ಭಟ್ಟ ಮಾತನಾಡಿ, ಶಾಲೆಯ ಶಿಕ್ಷಕರ ಹಾಗೂ ನಮ್ಮ ಅವಿರತ ಪರಿಶ್ರಮ ಈ ಎಲ್ಲಾ ಸಾಧನೆಗೆ ಕಾರಣ ಎನ್ನುತ್ತ, ಶಾಲೆಯಲ್ಲಿ ಕಳೆದ ಹಿಂದಿನ ದಿನಗಳ ಸವಿ ನೆನಪನ್ನು ಮೆಲುಕಿದಳು. ಪುರಸ್ಕಾರ ಪಡೆದ ಶಿಕ್ಷಕರ ಪರವಾಗಿ ಶಿಕ್ಷಕ ಶಿವಾನಂದ ಭಟ್ಟ ಮಾತನಾಡಿದರು. ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು ಸ್ವಾಗತಿಸಿದರು, ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇಶ ಹಾಗೂ ವಿಶೇಷತೆಗಳನ್ನು ವಿವರಿಸಿದರು. ಸಂಸ್ಥೆಯ ವಿಶ್ವಸ್ಥರಾದ ಎನ್.ಬಿ.ಶಾನಭಾಗ, ಡಿ.ಡಿ.ಕಾಮತ, ಶೈಕ್ಷಣಿಕ ಸಲಹೆಗಾರರಾದ ಬಿ.ಎಸ್.ಗೌಡ, ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ಕಿರಣ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಭೂಮಿಕಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು, ಡಿ.ಡಿ.ಕಾಮತ ವಂದಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು.

Share happily:

Related posts

Leave a Comment