ಕೊಂಕಣದಲ್ಲಿ ಜಿಲ್ಲಾಮಟ್ಟದ ಕಾರ್ಯಾಗಾರ

NEP 2020 - Analysis and Implementation
Share happily:

ಕುಮಟಾ 22-11-2021: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ವಿಶ್ಲೇಷಣೆ ಮತ್ತು ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಏರ್ಪಡಿಸಲಾಗಿತ್ತು.

ಶ್ರೀ ಎಸ್.ಆರ್.ಮನಹಳ್ಳಿ ವಿಶ್ರಾಂತ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ ಅವರು ಕಾರ್ಯಗಾರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಾಷ್ಟೀಯ ಶಿಕ್ಷಣ ನೀತಿ ಇದರ ಅನುಷ್ಠಾನದ ಕುರಿತು ನಿಖರ ಮಾಹಿತಿಗಳನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಭಾರತದಲ್ಲಿ ಮಕ್ಕಳೇ ದೇಶದ ಆಸ್ತಿ ಎಂದು ತಿಳಿದಿರುವಾಗ ಈ ಶಿಕ್ಷಣ ಭಾರತದಲ್ಲಿ ಮುಂದೊಂದು ದಿನ ಹೊಸ ಕ್ರಾಂತಿಯನ್ನುಂಟುಮಾಡಿ ಭಾರತ ವಿಶ್ವಗುರು ಆಗಲು ಸಾಧ್ಯ, ಸ್ವಾವಲಂಬಿತ ಭಾರತ ಆಗಲು ಸಾಧ್ಯ ಎಂದು ಹಲವು ಉದಾಹರಣೆಗಳ ಮೂಲಕ ವಿಶ್ಲೇಷಿದರು. ವಿದ್ಯಾರ್ಥಿಗಳು ಯಾವ ಒತ್ತಡಕ್ಕೆ ಒಳಗಾಗದೇ ನಲಿಕಲಿವ ಹಾಗೂ ಸೃಜನಶೀಲ ವ್ಯಕ್ತಿತ್ವ ನಿರ್ಮಾಣದ ಗುಣಮಟ್ಟದ ಶಿಕ್ಷಣ ಇದಾಗಿದೆ ಎಂದರು. ರಾಷ್ಟ್ರೀಯ ಶಿಕ್ಷಣದ ಎಂಟು ಹಂತಗಳನ್ನು ವಿವರಿಸಿದರು.

ಟ್ರಸ್ಟಿನ ಅಧ್ಯಕ್ಷರಾದ ವಿಠ್ಠಲ ನಾಯಕ ಅವರು ಅಧ್ಯಕ್ಷತೆ ವಹಿಸಿ ಬದಲಾದ ಶಿಕ್ಷಣದಿಂದ ನಾವು ಅದರ ಅನುಭವ ಮಾರ್ಗದರ್ಶನ ಪಡೆದು ಹೊಸ ಶಿಕ್ಷಣ ನೀತಿಗೆ ಸಜ್ಜಾಗೋಣ. ಇದು ಭವ್ಯ ಭಾರತ ನಿರ್ಮಿಸಲಿ ಎಂದು ಆಶಿಸಿದರು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಹೆಚ್.ಎಲ್.ಸತೀಶ ಮೈಸೂರು ಎನ್.ಸಿ.ಇ.ಆರ್ ಟಿ ಪಠ್ಯಪುಸ್ತಕ ಸಮಿತಿ ಸದಸ್ಯರು ಈ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರದ ಕುರಿತು ವಿವರವಾಗಿ ವಿವರಿಸಿದರು. ಡಾ.ಆರ್.ಜಿ.ಹೆಗಡೆ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ದಾಂಡೇಲಿ ಇವರು ಶಿಕ್ಷಣ ನೀತಿಯ ಹಿನ್ನೆಯಲ್ಲಿ ಆಡಳಿತ ಮಂಡಳಿಯ ಜವಾಬ್ದಾರಿ ಕುರಿತು ವಿವರಿಸಿದರು. ಶ್ರೀ ನಾರಾಯಣ ಶೇವಿರೆ ಬೆಳ್ತಂಗಡಿ ಶೈಕ್ಷಣಿಕ ಚಿಂತಕರು ಮತ್ತು ಲೇಖಕರು ಮಾತನಾಡಿ ಈ ರೀತಿಯ ಅನುಷ್ಠಾನದಲ್ಲಿ ಪಾಲಕ ಮತ್ತು ವಿದ್ಯಾರ್ಥಿಗಳ ಪಾತ್ರ ಕುರಿತು ವಿವರಿಸಿದರು. ಕಾರ್ಯಾಗಾರದ ಸಮನ್ವಯಕಾರರಾಗಿ ಶ್ರೀ ಪುಟ್ಟು ಕುಲಕರ್ಣಿರವರು ಈ ನೀತಿಯ ಕನ್ನಡ ಅನುವಾದಕರು ಹಾಗೂ ಶ್ರೀ ಜಿ.ಕೆ.ವೆಂಕಟೇಶ ಮೂರ್ತಿ ಕಾರವಾರ ಶಿಕ್ಷಣ ತಜ್ಞರು ಹಾಗೂ ಅಂಕಣಕಾರರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ ಕಾರ್ಯಕ್ರಮ ಸಮಾಪ್ತಿವರೆಗೂ ಉಪಸ್ಥಿತರಿದ್ದು ಸಹಕರಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರುಳೀಧರ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ, ಈ ಶಿಕ್ಷಣ ನೀತಿಯ ಅನುಷ್ಠಾನ ಹಾಗೂ ಹೊಸ ವಿಚಾರಗಳನ್ನು ಜಿಲ್ಲೆಯ ಜನತೆಗೆ ಶಿಕ್ಷಕರಿಗೆ ಆಡಳಿತ ಮಂಡಳಿಯವರಿಗೆ ತಲುಪಿಸಲು ಈ ಕಾರ್ಯಾಗಾರವನ್ನು ಕೊಂಕಣ ಸಂಸ್ಥೆ ಏರ್ಪಡಿಸಿದೆ ಎಂದು ಅದರ ಧ್ಯೇಯೋದ್ದೇಶವನ್ನು ವಿವರಿಸಿ ಸ್ವಾಗತಿಸಿದರು.

ಶಿಕ್ಷಕ ಚಿದಾನಂದ ಭಂಡಾರಿ ಪರಿಚಯಿಸಿದರು, ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರೆ ಸಂಜನಾ ಸಂಗಡಿಗರು ಪ್ರಾಸಿದರು. ಕೊಂಕಣ ಸಂಸ್ಥೆಯ ಟ್ರಸ್ಟಿಗಳು, ಎಲ್ಲ ಮುಖ್ಯಸ್ಥರು, ಶಿಕ್ಷಕ ವರ್ಗದವರು, ಜಿಲ್ಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಇದರಲ್ಲಿ ಪಾಲ್ಗೊಂಡಿದ್ದರು.

Share happily:

Related posts

Leave a Comment