ಕೊಂಕಣದಲ್ಲಿ ವಿದ್ಯಾರ್ಥಿವೇತನ ಹಾಗೂ ‘ಸಜ್ಜನಿ’ ಪ್ರಶಸ್ತಿ ಪ್ರದಾನ ಭವ್ಯ ಸಮಾರಂಭ

Share happily:

ಕುಮಟಾ :  ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನವರು ಪ್ರತಿವರ್ಷವೂ ನೀಡುವ ಶಿಷ್ಯವೇತನ-ಹಾಗೂ ಸಜ್ಜನಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸುನಿಲ್‍ ಪೈ ಟ್ರಸ್ಟಿಗಳು ಶ್ರೀ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‍ ಮಾದನಗೇರಿ ಕುಮಟಾರವರು ಉದ್ಘಾಟಿಸಿ, “ಕೊಂಕಣ ವಿದ್ಯಾಸಂಸ್ಥೆ ಎಂತಹ ದಡ್ಡ ವಿದ್ಯಾರ್ಥಿಯನ್ನಾದರೂ ಕೂಡ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಹಾಗೆ ತಯಾರುಮಾಡುವ ಬೋಧಕ ವರ್ಗ ಹಾಗೂ ಕ್ರಿಯಾಶೀಲ ಆಡಳಿತ ಮಂಡಳಿ ಹೊಂದಿದೆ. ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ಲಾಘನೀಯ ಸಂಸ್ಥೆಯಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, “ನಾವು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರವಲ್ಲದೆ ಸಂಸ್ಕಾರವನ್ನು ಮೈಗೂಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಉತ್ತಮ ಭಾವಿ ಪ್ರಜೆಗಳನ್ನು ಸಮಾಜಕ್ಕೆ ನೀಡುವುದು ನಮ್ಮ ಆದ್ಯ ಕರ್ತವ್ಯ. ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ” ಎಂದು ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಕೊಂಕಣ ಸಂಸ್ಥೆಯವರು ಹಾಗೂ ದಾನಿಗಳು ಇಟ್ಟ ಸುಮಾರು ರೂ.9 ಲಕ್ಷ 66 ಸಾವಿರದಷ್ಟು ಶಿಷ್ಯವೇತನವನ್ನು ಆರ್ಥಿಕವಾಗಿ ಹಿಂದುಳಿದ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಲಾಯಿತು. ಅಲ್ಲದೇ ನಯ-ವಿನಯ, ಹಾಗೂ ಭಾವಿ ಉತ್ತಮ ಪ್ರಜೆಯಾಗುವ ಲಕ್ಷಣ ಹೊಂದಿರುವ ಮತ್ತು ಭಾರತೀಯ ಸಂಸ್ಕ್ರತಿಯನ್ನು ಜೀವ ಸಹಿತವಾಗಿ ಇಟ್ಟು ಮುಂದಿನ ದಿನಗಳಲ್ಲಿ ಸಜ್ಜನಿಯಂತೆ ಬಾಳಬಹುದಾದ ಲಕ್ಷಣ ಹೊಂದಿರುವ  ಆಯ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ದಿ. ಶೈಲಾ ಮಂಜುನಾಥ ಶ್ಯಾನಬಾಗ ಇವರ ಹೆಸರಲ್ಲಿ ಪ್ರತಿ ವರ್ಷ ಕೊಡುವ ‘ಸಜ್ಜನಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೇಯಾ ಪೈ ಪ್ರಥಮ, ಶಿಲ್ಪಾ ಭಟ್ಟ ಹಾಗೂ ಪ್ರಥ್ವಿ ಹೆಗಡೆ ದ್ವಿತೀಯ ಸ್ಥಾನ ಪಡೆದರೆ, ವೈಭವಿ ಶಾನಭಾಗ ತೃತೀಯ, ನಮಿತಾ ಭಟ್ಟ, ಶಾಲ್ಮಲಿ ಮಣಕೀಕರ್‍, ಪ್ರಗತಿ ಹೆಗಡೆ, ಅಪೂರ್ವಾ ಭಟ್ಟ, ಅಭೇದಾ ಭಟ್ಟ, ಪ್ರಿಯಾ ಪ್ರಸಾದ ಇವರುಗಳಿಗೆ ಸಮಾಧಾನಕರ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಳಿಧರ ಪ್ರಭು ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಲೀಲಾವತಿ ನಾಯಕ ನಿವೃತ್ತ ಪ್ರಾಂಶುಪಾಲರು ಸರಸ್ವತಿ ಪಿ.ಯು. ಕಾಲೇಜ ಕುಮಟಾ ಉಪಸ್ಥಿತರಿದ್ದು, “ಶಾಲೆಯಲ್ಲಿ ನಡೆಯುವ ಸಜ್ಜನಿಯಂತಹ ಕಾರ್ಯಕ್ರಮಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಗಲ್ಲಾಗಿದ್ದು ಕೊಂಕಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ತಮ್ಮ ಪ್ರೋತ್ಸಾಹ, ಸಹಕಾರ ಸಂಸ್ಥೆಗೆ ಯಾವಾಗಲೂ ಇದೆ” ಎಂದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಡಿ.ಡಿ.ಕಾಮತ, ಅಶೋಕ ಪ್ರಭು, ಸುಧಾ ಶಾನಭಾಗ, ಡಾ.ಸುಲೋಚನಾ ರಾವ್‍, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ಉಪಸ್ಥಿತರಿದ್ದರು. ಟ್ರಸ್ಟಿ ರಮೇಶ ಪ್ರಭು ಸ್ವಾಗತಿಸಿದರು, ಮುಖ್ಯಾಧ್ಯಾಪಕಿ ಸುಮಾ ಪ್ರಭು ವಂದಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು.

Share happily:

Related posts

Leave a Comment