ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳ ಸಾಧನೆ

Taluka Level Pratibha Karanji 2019
Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ನೆಲ್ಲಿಕೇರಿಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಮೋಘ ಸಾಧನೆಗೈದಿದ್ದಾರೆ.

ನಮಿತಾ ವಿ. ಭಟ್ಟ ಕೊಂಕಣಿ ಭಾಷಣ, ದ್ರವ್ಯಾ ಹೆಗಡೆ ಮರಾಠಿ ಭಾಷಣ, ಕಾರ್ತಿಕ ನಾಯಕ ಆಶು ಭಾಷಣ, ಶಿಲ್ಪಾ ಭಟ್ಟ ಭಾವಗೀತೆ, ಅಭೇದಾ ಭಟ್ಟ ಜನಪದಗೀತೆ, ಹಾಗೂ ಖುಷಿ ಭಂಡಾರಿ ರಂಗೋಲಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅದೇ ರೀತಿ, ಪ್ರಥ್ವಿ ಹೆಗಡೆ ಸಂಸ್ಕೃತ ಭಾಷಣ, ಕಾರ್ತಿಕ ಶುಕ್ಲ ಸಂಸ್ಕೃತ ಧಾರ್ಮಿಕ ಪಠಣ, ಹಾಗೂ ಪ್ರತೀಕ್ಷಾ ನಾಯಕ ಗಝಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ, ಚಂದನ ಹೆಗಡೆ ಸಿದ್ಧ ಭಾಷಣ, ಹಾಗೂ ಅಕ್ಷತಾ ಭಟ್ಟ ಭರತನಾಟ್ಯದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಎಲ್ಲಾ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರು, ಪಾಲಕರು  ಹರ್ಷ ವ್ಯಕ್ತಪಡಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Share happily:

Related posts

Leave a Comment