ಕೊಂಕಣದಲ್ಲಿ ಶಾಲಾ ಸಂಸತ್ ಉದ್ಘಾಟನೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‍ಕೆ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಂಕೋಲಾದ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಆದ ಪ್ರಶಾಂತ ನಾಯಕ ಅಂಕೋಲಾ ಇವರು, ವಿದ್ಯಾರ್ಥಿ ದಿಸೆಯಲ್ಲೇ ಮುಂದಾಳತ್ವದ ಗುಣ ಬೆಳೆಸಿಕೊಳ್ಳಬೇಕು. ದೇಶಸ ಚುಕ್ಕಾಣಿ ಹಿಡಿವ ಪ್ರಾಮಾಣಿಕ ಹಾಗೂ ದಕ್ಷ ನೇತಾರರಾಗಬೇಕು. ಪ್ರಜಾಪ್ರಭುತ್ವದ ಅರಿವನ್ನು ಮೂಡಿಸುವ ಸಲುವಾಗಿ ಈ ಶಾಲಾ ಸಂಸತ್ ಉದ್ಘಾಟನೆಗೊಂಡಿದೆ ಎಂದರು. ತನ್ನ ಜೀವನದಲ್ಲಿ ನಾನೊಬ್ಬ ಹೇಗೆ ಮುಂದಾಳುವಾದೆ ಎಂದು ವಿವರಿಸಿ, ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೇತಾರರಾಗಿ ದೇಶ ಕಟ್ಟುವ, ದೇಶವನ್ನು ಪ್ರೀತಿಸುವ ವಿದ್ಯಾರ್ಥಿಗಳಾಗಿ ಎಂದು ಕರೆನೀಡಿ ಶುಭಾಷಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಬಿ.ಎಸ್.ಗೌಡರವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾಳಿನ ಬಾಳಿನಲ್ಲಿ ಜಗತ್ತಿಗೆ ಹೇಗೆ ಬೆಳಕಾಗಬೇಕೆಂದು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿ ಆಯ್ಕೆಯಾದ ಮಕ್ಕಳಿಗೆ ಶುಭ ಕೋರಿದರು.

ಶಾಲಾ ಸಂಸತ್ತಿನ ಮುಖ್ಯ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡ ಕುಮಾರ ಅನಂತ ಶಾನಭಾಗ ಹಾಗೂ ಕುಮಾರಿ ಅದಿತಿ ಭಟ್ಟ ಶಲಾ ಇತಿಮಿತಿಯಲ್ಲಿ ನಮ್ಮ ಕೈಲಾದ ಕಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ನುಡಿದರು. ಶಾಲಾ ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಸ್ವಾತಗಿಸಿದರು. ಶಿಕ್ಷಕರಾದ ಶಿವಾನಂದ ಭಟ್ಟ ಹಾಗೂ ಸಂಸತ್ತಿನ ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಸ್ಥಿತರಿದ್ದರು. ಶಿಕ್ಷಕ ಪ್ರಕಾಶ ಗಾವಡಿ ಧನ್ಯವಾದ ಸಮರ್ಪಿಸಿದರು. ಕುಮಾರಿ ಭೂಮಿಕಾ ಭಟ್ಟ ನಿರೂಪಿಸಿದರೆ, ಕುಮಾರಿ ಸೃಜನಾ ಸಂಗಡಿಗರು ಪ್ರಾರ್ಥಿಸಿದರು.

Share happily:

Related posts

Leave a Comment