ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿಜ್ಞಾನ ರೋಚಕದ ಕುರಿತು ಮಾಹಿತಿ ಕಾರ್ಯಕ್ರಮ.

Share happily:

ಕುಮಟಾ : ಚಂದ್ರನಲ್ಲಿಗೆ ಮನುಷ್ಯ ಹೋಗಿದ್ದು 20ನೆಯ ಶತಮಾನದ ಮಹತ್ವದ ಬಾಹ್ಯಾಕಾಶ ಸಾಧನೆಯಾಗಿದೆ. ಚಂದ್ರನಿದ್ದಲ್ಲಿಗೆ ಮಾನವ ಪಯಣದ ದಾರಿಯೇ ರೋಚಕ ಅಂತಹ ಘಟನೆಗಳ ಬಗ್ಗೆ ಮಕ್ಕಳು ಕುತೂಹಲ ಬೆಳೆಸಿಕೊಳ್ಳಬೇಕಾಗಿದೆ ಎಂದು ಶಿಕ್ಷಕಿ ತನುಜಾ ನಾಯ್ಕ ಅಭಿಪ್ರಾಯಪಟ್ಟರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ನಡೆದ ಚಂದ್ರನ ಮೇಲೆ ಮಾನವ ಕಾಲಿಟ್ಟ ದಿನದ ಬಗ್ಗೆ ವಿವರಿಸುವ ವಿಶೇಷ ಕಾರ್ಯಕ್ರಮ ಹಾಗೂ “ಆಧುನಿಕ ತಳಿವಿಜ್ಞಾನದ ಪಿತಾಮಹ” ಎಂದೇ ಖ್ಯಾತರಾದ ಗ್ರೆಗೋರ್ ಜೊಹಾನ್ ಮೆಂಡಲ್ ಅವರ ಜನ್ಮದಿನದ ಕುರಿತಾಗಿ ಮಕ್ಕಳಿಗೆ ಮಾಹಿತಿ ನೀಡಿದರು.

ಬಾಹ್ಯಾಕಾಶದಲ್ಲಿನ ಇದುವರೆಗಿನ ಪ್ರಮುಖ ಸಾಧನೆಯೆಂದರೆ ಚಂದ್ರನ ಮೇಲೆ ಮಾನವ ಪದಾರ್ಪಣೆ ಮಾಡಿದ್ದು. ಚಂದ್ರನ ಮೇಲೆ ಮನುಷ್ಯ ಇಳಿದು, ನಡೆದಾಡಿದ್ದು 20ನೆಯ ಶತಮಾನದ ಮಹತ್ವದ ಬಾಹ್ಯಾಕಾಶ ಸಾಧನೆಯಾಗಿದೆ. ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಪೂರ್ವದಲ್ಲಿ ಅದಕ್ಕಾಗಿ ಅನೇಕ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಯಿತು. ಚಂದ್ರನನ್ನು ಅಭ್ಯಸಿಸಲು ಮೊದಲು ಪಯೊನೀರ್‌ ಉಪಗ್ರಹಗಳನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಲಾಯಿತು. ಪಯೊನೀರ್‌ ಉಪಗ್ರಹಗಳ ವಿಫಲತೆ ನಂತರ ನಾಸಾ ಕಷ್ಟಕರ ಕೆಲಸಗಳನ್ನು ಮಾಡಬಲ್ಲ ರೇಂಜರ್‌ ಉಪಗ್ರಹಗಳನ್ನು ಹಾರಿಬಿಡಲಾಯಿತು. ಇದು ನಮಗೆ ಕಾಣದಿರುವ ಚಂದ್ರನ ಭಾಗದ ಚಿತ್ರಗಳನ್ನು ತೆಗೆದು ತನ್ನ ಕಾರ್ಯವನ್ನು ಮಾಡಿತು. ನಂತರ ಚಂದ್ರನಲ್ಲಿ ಸರ್ವೇಯರ್‌-1 ಎಂಬ ಯಂತ್ರ ಮಾನವನ್ನು ಕಳುಹಿಸಲಾಯಿತು. ಇದು 11ಸಾವಿರ ಚಂದ್ರನ ಫೋಟೋಗಳನ್ನು ತಗೆದು ತನ್ನ ಕೆಲಸವನ್ನು ಯಶಸ್ವಿಯಾಗಿ ಮುಗಿಸಿ ಇಂದಿಗೂ ಚಂದ್ರನ ಮೇಲೆ ನಿಂತಿದೆ. ಇಷ್ಟೆಲ್ಲ ಅಭ್ಯಾಸದ ನಂತರ ಚಂದ್ರನಲ್ಲಿ ಮನುಷ್ಯರನ್ನು ಕಳುಹಿಸುವ ಮೊದಲು ಮನುಷ್ಯನು ಚಂದ್ರನ ಮೇಲೆ ಹೇಗೆ ಇಳಿಯಬೇಕು ಎಂಬೆಲ್ಲ ಪೂರ್ವತಯಾರಿಗಾಗಿ ಶೂನ್ಯ ಅಂದರೆ ಬಾಹ್ಯಕಾಶದಲ್ಲಿ ಭೇಟಿ ಮಾಡಲು ನಿರ್ಧರಿಸಲಾಯಿತು. ಅದೇ ಜೆಮ್ನಿ ಪ್ರಯೋಗ. ಮುಂದೆ ಅಪೋಲೋ -8ರ ಮೂಲಕ 3 ವಿಜ್ಞಾನಿಗಳು ಚಂದ್ರನಲ್ಲಿಗೆ ಹೋಗಿ, ನಮಗೆ ಕಾಣದ ಚಂದ್ರನ ಭಾಗದ ಫೋಟೋಗಳನ್ನು ಉಪಗ್ರಹದಲ್ಲಿ ಕುಳಿತು ತೆಗೆದು ಕಳುಹಿಸಿದರು. ಇದು ಚಂದ್ರನ ಮೇಲೆ ಮನುಷ್ಯ ಇಳಿಯಬಹುದು ಎಂಬುದನ್ನು ಖಚಿತಪಡಿಸಿತು. ನೀಲ್‌ ಆರ್ಮಸ್ಟ್ರಾಂಗ್‌ ಮೊಟ್ಟ ಮೊದಲಿಗೆ ಚಂದ್ರನ ಮೇಲೆ ಕಾಲಿಟ್ಟವರು. ಅದು 1969ರ ಜುಲೈ 20ರಂದು ಎಂದು ಅವರು ವಿವರಿಸಿದರು.

ತಳಿವಿಜ್ಞಾನ ಕ್ಷೇತ್ರದಲ್ಲಿ ಮೊದಲು ಪ್ರಯೋಗಗಳನ್ನು ನಡೆಸಿದ ಗ್ರೆಗೋರ್ ಜೊಹಾನ್ ಮೆಂಡಲ್ ಅವರ ಜೀವನ ಹಾಗೂ ಅವರು “ಆಧುನಿಕ ತಳಿವಿಜ್ಞಾನದ ಪಿತಾಮಹ” ಎಂದು ಗುರುತಿಸಿಕೊಳ್ಳಲು ಅವರು ಮಾಡಿದ ಅನ್ವೇಷಣೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು.

Share happily:

Related posts

Leave a Comment