ಕುಮಟಾ: ಶಕ್ತಿ ಮತ್ತು ಆರ್ದೃ ಭೂ ಸಂಶೋಧನಾ ಗುಂಪು, ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇವರು ಸಂಘಟಿತ 12ನೆಯ ದ್ವೈವಾರ್ಷಿಕ ಲೇಕ್ 2020 – ಪರಿಸರ ವ್ಯವಸ್ಥೆಯ ರಚನೆ, ಕಾರ್ಯ, ಸರಕು ಮತ್ತು ಸೇವೆಗಳ ಕುರಿತಾದ ಸಮಾವೇಶ ಸ್ಪರ್ಧೆಯಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ 9ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಸುಶ್ಮಿತಾ ಎಚ್. ನಾಯ್ಕ ಇವಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಗ್ರಾಮದ ಮನೆಮದ್ದುಗಳ ಕುರಿತಾದ ಪೇಪರ್ ಪ್ರೆಸೆಂಟೇಶನ್‌ನಲ್ಲಿ ದ್ವಿತೀಯ ಸ್ಥಾನ, ಮತ್ತು 8ನೇ ವರ್ಗದ ವಿದ್ಯಾರ್ಥಿ ಕುಮಾರ ಪರಮೇಶ್ವರ ಭಟ್ಟ ಇವನು ಕುಮಟಾದ ಹೆಗಡೆ ಗ್ರಾಮದ ವೈದ್ಯಕೀಯ ಸಸ್ಯಗಳು ಹಾಗೂ ಅವುಗಳ ಉತ್ಪನ್ನಗಳ ಕುರಿತಾದ ಪೋಸ್ಟರ್ ಪ್ರೆಸೆಂಟೇಶನ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ʼಸಹ್ಯಾದ್ರಿ ಯಂಗ್ ಎಕಾಲಾಜಿಸ್ಟ್ʼ ಪ್ರಶಸ್ತಿ ಪಡೆಯುವುದರ ಮೂಲಕ ಸಂಸ್ಥೆಯ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಸ್ಥರು, ಶಿಕ್ಷಕ ವೃಂದ, ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.