ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ಸಾಧನೆ.

Share happily:

ಕುಮಟಾ: ಶಾಂಕರ ತತ್ವ ಪ್ರಸಾರ ಸಮಿತಿ ಕುಮಟಾ ಇವರು ಜು.16 ರಂದು ತಾಲೂಕಿನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡ ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಶಿವ ಪಂಚಾಕ್ಷರ ಸ್ತೋತ್ರ ಹಾಗೂ ಶಂಕರಾಚಾರ್ಯ ವಿರಚಿತ ಭಜಗೋವಿಂದಂ ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ, ಸಾಧನೆ ಮಾಡಿದ್ದಾರೆ.

1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಶಿವ ಪಂಚಾಕ್ಷರ ಸ್ತೋತ್ರ ಪಠಣ ಸ್ಫರ್ಧೆಯಲ್ಲಿ ಶ್ರೇಯಾ ಗಿರೀಶ ಹೆಬ್ಬಾರ ಪ್ರಥಮ ಸ್ಥಾನ ಪಡೆದರೆ, 6 ರಿಂದ 8ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಭಜಗೋವಿಂದಂ ಸ್ತೋತ್ರ ಪಠಣದ ಸ್ಪರ್ಧೆಯಲ್ಲಿ ಸೃಜನಾ ಡಿ ನಾಯಕ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡುವ ಜೊತೆಗೆ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಹಾಗೂ ಶಾಲಾ ಸಾಂಸ್ಕೃತಿಕ ಸಮಿತಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

Share happily:

Related posts

Leave a Comment