2019-20ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ರಾಜ್ಯಮಟ್ಟದ ತೃತೀಯ ರ‍್ಯಾಂಕ್ ನೊಂದಿಗೆ ಎಂಟು ಸ್ಥಾನಗಳನ್ನು ತನ್ನ ದಾಗಿಸಿಕೊಂಡ ಕೊಂಕಣ ಸಿ.ವಿ.ಎಸ್‌.ಕೆ

Share happily:

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಪ್ರಕಟಗೊಂಡಿದ್ದು, ಕುಮಟಾದ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯು ರಾಜ್ಯಮಟ್ಟದ ತೃತೀಯ ರ‍್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ. ಪರೀಕ್ಷೆ ಬರೆದ 125 ವಿದ್ಯಾರ್ಥಿಗಳಲ್ಲಿ 124 ಮಂದಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗಿದ್ದು ಉತ್ಕೃಷ್ಟ ಫಲಿತಾಂಶವನ್ನು ಒದಗಿಸಿದ್ದಾರೆ.

ಕುಮಾರ ಸಂಜಯ ಡಿ. ನಾಯಕ 625ಕ್ಕೆ 623 ಅಂಕ (99.68%) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಕುಮಟಾ ತಾಲೂಕಿಗೆ ಪ್ರಥಮ ಸ್ಥಾನವನ್ನು, ಕುಮಾರ ಕಾರ್ತಿಕ ಎಸ್‌. ನಾಯ್ಕ 620 ಅಂಕ (99.20%) ರಾಜ್ಯಕ್ಕೆ ಆರನೇ ಸ್ಥಾನ, ಕುಮಾರ ಅಕ್ಷಯ ಎ. ನಾಯ್ಕ ಹಾಗೂ ಕುಮಾರಿ ಪ್ರಜ್ಞಾ ಪಿ. ಶಾನಭಾಗ 619 ಅಂಕ (99.04%) ರಾಜ್ಯಕ್ಕೆ ಏಳನೇ ಸ್ಥಾನ, ಕುಮಾರ ಶ್ರವಣ ಎಂ. ಪೈ ಹಾಗೂ ಕುಮಾರಿ ಶಾಲ್ಮಲಿ ಮಂಕೀಕರ್‌ 618 ಅಂಕ (98.88%) ರಾಜ್ಯಕ್ಕೆ ಎಂಟನೇ ಸ್ಥಾನ, ಕುಮಾರಿ ಶಿಲ್ಪಾ ಭಟ್ಟ 617 ಅಂಕ (98.72%) ರಾಜ್ಯಕ್ಕೆ ಒಂಭತ್ತನೇ ಸ್ಥಾನ, ಕುಮಾರ ಪ್ರಜ್ವಲ ಜಿ. ಪಟಗಾರ 616 ಅಂಕ (98.56%) ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಹತ್ತು ಮಂದಿ 98%ಕ್ಕಿಂತ ಅಧಿಕ, 15 ಮಂದಿ 95%ಕ್ಕಿಂತ ಅಧಿಕ, 36 ಮಂದಿ 90% ಕ್ಕಿಂತ ಅಧಿಕ, 22 ಮಂದಿ 85% ಕ್ಕಿಂತ ಅಧಿಕ ಅಂಕ ಗಳಿಸಿದರೆ ಉಳಿದವರೆಲ್ಲರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳ ಪೈಕಿ ಒಂದಾದ ಸಿವಿಎಸ್‌ಕೆ ಪ್ರೌಢಶಾಲೆಯು ಇದುವರೆಗೂ ಅತ್ಯತ್ತಮ ಫಲಿತಾಂಶವನ್ನು ನೀಡುತ್ತಾ ಬಂದಿದ್ದು, ಈ ಬಾರಿಯ ಫಲಿತಾಂಶದಲ್ಲಿ ಕೋವಿಡ್‌-19ರ ದೆಸೆಯಿಂದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯ ಶಿಕ್ಷಕರುಗಳಿಗೆ ಪರೀಕ್ಷಾ ಸಂದರ್ಭದಲ್ಲಿ ನೇರ ಮಾರ್ಗದರ್ಶನ ನೀಡಲು ಸಾಧ್ಯವಾಗದೇ ಇರುವುದೂ ಸಹ ಶೇ.100ರ ಫಲಿತಾಂಶ ಪಡೆಯುವಲ್ಲಿ ಹಿನ್ನಡೆಯಾಗಿದೆ. ಸಂಸ್ಥೆಯಲ್ಲಿ ಅತ್ಯುತ್ಕೃಷ್ಟ ವಿದ್ಯಾರ್ಥಿಗಳೇ ವಿದ್ಯಾಭ್ಯಾಸ ಮಾಡುತ್ತಾರೆ ಎನ್ನುವ ಅಪವಾದವಿದೆ, ಆದರೆ ಎಲ್ಲೆಡೆಯಂತೆ ಇಲ್ಲಿಯೂ ಕೂಡ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಶಿಕ್ಷಕರ ನಿರಂತರ ಪರಿಶ್ರಮವೂ ಇದೆ ಎಂಬುದನ್ನು ಈ ಬಾರಿಯ ಫಲಿತಾಂಶದಿಂದ ವೇದ್ಯವಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನ ವಿಶ್ವಸ್ಥ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿಗಳು, ಮಾತೃ ಮಂಡಳಿಯ ಪದಾಧಿಕಾರಿಗಳು, ತಾಲೂಕಾ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸಿದ್ದಾರೆ.

Share happily:

Related posts

Leave a Comment