ಕೊಂಕಣ ಎಜ್ಯುಕೇಶನ್ ಟ್ರಸ್ಟನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Share happily:

ಕುಮಟಾ: ಸಂಸ್ಕಾರ ಹಾಗೂ ಸಂಪ್ರದಾಯದ ತಳಹದಿಯಲ್ಲಿ ಶಿಕ್ಷಣ ನೀಡಬೇಕು ಎಂಬ ಘನ ಉದ್ದೇಶ ಹೊತ್ತು ಮುನ್ನಡೆಯುತ್ತಿರುವ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಮಾತೃಮಂಡಳಿಯ ಸಹಯೋಗದಲ್ಲಿ ಡಾ. ಆರತಿ ವಿ. ಬಿ. ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಕೃತಿಯ ಸೌಂದರ್ಯ ಇರುವುದು ಸ್ತ್ರೀಯಲ್ಲಿ ಎಂಬುದು ಮಾತು ಸತ್ಯ, ಪ್ರತಿಯೊಂದರಲ್ಲಿಯೂ ಸುಂದರತೆ ಕಾಣುವ ಮಾತೆಯರಿಂದ ಮಾತ್ರವೇ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ವಿವರಿಸಿದ ಅವರು ಪುರುಷರಲ್ಲಿ ಹಾಗೂ ಸ್ತ್ರೀಯರಲ್ಲಿ ಅನೇಕ ವಿಧದ ವೈಶಿಷ್ಟ್ಯಗಳು ಇರುತ್ತವೆ. ನಾವು ನಾವಾಗಿಯೇ ಇರಬೇಕು. ಪುರುಷ ಸ್ತ್ರೀ ಆಗಲು ಪ್ರಯತ್ನಿಸಲಾಗದು, ಸ್ತ್ರೀ ಪುರುಷರಂತೆ ಆಗಲು ಪ್ರಯತ್ನಿಸುತ್ತಿರುವುದು ಹುಚ್ಚುತನ ಮಾತೃತ್ವ ಇರುವುದು ಸ್ತ್ರೀಯರಲ್ಲಿ, ಸ್ತ್ರೀ ಎಂಬುದೊಂದು ಶಕ್ತಿ ಯಾವ ಸ್ತ್ರೀ ತನ್ನೊಳಗಿನ ವಿದ್ಯೆ, ವಿಜ್ಞಾನ, ಕೌಶಲ, ಮಾತೃತ್ವವನ್ನು ಜಗತ್ತಿಗೆ ಕೊಟ್ಟಾಗ ಎಲ್ಲರೂ ನಮ್ಮನ್ನು ಮಾತೆಯರು ಎನ್ನುವರು. ತ್ಯಾಗ ಮಾಡುವ ಬಗ್ಗೆ ಕಲಿಸಿದವರು ಮಕ್ಕಳು ಅಂತಹ ಅದ್ಭುತ ತ್ಯಾಗದ ಪಾಠ ಮಾಡಿದ ಮಕ್ಕಳಿಗೆ ನಾವೇನು ಕೊಟ್ಟಿದ್ದೇವೆ? ಎಂಬುದು ಈಗಿರುವ ಪ್ರಶ್ನೆ? ಮಕ್ಕಳಿಗೆ ಸಂಸ್ಕಾರ ಕೊಡಬೇಕು ಎಂಬುದೇ ಅದಕ್ಕೆ ಉತ್ತರವಾಗಬೇಕು.

ಸ್ತ್ರೀ ಎಂಬುದು ಆಂತರಿಕ ಸಂಪತ್ತಿನ ವ್ಯುತ್ವತ್ತಿ ಪ್ರತಿಯೊಂದರ ಜ್ಞಾನ ಪಡೆಯುವ ಮೂಲಕ ಬದುಕನ್ನು ಹಸನಾಗಿಸಿಕೊಂಡಿರಬೇಕು. ಸ್ತ್ರೀ ಒಂದು ಮನೆಯ ಪ್ರತಿನಿಧಿ ಹಾಗಾಗಿಯೇ ಬೇರೆ ಮನೆಗಳಿಗೆ ಹೋದಾಗ ಸ್ತ್ರೀಗೆ ಅರಿಶಿಣ ಕುಂಕುಮ ಉಡಿ ತುಂಬುವ ಪದ್ದತಿ ಇರುವುದು. ಸ್ತ್ರೀಯರ ಪ್ರತಿಯೊಂದು ಅಂಶದಲ್ಲಿ ದೈವತ್ವವಿದೆ ಹಾಗಾಗಿಯೇ ಶ್ರೀ ಕ್ರಷ್ಣ ತಾನು ವಾಕ್ ಎಂಬುದಾಗಿ ಹೇಳಿರುವುದು ಮಾತೃ ಪ್ರೆÃಮವನ್ನು ಮಗುವಿಗೆ ನೀಡುವ ಗುರುತರ ಜವಾಬ್ದಾರಿ ಇರುವುದು ಮಾತೆಯರಿಗೆ ಎಂದು ಮಾತೆಯರಿಗೆ ಅರ್ಥಪೂರ್ಣವಾಗಿ ವಿವರಿಸಿದರು.

ಮಾಡಿದ ಎಲ್ಲಾ ತಪ್ಪನ್ನು ಕ್ಷಮಿಸುವ ಜಗತ್ತಿನ ಏಕೈಕ ನ್ಯಾಯಾಲಯ ತಾಯಿಯ ಹೃದಯ ಮಕ್ಕಳಿಗೆ ತಾಯಿಯ ಪ್ರೀತಿ ಪಡೆಯುವ ಸೌಭಾಗ್ಯವೇ ಬಹು ದೊಡ್ಡದು. ತಾಯಿ ಮಾತೃತ್ವದ ಜವಾಬ್ದಾರಿಯನ್ನು ನಿರ್ವಹಿಸುವದು ಬಹು ಮುಖ್ಯ ಎಂದರು. ಸಂಸ್ಕಾರವನ್ನು ನೀಡುವ ಮೂಲಕ ಸಮಾಜದ ಕೇಂದ್ರವಾಗುತ್ತಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಿಜವಾಗಿಯೂ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ ಎಂದರು.

ಪ್ರಾಸ್ಥಾವಿಕವಾಗಿ ಮಾತನಾಡಿದ ಸರಸ್ವತಿ ವಿದ್ಯಾಕೇಂದ್ರದ ಶಿಕ್ಷಕ ಗಣೇಶ ಜೋಶಿ, ಡಾ. ಆರತಿ ವಿ.ಬಿ ಯವರನ್ನು ಪರಿಚಯಿಸುತ್ತಾ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಂಸ್ಕಾರದ ಮೂಲ ಎಂಬುದಾಗಿ ಮಾತೆಯರನ್ನು ಕೇಂದ್ರಿಕರಿಸುವ ಮಾತೃ ಮಂಡಳಿ ಸ್ಥಾಪಿಸಿದ್ದು, ಮಾತೃ ಮಂಡಳಿ ಸಂಸ್ಥೆಯ ಜೊತೆಗೆ ಬಲವಾಗಿ ನಿಂತು ಸಂಸ್ಥೆಯ ಧ್ಯೇಯ ಸಾಧನೆ ಮಾಡುವತ್ತ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಶ್ರೀಮತಿ. ಸುಧಾ ಶಾನಭಾಗ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ಅಂಗ ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀಮತಿ. ಸುಜಾತಾ ನಾಯ್ಕ, ಸುಮಾ ಪ್ರಭು, ಸಾವಿತ್ರಿ ಹೆಗಡೆ ಹಾಗೂ ಮಾತೃ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ. ಸುಮನಾ ರೇವಣಕರ ಇದ್ದರು ಕಾರ್ಯಕ್ರಮದಲ್ಲಿ ನೂರಾರು ಮಾತೆಯರು ಹಾಗೂ ಸಂಸ್ಥೆಯ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು.

Share happily:

Related posts

Leave a Comment