ರಾಜ್ಯ ಮಟ್ಟಕ್ಕೆ ಕೊಂಕಣದ ವಿದ್ಯಾರ್ಥಿಗಳು

Share happily:

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದೊಂದಿಗೆ ಕುಮಟಾದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2018-19ರಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಮಂಡ್ಯದಲ್ಲಿ ಜರುಗಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕವಿತಾ ಗೋಷ್ಠಿಯಲ್ಲಿ ಶಿಲ್ಪಾ ಡಿ. ಭಟ್ಟ ಪ್ರಥಮ, ಕಾರ್ತಿಕ ಪಿ. ನಾಯ್ಕ ದ್ವಿತೀಯ ಸ್ಥಾನಗಳಿಸಿದರೆ, ಕಥಾ ಗೋಷ್ಠಿಯಲ್ಲಿ ಪ್ರಗತಿ ಜಿ. ಹೆಗಡೆ ಪ್ರಥಮ ಹಾಗೂ ಚುಟುಕು ಗೋಷ್ಠಿಯಲ್ಲಿ ಸಂಜಯ ಡಿ. ನಾಯ್ಕ ಪ್ರಥಮ ಸ್ಥಾನಗಳಿಸುವುದರ ಮೂಲಕ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ, ಶಿಕ್ಷಕರು, ಶೈಕ್ಷಣಿಕ ಸಲಹೆಗಾರರು, ಪಾಲಕರು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

Share happily:

Related posts

Leave a Comment