ಕುಮಟಾ: ತಾಲೂಕಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸದಾ ಮುಂದು ಎನಿಸಿಕೊಂಡಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗಲ್ಲಿ ಮಿಂಚಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿತಂದಿರುತ್ತಾರೆ.
ಕಿರಿಯರ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶ್ರೇಯಾ ಗಿರೀಶ ಹೆಬ್ಬಾರ ಭಕ್ತಿಗೀತೆ ಸ್ಫರ್ಧೆಯಲ್ಲಿ ಪ್ರಥಮ, ಆಶುಭಾಷಣ ಸ್ಪರ್ಧೆಯಲ್ಲಿ ಸ್ನೇಹಾ ಉದಯ ನಾಯ್ಕ ಪ್ರಥಮಸ್ಥಾನ ಗಳಿಸಿರುತ್ತಾರೆ. ಹಿರಿಯರ ವಿಭಾಗದ ಸ್ಫರ್ಧೆಗಳಾದ ಇಂಗ್ಲೀಷ್ ಕಂಠಪಾಠ, ಹಾಗೂ ಸಾಭಿನಯಗೀತೆಯಲ್ಲಿ ಸೃಜನಾ ದತ್ತಾ ನಾಯ್ಕ ಪ್ರಥಮ ಸ್ಥಾನ ಪಡೆದು ತೃತೀಯ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.
ಪಲ್ಲವಿ ಶಾನಭಾಗ ತುಳು ಕಂಠಪಾಠ, ಅಕ್ಷತಾ ಶಾನಭಾಗ ಮರಾಠಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದು ಸಾದನೆ ಮಾಡಿದರೆ, ಸೋನಾಲಿ ಶೇಟ್, ನಿಖಿಲ್ ಪಟಗಾರ ಇವರು ಹಿರಿಯ ಹಾಗೂ ಕಿರಿಯರ ವಿಭಾಗದ ಚಿತ್ರಕಲೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಸಾಮೂಹಿಕ ವಿಭಾಗದಲ್ಲಿ ಶ್ರೀಷಾ ನಾಯ್ಕ, ಸೃಷ್ಟಿ ನಾಯ್ಕ, ನಂದನ ನಾಯ್ಕ, ಶ್ರೀಲಕ್ಷ್ಮೀ ಶಾನಭಾಗ, ದೀಕ್ಷಾ ಕಾಮತ್, ಕುಶಾಲ್ ಭಂಡಾರಿಯವರನ್ನೊಳಗೊಂಡ ದೇಶ ಭಕ್ತಿಗೀತೆ ತಂಡ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದೆ.
ಇವರೆಲ್ಲರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಸಾಂಸ್ಕೃತಿಕ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.