ಅತ್ಯುತ್ತಮ ಪ್ರದರ್ಶನ ತೋರಿ ಸಾಧನೆ ಮಾಡಿದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು

Share happily:

ಕುಮಟಾ: ಇಲ್ಲಿನ ಶಾಸಕರ ಮಾದರಿ ಶಾಲೆ ನೆಲ್ಲಿಕೇರಿಯಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ 10 ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಭಾಗವಹಿಸಿದ ಬಹುತೇಕ ಸ್ಪರ್ಧೆಗಳಲ್ಲಿ ಸ್ಥಾನಗಳಿಸುವ ಮೂಲಕ ಸಾಧನೆ ಮಾಡಿರುತ್ತಾರೆ.

ಕಿರಿಯರ ವಿಭಾಗ

ಪಲ್ಲವಿ ಶಾನಭಾಗ (ತುಳು ಕಂಠಪಾಠ ಪ್ರಥಮ), ನಿಖಿಲ ಪಟಗಾರ (ಚಿತ್ರಕಲೆ ಪ್ರಥಮ), ಶ್ರೇಯಾ ಹೆಬ್ಬಾರ (ಭಕ್ತಿ ಗೀತೆ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಲಘುಸಂಗೀತ ದ್ವಿತೀಯ), ಸುಮುಖ ನಾಯ್ಕ (ಕ್ಲೇ ಮಾಡಲಿಂಗ ದ್ವಿತೀಯ), ಸ್ನೇಹಾ ನಾಯ್ಕ (ಆಶುಭಾಷಣ ಪ್ರಥಮ, ಮರಾಠಿ, ಹಿಂದಿ, ಕಥೆಯಲ್ಲಿ ದ್ವಿತೀಯ), ಕೃತಿಕಾ ಭಟ್ಟ (ಧಾರ್ಮಿಕ ಪಠಣ ದ್ವಿತೀಯ) ಹಾಗೂ ದೇಶಭಕ್ತಿಗೀತೆಯಲ್ಲಿ ಶ್ರೀಷಾ, ದೀಕ್ಷಾ, ಸೃಷ್ಟಿ, ಶ್ರೀಲಕ್ಷ್ಮಿ, ನಂದನ, ಕುಶಾಲರವರ ತಂಡ ಪ್ರಥಮ ಬಹುಮಾನ ಪಡೆದಿದೆ. ಸ್ನೇಹಾ, ಸಮೀರ, ಕೃತಿಕಾ, ಪುಂಡಲೀಕ, ದ್ರುವ, ವಿನುತಾರವರ ತಂಡ ಖವ್ವಾಲಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹಿರಿಯರ ವಿಭಾಗ

ಸೋನಾಲಿ ಶೇಟ (ಚಿತ್ರಕಲೆ ಪ್ರಥಮ), ಸೃಜನಾ ಡಿ. ನಾಯ್ಕ (ಇಂಗ್ಲೀಷ್‍ ಕಂಠಪಾಠ ಪ್ರಥಮ, ಅಭಿನಯ ಗೀತೆ ಪ್ರಥಮ), ಸಂಜನಾ ಭಟ್ಟ (ಪ್ರಥಮ ಕನ್ನಡ ಕಂಠಪಾಠ ಪ್ರಥಮ), ಅಕ್ಷತಾ ಶಾನಭಾಗ (ಮರಾಠಿ ಕಂಠಪಾಠದಲ್ಲಿ ಪ್ರಥಮ, ಕೊಂಕಣಿ, ತಮಿಳು ಕಂಠಪಾಠದಲ್ಲಿ ದ್ವಿತೀಯ), ಅನನ್ಯಾ ಭಟ್ಟ (ಹಿಂದಿ ಕಂಠಪಾಠದಲ್ಲಿ ದ್ವಿತೀಯ, ಲಘುಸಂಗೀತ ದ್ವಿತೀಯ), ಕನ್ನಿಕಾಭಟ್ಟ (ತುಳು ಕಂಠಪಾಠ ದ್ವಿತೀಯ), ಹರ್ಷಿತಾ ಭಟ್ಟ (ಧಾರ್ಮಿಕ ಪಠಣ ತೃತೀಯ), ಚಂದನ ಹೆಗಡೆ(ಆಶುಭಾಷಣ ದ್ವಿತೀಯ ), ಸಿಂಚನಾ ದೇವಾಡಿಗ (ಛದ್ಮವೇಷ ದ್ವಿತೀಯ), ಸೃಜನಾ, ಕನ್ನಿಕಾ, ಅನನ್ಯಾ, ನಂದನ, ಕಾರ್ತಿಕರವರ ತಂಡ ಖವ್ವಾಲಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿಯ ಎಲ್ಲಾ ವಿಶ್ವಸ್ಥರು ಶುಭಕೋರಿದ್ದಾರೆ.

Share happily:

No Comment.