ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ನೆಲ್ಲಿಕೇರಿಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಟ್ಟೂ 14 ವಿಭಾಗಗಳಲ್ಲಿ ಸ್ಪರ್ಧಿಸಿ, ಉತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳ ವಿವರ ಹೀಗಿದೆ: ಮರಾಠಿ ಭಾಷಣದಲ್ಲಿ ವಸುಧಾ ಪ್ರಭು, ಹಿಂದಿಯಲ್ಲಿ ವೈಷ್ಣವಿ ಗುಡಿಗಾರ, ತುಳುವಿನಲ್ಲಿ ತೇಜಸ್ವಿನಿ ಶಾನಭಾಗ, ಕೊಂಕಣಿಯಲ್ಲಿ ಸುದಿತಿ ಕಾಮತ, ಸಂಸ್ಕೃತದಲ್ಲಿ ನೇಹಾ ಶಾನಭಾಗ ಪ್ರಥಮ ಸ್ಥಾನ ಗಳಿಸಿದರೆ, ಧಾರ್ಮಿಕ ಪಠಣದಲ್ಲಿ ಶ್ರೇಯಾ ಶಾನಭಾಗ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಶಿಲ್ಪಾ ಪಟಗಾರ ಪ್ರಥಮರಾಗಿ ಜಿಲ್ಲಾ ಮಟ್ಟಕ್ಕೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇನ್ನು, ಜನಪದಗೀತೆಯಲ್ಲಿ ವಸುಧಾ ಪ್ರಭು, ಮಿಮಿಕ್ರಿಯಲ್ಲಿ ಕೌಶಿಕ ನಾಯಕ, ಭರತನಾಟ್ಯದಲ್ಲಿ ಕಾವ್ಯಾ ಹೆಗಡೆಕಟ್ಟೆ, ಪಿಕ್ ಆಂಡ್ ಸ್ಪೀಚ್‌ನಲ್ಲಿ ಕಾರ್ತಿಕ ನಾಯ್ಕ, ಇಂಗ್ಲೀಷ್ ಭಾಷಣದಲ್ಲಿ ವಿ.ಎನ್.ಸಮೀಕ್ಷಾ, ಕನ್ನಡ ಭಾಷಣದಲ್ಲಿ ಚಿನ್ಮಯಿ ಭಂಡಾರಿ ದ್ವಿತೀಯ ಸ್ಥಾನಗಳನ್ನು ಅಲಂಕರಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಭಾವಗೀತೆ ಹಾಗೂ ಗಝಲ್‌ನಲ್ಲಿ ತೇಜಸ್ವಿನಿ ಶಾನಭಾಗ, ಛದ್ಮವೇಷ ಸ್ಪರ್ಧೆಯಲ್ಲಿ ಖುಷಿ ನಾಯ್ಕ ಇವರು ತೃತೀಯ ಸ್ಥಾನ ಗಳಿಸುವುದರ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ನೃತ್ಯ ಕಲೋತ್ಸವದಲ್ಲಿ ಖುಷಿ ನಾಯ್ಕ ಹಾಗೂ ಸಂಗಡಿಗರು ಅದ್ಭುತ ಪ್ರದರ್ಶನವನ್ನು ನೀಡಿ, ಪ್ರಥಮ ಸ್ಥಾನ ಗಿಟ್ಟಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಸಾಧನೆಯ ಕಿರೀಟಕ್ಕೆ ಕಳಸವನ್ನಿಟ್ಟು ಸ್ಪರ್ಧೆಯನ್ನು ಸಂಪನ್ನಗೊಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿಯರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು ಹಾಗೂ ಪಾಲಕರು ಪ್ರಶಂಸಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.