ತಾಲೂಕಾ ಮಟ್ಟದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಾಧನೆ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಂಘಟನೆಯಲ್ಲಿ ಕುಮಟಾದ ಮಹಾತ್ಮಾಗಾಂಧಿ ಮೈದಾನದಲ್ಲಿ ಇತ್ತೀಚಿಗೆ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸಿ.ವಿ.ಎಸ್.ಕೆ ಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ.

100 ಮೀ. ಓಟದಲ್ಲಿ ಸಾರ್ಥಕ ಪೈ ಪ್ರಥಮ, ಗುಂಡು ಎಸೆತದಲ್ಲಿ ತೃತೀಯ, ಆದರ್ಶ ನಾಯ್ಕ 100 ಮೀ. ಓಟದಲ್ಲಿ ದ್ವಿತೀಯ, ಉದ್ದಜಿಗಿತದಲ್ಲಿ ತೃತೀಯ, ತ್ರಿವಿಧ ಜಿಗಿತದಲ್ಲಿ ಪ್ರಥಮ, ಸಂಕಲ್ಪ ನಾಯ್ಕ 200 ಮೀ. ಹಾಗೂ 400 ಮೀ. ನಲ್ಲಿ ಪ್ರಥಮ, ಅನಿರುದ್ಧ ಭಟ್ಟಕೆರೆ 800 ಮೀ. ನಲ್ಲಿ ಪ್ರಥಮ, ಚರಣ ನಾಯ್ಕ 800 ಮೀ. ನಲ್ಲಿ ದ್ವಿತೀಯ ಹಾಗೂ ಭರ್ಚಿ ಎಸೆತದಲ್ಲಿ ದ್ವಿತೀಯ, ತಿಲಕ ನಾಯ್ಕ ಎತ್ತರ ಜಿಗಿತದಲ್ಲಿ ತೃತೀಯ, ಸುಹಾಗ ಭಂಡಾರಿ ಚಕ್ರ ಎಸೆತದಲ್ಲಿ ತೃತೀಯ, ನಿಸರ್ಗ ನಾಯ್ಕ 100 ಮೀ. ಓಟದಲ್ಲಿ ದ್ವಿತೀಯ, ಸಹನಾ ನಾಯ್ಕ 200 ಮೀ. ನಲ್ಲಿ ತೃತೀಯ, ಬಾಲಕಿಯರ 4×100 ರಿಲೇಯಲ್ಲಿ ಪ್ರಥಮ, ಬಾಲಕರ ಶಟಲ್ ಬ್ಯಾಡ್ಮಿಂಟನ್‌ನಲ್ಲಿ  ಪ್ರಥಮ, ಚೆಸ್‌ನಲ್ಲಿ ದೀಕ್ಷಾ ನಾಯ್ಕ ಪ್ರಥಮ, ಸೌರಭ ಶೆಟ್ಟಿ ತೃತೀಯ ಸ್ಥಾನಗಳನ್ನು ಗಳಿಸಿರುತ್ತಾರೆ.

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು, ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Share happily:

No Comment.