“ಕಪ್ಪು ಹಣದ ನಿಯಂತ್ರಣಕ್ಕೆ ನೋಟು ರದ್ದತಿ ಸಹಾಯಕವಾಗಿದೆ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಾ ಮಟ್ಟದ ಪದವಿ ಪೂರ್ವ, ಪದವಿ, ಡಿ.ಎಡ್., ಬಿ.ಎಡ್. ಹಾಗೂ ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ನಾಡು-ನುಡಿಯ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ದಿವಂಗತ ಶ್ರೀ ಪಿ.ಎಸ್.ಕಾಮತ ಸ್ಮರಣಾರ್ಥ ತಾಲೂಕಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಸರಸ್ವತಿ ಪದವಿ ಪೂರ್ವ ಕಾಲೇಜು ಕುಮಟಾದಲ್ಲಿ ನೇರವೇರಿಸಲಾಯಿತು.
ಸಂಘಟಕರಾದ ಶ್ರೀ ಅಶೋಕ ಭಟ್ಟ ಶಿಕ್ಷಕರು, ಕತಗಾಲ ಇವರ ಮಾರ್ಗದರ್ಶನದಲ್ಲಿ ನಡೆದ ಈ ಸ್ಪರ್ಧೆಗೆ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳು, ಚಿಂತಕರಾದ ಶ್ರೀ ಪುಟ್ಟು ಕುಲಕರ್ಣಿ, ಶ್ರೀ ಜಿ.ಎಸ್. ಭಟ್ಟ ನಿವೃತ್ತ ಪ್ರಾಂಶುಪಾಲರು ಏ.ವಿ.ಬಾಳಿಗ ವಾಣಿಜ್ಯ ಮಹಾವಿದ್ಯಾಲಯ, ಕುಮಟಾ ಮತ್ತು ಶ್ರೀಮತಿ ಸುಧಾ ಬಿ. ಗೌಡ ವಕೀಲರು ಮತ್ತು ಸಮಾಜ ಸೇವಾಕರ್ತರು ಮಚಗೋಣ, ಕುಮಟಾ ಇವರು ಆಗಮಿಸಿದ್ದರು.
ಚರ್ಚಾ ಸ್ಪರ್ಧೆಯಲ್ಲಿ ಶ್ರೀವರ ಎನ್. ನಾಯಕ, ಪ್ರಥಮ ಪಿ.ಯು. ವಿದ್ಯಾರ್ಥಿ ಸರಕಾರಿ ಪಿ.ಯು.ಕಾಲೇಜು ಹಿರೇಗುತ್ತಿ ಪ್ರಥಮ, ಸ್ನೇಹ ಎಸ್. ದೀಕ್ಷಿತ್ ಪ್ರಥಮ ಪಿಯು. ವಿದ್ಯಾರ್ಥಿ ಹನಮಂತ ಬೆಣ್ಣೆ ಸರಕಾರಿ ಪಿ.ಯು. ಕಾಲೇಜು ನೆಲ್ಲಿಕೇರಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮತ್ತು ಚೇತನ್ ಆರ್ ನಾಯಕ್ ಸರಕಾರಿ ಪಿ.ಯು.ಕಾಲೇಜು ಬಾಡ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮುರಳಿಧರ ಪ್ರಭು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸರಸ್ವತಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಲೋಚನಾ ರಾವ್.ಬಿ. ರವರು ಸ್ವಾಗತಿಸಿದರು. ನೇಹಾ ಶಾನಭಾಗ ಪ್ರಾರ್ಥಿಸಿ, ಉಪನ್ಯಾಸಕರಾದ ಶ್ರೀ ಚಿದಾನಂದ ಭಂಡಾರಿಯವರು ವಂದರ್ನಾಪಣೆ ಗೈದರು ಮತ್ತು ಸಾಯಿದೀಪ ಕಾರ್ಯಕ್ರಮವನ್ನು ನಿರೂಪಿಸಿದರು.