ಇತ್ತೀಚೆಗೆ ಏಮ್.ಜಿ.ಸಿ ಪದವಿ ಪೂರ್ವ ಕಾಲೇಜು ಸಿದ್ಧಾಪುರದಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಧನುಷ ವಿ ಹೆಗಡೆ 200ಮೀ ಓಟ ಪ್ರಥಮ ಸ್ಥಾನ ಪಡೆದು, ರಮ್ಯಶ್ರೀ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು, ಶಿಲ್ಪಾ ಕಿಣಿ, ವಾಣಿಶ್ರೀ ಮತ್ತು ರಮ್ಯಶ್ರೀ ಥ್ರೋಬಾಲ್ ನಲ್ಲಿ, ಸನ್ನಿಧಿ ಪ್ರಭು ಬ್ಯಾಟ್ ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.
ರಮ್ಯಶ್ರೀ ಭರ್ಜಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ, ಮಯೂರ್ ನಾಯ್ಕ ಹರ್ಡಲ್ಸನಲ್ಲಿ ತೃತೀಯ ಸ್ಧಾನ ಪಡೆದಿದ್ದಾನೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.