ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಪುಟಾಣಿಗಳ ಪ್ರತಿಭಾ ಪ್ರದರ್ಶನ

Share happily:

ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನೆರವೇರಿತು.

ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ಕೃಷ್ಣ ವೇಷ, ಹನುಮಂತನ ವೇಷ, ಬುಡಬುಡಕಿದಾಸ, ಬಳೆಗಾರನ ವೇಷ ಮುಂತಾದ ವೇಷಭೂಷಣ ಮಾಡಿ ಜನರಿಂದ ಮೆಚ್ಚುಗೆ ಗಳಿಸಿದರು.ನೃತ್ಯ, ಹಾಡು, ಕಥೆಗಳನ್ನು ಹೇಳಿ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹೊಮ್ಮಿಸಿದರು. ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಹಾಗೂ ಶೈಕ್ಷಣಿಕ ಸಲಹೆಗಾರರಾದ ಶ್ರೀ.ಆರ್.ಎಸ್.ದೇಶಭಂಡಾರಿಯವರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದು ಮಕ್ಕಳ ಪ್ರತಿಭೆಯ ಅನಾವರಣವನ್ನು ಕಣ್ತುಂಬಿಕೊಂಡರು.

Share happily:

Related posts

Leave a Comment