ಕ್ರೀಡಾ ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೊಂಕಣ ಎಜ್ಯುಕೇಶನ್ ವಿದ್ಯಾರ್ಥಿಗಳು

Share happily:

ತಾಲೂಕಿನ ಮಿರ್ಜಾನಿನ ಬಿ.ಜಿ.ಎಸ್.ಕೇಂದ್ರೀಯ ವಿದ್ಯಾಲಯದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ನಡೆದ ಕ್ರೀಡಾ ಕಲೋತ್ಸವದಲ್ಲಿ ಭಾಗವಹಿಸಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರ ಹಾಗೂ ಸಿ.ವಿ.ಎಸ್.ಕೆ.ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.

ಸರಸ್ವತಿ ವಿದ್ಯಾಕೇಂದ್ರ:
ವಿಘ್ನೇಶ ಹೊಸಮನೆ ಪೇಂಟಿಂಗ್‍ನಲ್ಲಿ ಪ್ರಥಮ, ಶ್ರೀರಾಮ ಜಿ. ಪಟಗಾರ ಚಿತ್ರಕಲೆಯಲ್ಲಿ ದ್ವಿತೀಯ, ಚಂದನ ಹೆಗಡೆ, ವಿಶೇಷ ಕಾಮತ್ ರಸಪ್ರಶ್ನೆಯಲ್ಲಿ ಪ್ರಥಮ, ಹರ್ಷಿತಾ ಎ.ಗೌಡ ರಂಗೋಲಿಯಲ್ಲಿ ಪ್ರಥಮ, ಶುಭಾ, ವಿಭಾ,ಖುಷಿ,ದೀಪಾ,ಶ್ರೇಯಾ,ಸುಷ್ಮಿತಾ ಇವರ ತಂಡ ಜಾನಪದ ನೃತ್ಯದಲ್ಲಿ ಪ್ರಥಮ ಹಾಗೂ ಸಂಜನಾ ಪಂಡಿತ್À ಸ್ಮರಣಶಕ್ತಿಯಲ್ಲಿ ದ್ವಿತೀಯ ಸ್ಥಾನ ಹಾಗೂ ಬಾಲಕರ ಕಬಡ್ಡಿ ತಂಡ ದ್ವಿತೀಯ ಮತ್ತು ಬಾಲಕಿಯರ ಕಬಡ್ಡಿ ತಂಡ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆದು ವಿಶೇಷ ಗಮನ ಸೆಳೆದರು.

ಸಿ.ವಿ.ಎಸ್.ಕೆ.ಪ್ರೌಢ ಶಾಲೆ:
ಶಿಲ್ಪಾ ಪಟಗಾರ ರಂಗೋಲಿಯಲ್ಲಿ ಪ್ರಥಮ, ವರುಣ ಹೆಗಡೆ ಮತ್ತು ಪ್ರಮೋದ ನಾಯ್ಕ ರಸಪ್ರಶ್ನೆಯಲ್ಲಿ ದ್ವಿತೀಯ, ಧನಶ್ರೀ,ಸಿಂಚನಾ,ಸಂಕಲ್ಪ,ರಂಜಿತಾ, ಅನನ್ಯ,ಅಪೂರ್ವ ತಂಡದವರು ಜಾನಪದ ನೃತ್ಯದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳನ್ನು ಸಂಸ್ಥೆಯವರ ವತಿಯಿಂದ ಹಾಗೂ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರ ವತಿಯಿಂದ ಅಭಿನಂದಿಸಲಾಯಿತು.

Share happily:

Related posts

Leave a Comment