ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸಂಜನಾ ಜೈರಾಮ ಭಟ್ಟ ಈಕೆ ಮರುಮೌಲ್ಯಮಾಪನದಲ್ಲಿ ಪೂರ್ಣಾಂಕ ಪಡೆಯುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಎಸ್.ಎಸ್.ಎಲ್.ಸಿ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈಕೆಗೆ 622 ಅಂಕ ಲಭಿಸಿತ್ತು, ಹೀಗಾಗಿ ಈಕೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿ ಪಡೆಯುವಂತಾಗಿತ್ತು. ಆದರೆ ಈಕೆ ಫಲಿತಾಂಶ ಬಂದ ಸಂದರ್ಭದಲ್ಲಿಯೂ 625 ಕ್ಕೆ 625 ಅಂಕಗಳನ್ನು ಪಡೆಯುವ ಭರವಸೆ ವ್ಯಕ್ತಪಡಿಸಿ ಮರುಮೌಲ್ಯಮಾಪನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಳು. ಇದೀಗ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಈಕೆ ರಾಜ್ಯದ ಟಾಪರ್ ಆಗಿ ಗುರುತಿಸಿಕೊಂಡಿದ್ದಾಳೆ. ನಿರಂತರ ಪರಿಶ್ರಮ ಹಾಗೂ ಶಾಲಾ ಮಟ್ಟದಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿಯೂ ಈಕೆ ಪೂರ್ಣ ಅಂಕಗಳನ್ನೇ ಪಡೆದವಳಾಗಿದ್ದಳು. ಸಂಸ್ಥೆಯವರೂ ಈಕೆಯ ಮೇಲೆ ಭರವಸೆ ಇಟ್ಟಿದ್ದರು. ಇದೀಗ ಈಕೆಯ ನೈಜ ಫಲಿತಾಂಶ ಹೊರಬಂದಿದ್ದು, ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಂಸ್ಥೆಯ ಮೂವರು ವಿದ್ಯಾರ್ಥಿಗಳು…
Read MoreMonth: June 2022
ಕುಮಟಾ: ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರೊಟ್ಟಿಗೆ ಒಳ್ಳೆಯ ಚಾರಿತ್ರತ್ರೆಯ ನಿರ್ಮಾಣ ಮಾಡಿಕೊಂಡು ದೇಶಭಕ್ತರಾಗಬೇಕು, ಆಗಲೇ ಜೀವನ ಸಾರ್ಥಕ ಎಂದು ಹುಬ್ಬಳ್ಳಿಯ ಶ್ರಿÃಮಾತಾ ಆಶ್ರಮದ ಮಾತಾಜೀ ತೇಜೋಮಯಿ ಅವರು ನುಡಿದರು. ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನವರು ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಾಧನೆಯ ಪ್ರಯತ್ನ ಇಲ್ಲಿಗೇ ಸೀಮಿತಗೊಳ್ಳದೆ ಮುಂದೆಯೂ ನಿರಂತರವಾಗಿ ಸಾಗಬೇಕು. ಸಾಧನೆಗೆ ಜೀವನದಲ್ಲಿ ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ, ಅವರ ಉನ್ನತ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಿ, ಸಾರ್ಥಕತೆಯ ಜೀವನವನ್ನು ಬಾಳಿ. ವಿವೇಕಾನಂದರ ದಯೆ ತಮ್ಮ ಮೇಲೆ ಸದಾ ಇರಲಿ ಎಂದು ವಿವೇಕಾನಂದರ ಕೆಲವು ದೃಷ್ಟಾಂತಗಳÀನ್ನು ಮಾರ್ಮಿಕವಾಗಿ ವಿವರಿಸುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರವಾರದ ಶ್ರಿÃ ರಾಮಕೃಷ್ಣ ಆಶ್ರಮದ ಶ್ರಿÃ ಭವೇಶಾನಂದ ಸ್ವಾಮೀಜಿಯವರು ಮಾತನಾಡಿ, ಕೊಂಕಣ ಎಂಬುದು ಸರಸ್ವತಿಯ ವಿದ್ಯಾಲಯ. ಇಲ್ಲಿ ಅಭ್ಯಾಸ ಮಾಡುವವರು ಭಾಗ್ಯವಂತರು.…
Read More