625 ಕ್ಕೆ 625 ಅಂಕ ಪಡೆದ ಸಿ.ವಿ.ಎಸ್.ಕೆ ಯ ಮೂವರು ರಾಜ್ಯಕ್ಕೇ ಫಸ್ಟ್..!

Share happily:

ಕುಮಟಾ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಿಸಿದೆ. ಈ ಹಿಂದಿನಿಂದಲೂ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮುನ್ನುಗ್ಗುತ್ತಿದ್ದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಕುಮಟಾ ತಾಲೂಕಿನ ಸಿವಿಎಸ್ ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ವರ್ಷವೂ ಅತ್ಯಮೋಘ ಸಾಧನೆ ಮಾಡುವ ಮೂಲಕ ಇಡೀ ರಾಜ್ಯ ಕುಮಟಾದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಕುಮಟಾದ ವಿದ್ಯಾಗಿರಿಯಲ್ಲಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕೊಲಾಬಾ ವಿಠೋಬಾ ಶಾನಭಾಗ ಕಲಭಾಗಕರ್ (ಸಿವಿಎಸ್ ಕೆ) ಪ್ರೌಢಶಾಲೆಯ ದೀಕ್ಷಾ ನಾಯ್ಕ, ಕಾರ್ತಿಕ ಭಟ್ಟ ಹಾಗೂ ಮೇಘನಾ ಭಟ್ಟ 625ಕ್ಕೆ 625 ಅಂಕ ಪಡೆದು ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ್ದಾರೆ. ಈ ಹಿಂದೆಯೂ ಓರ್ವ ವಿದ್ಯಾರ್ಥಿನಿ ಈ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ರಾಜ್ಯದಲ್ಲಿ ಎತ್ತರಿಸಿದ್ದಳು. ಈ ಮೂರು ವಿದ್ಯಾರ್ಥಿಗಳ…

Share happily:
Read More