ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಾಂಸ್ಕೃತಿಕ ಕಲಾ ಕೇಂದ್ರವಾದ, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರದ ಉದ್ಘಾಟನಾ ಸಮಾರಂಭ ಸಂಸ್ಥೆಯ ಆವಾರದಲ್ಲಿ ನಡೆಯಿತು. ಭಾರತೀಯ ಕಲಾ ಪ್ರಕಾರಗಳ ತರಗತಿಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮುರುಳಿಧರ ಪ್ರಭು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಒಂದು ಕಾಲದಲ್ಲಿ ಪಠ್ಯವಾದ ಶಿಕ್ಷಣ ಇದು ಸಹ ಪಠ್ಯವಾಗಿದೆ. ಅದು ಜೀವನವನ್ನು ಉಜ್ಜೀವನ ಗೊಳಿಸಲು ಇಂದು ಅಗತ್ಯವಾಗಿದೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ಈ ಕಲಾ ಕೇಂದ್ರವನ್ನು ಕಳೆದ 8-10 ವರ್ಷಗಳಿಂದ ಕೊಂಕಣ ಸಂಸ್ಥೆ ನಡೆಸಿಕೊಂಡು ಬಂದಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರಲ್ಲದೇ ಎಲ್ಲರೂ ಕಲಾದೇವತೆಯನ್ನು ಒಲಿಸಿಕೊಳ್ಳುವ ಮಾರ್ಗವನ್ನು ತಿಳಿಸಿಕೊಟ್ಟರು. ಟ್ರಸ್ಟಿನ ಹಿರಿಯ ವಿಶ್ವಸ್ಥರಾದ ಶ್ರೀ ರಮೇಶ್ ಪ್ರಭು ಮಾತನಾಡಿ ಕಲೆಯನ್ನು ಕರಗತ ಮಾಡಿಕೊಳ್ಳಲು ಸತತ ಪರಿಶ್ರಮ ಅಗತ್ಯ ಅದು ನಿರಂತರತೆಯಿದ್ದಾಗ, ತಪಸ್ಸಿನಂತೆ ಮಾಡಿದಾಗ, ಕಲೆ…
Read MoreYear: 2022
ಮರುಮೌಲ್ಯಮಾಪನದಲ್ಲಿ ಪೂರ್ಣಾಂಕ ಗಿಟ್ಟಿಸಿ ರಾಜ್ಯಕ್ಕೆ ಪ್ರಥಮಳಾದ ಕೊಂಕಣದ ಸಂಜನಾ ಭಟ್ಟ
ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸಂಜನಾ ಜೈರಾಮ ಭಟ್ಟ ಈಕೆ ಮರುಮೌಲ್ಯಮಾಪನದಲ್ಲಿ ಪೂರ್ಣಾಂಕ ಪಡೆಯುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಎಸ್.ಎಸ್.ಎಲ್.ಸಿ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈಕೆಗೆ 622 ಅಂಕ ಲಭಿಸಿತ್ತು, ಹೀಗಾಗಿ ಈಕೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿ ಪಡೆಯುವಂತಾಗಿತ್ತು. ಆದರೆ ಈಕೆ ಫಲಿತಾಂಶ ಬಂದ ಸಂದರ್ಭದಲ್ಲಿಯೂ 625 ಕ್ಕೆ 625 ಅಂಕಗಳನ್ನು ಪಡೆಯುವ ಭರವಸೆ ವ್ಯಕ್ತಪಡಿಸಿ ಮರುಮೌಲ್ಯಮಾಪನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಳು. ಇದೀಗ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಈಕೆ ರಾಜ್ಯದ ಟಾಪರ್ ಆಗಿ ಗುರುತಿಸಿಕೊಂಡಿದ್ದಾಳೆ. ನಿರಂತರ ಪರಿಶ್ರಮ ಹಾಗೂ ಶಾಲಾ ಮಟ್ಟದಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿಯೂ ಈಕೆ ಪೂರ್ಣ ಅಂಕಗಳನ್ನೇ ಪಡೆದವಳಾಗಿದ್ದಳು. ಸಂಸ್ಥೆಯವರೂ ಈಕೆಯ ಮೇಲೆ ಭರವಸೆ ಇಟ್ಟಿದ್ದರು. ಇದೀಗ ಈಕೆಯ ನೈಜ ಫಲಿತಾಂಶ ಹೊರಬಂದಿದ್ದು, ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಂಸ್ಥೆಯ ಮೂವರು ವಿದ್ಯಾರ್ಥಿಗಳು…
Read Moreಕುಮಟಾ: ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರೊಟ್ಟಿಗೆ ಒಳ್ಳೆಯ ಚಾರಿತ್ರತ್ರೆಯ ನಿರ್ಮಾಣ ಮಾಡಿಕೊಂಡು ದೇಶಭಕ್ತರಾಗಬೇಕು, ಆಗಲೇ ಜೀವನ ಸಾರ್ಥಕ ಎಂದು ಹುಬ್ಬಳ್ಳಿಯ ಶ್ರಿÃಮಾತಾ ಆಶ್ರಮದ ಮಾತಾಜೀ ತೇಜೋಮಯಿ ಅವರು ನುಡಿದರು. ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನವರು ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಾಧನೆಯ ಪ್ರಯತ್ನ ಇಲ್ಲಿಗೇ ಸೀಮಿತಗೊಳ್ಳದೆ ಮುಂದೆಯೂ ನಿರಂತರವಾಗಿ ಸಾಗಬೇಕು. ಸಾಧನೆಗೆ ಜೀವನದಲ್ಲಿ ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ, ಅವರ ಉನ್ನತ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಿ, ಸಾರ್ಥಕತೆಯ ಜೀವನವನ್ನು ಬಾಳಿ. ವಿವೇಕಾನಂದರ ದಯೆ ತಮ್ಮ ಮೇಲೆ ಸದಾ ಇರಲಿ ಎಂದು ವಿವೇಕಾನಂದರ ಕೆಲವು ದೃಷ್ಟಾಂತಗಳÀನ್ನು ಮಾರ್ಮಿಕವಾಗಿ ವಿವರಿಸುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರವಾರದ ಶ್ರಿÃ ರಾಮಕೃಷ್ಣ ಆಶ್ರಮದ ಶ್ರಿÃ ಭವೇಶಾನಂದ ಸ್ವಾಮೀಜಿಯವರು ಮಾತನಾಡಿ, ಕೊಂಕಣ ಎಂಬುದು ಸರಸ್ವತಿಯ ವಿದ್ಯಾಲಯ. ಇಲ್ಲಿ ಅಭ್ಯಾಸ ಮಾಡುವವರು ಭಾಗ್ಯವಂತರು.…
Read More625 ಕ್ಕೆ 625 ಅಂಕ ಪಡೆದ ಸಿ.ವಿ.ಎಸ್.ಕೆ ಯ ಮೂವರು ರಾಜ್ಯಕ್ಕೇ ಫಸ್ಟ್..!
ಕುಮಟಾ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಿಸಿದೆ. ಈ ಹಿಂದಿನಿಂದಲೂ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮುನ್ನುಗ್ಗುತ್ತಿದ್ದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಕುಮಟಾ ತಾಲೂಕಿನ ಸಿವಿಎಸ್ ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ವರ್ಷವೂ ಅತ್ಯಮೋಘ ಸಾಧನೆ ಮಾಡುವ ಮೂಲಕ ಇಡೀ ರಾಜ್ಯ ಕುಮಟಾದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಕುಮಟಾದ ವಿದ್ಯಾಗಿರಿಯಲ್ಲಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕೊಲಾಬಾ ವಿಠೋಬಾ ಶಾನಭಾಗ ಕಲಭಾಗಕರ್ (ಸಿವಿಎಸ್ ಕೆ) ಪ್ರೌಢಶಾಲೆಯ ದೀಕ್ಷಾ ನಾಯ್ಕ, ಕಾರ್ತಿಕ ಭಟ್ಟ ಹಾಗೂ ಮೇಘನಾ ಭಟ್ಟ 625ಕ್ಕೆ 625 ಅಂಕ ಪಡೆದು ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ್ದಾರೆ. ಈ ಹಿಂದೆಯೂ ಓರ್ವ ವಿದ್ಯಾರ್ಥಿನಿ ಈ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ರಾಜ್ಯದಲ್ಲಿ ಎತ್ತರಿಸಿದ್ದಳು. ಈ ಮೂರು ವಿದ್ಯಾರ್ಥಿಗಳ…
Read Moreಕೊಂಕಣದಲ್ಲಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ವಿಶ್ವ ಸಾರಸ್ವತ ಫೆಡರೇಶನ್ ಅಧ್ಯಕ್ಷ ಹಾಗೂ ಹಾಂಗ್ಯೊ ಐಸ್ಕ್ರೀಂ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ ಪೈ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು, 97 ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಇಂದು ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಕಲಿಯುವ ಆಸಕ್ತಿ ಇರುವ ಸರಿ ಸುಮಾರು 50 ಬಡ ಪ್ರತಿಭಾವಂತ ಮಕ್ಕಳಿಗೆ ಬಹುತೇಕ ಎಲ್ಲವೂ ಉಚಿತ ಮಾಡಿದ್ದೇವೆ. ದಿನಕರ ದೇಸಾಯಿಯವರ ಆದರ್ಶವನ್ನು ಮುಂದಿಟ್ಟು ಶಿಕ್ಷಣ ದಾನಿಗಳಿಂದಲೇ ನಡೆಸಿಕೊಂಡು ಹೋಗುತ್ತಿರುವ ಸಂಸ್ಥೆ ಇದಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಟಾಪ್ 10 ರ್ಯಾಂಕ್ನಲ್ಲಿ ಪ್ರತಿ ವರ್ಷ ನಮ್ಮ ಶಾಲೆಯ ಐದರಿಂದ ಆರು ವಿದ್ಯಾರ್ಥಿಗಳಾದರೂ ಇದ್ದೇ ಇರುತ್ತಾರೆ ಎಂಬುದು ನಮಗೆ ಹೆಮ್ಮೆ. ಈ ಸಂಸ್ಥೆ ಗೆ ಪ್ರದೀಪ…
Read Moreಕೊಂಕಣದ ಎಟಿಎಲ್ನಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಎಕ್ಸ್ಪೋ 2022
ಕುಮಟಾ: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್(ಎಟಿಎಲ್)ನ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ(ಎಕ್ಸ್ಪೋ 2022)ವನ್ನು ಏರ್ಪಡಿಸಲಾಗಿತ್ತು. ಜೆ.ಸಿ.ಕಾಲೇಜ್ ಅಂಕೋಲಾದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ವಿ.ಆರ್.ವೆರ್ಣೇಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಒತ್ತಡದ ಬದುಕು ಹಾಗೂ ಸ್ಮರಣಶಕ್ತಿಯ ಕುರಿತಾಗಿ ಮನೋಜ್ಞವಾಗಿ ವಿವರಿಸಿದರು. ಸ್ಮರಣಶಕ್ತಿ ವಂಶಪಾರಂಪರ್ಯವಲ್ಲ, ಅದು ನಮ್ಮ ಸ್ವಂತ ಶಕ್ತಿ. ಪಂಚೇಂದ್ರಿಯಗಳಿಗೆ ಸಂಸ್ಕಾರ ನೀಡಿ ಅದನ್ನು ವರ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಹತ್ತು-ಹಲವು ಉದಾಹರಣೆಗಳೊಂದಿಗೆ ವಿವರಿಸಿ, ಕಲಿಕೆಯಲ್ಲಿ ಕಠಿಣ ಪರಿಶ್ರಮ ಅಗತ್ಯ ಹಾಗೂ ಅನಿವಾರ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ಮಾತನಾಡಿದ ಇನ್ನೋರ್ವ ಅತಿಥಿಗಳಾದ ಮಂಗಳೂರು ಇನಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಆಂಡ್ ಎಂಜಿನಿಯರಿಂಗ್ ರಸಾಯನಶಾಸ್ತೃ ವಿಭಾಗದ ನಿಕಟಪೂರ್ವ ಹಿರಿಯ ಸಹಾಯಕ ಉಪನ್ಯಾಸಕರಾದ ಡಾ. ಅಪರ್ಣಾ ಪಿ.ಐ.ಭಟ್ಟ, ಪ್ರಶ್ನೆಗಳನ್ನು ಮಾಡುವುದರ ಮೂಲಕ…
Read Moreಕೊಂಕಣದಲ್ಲಿ ಗಣರಾಜ್ಯೋತ್ಸವ ಆಚರಣೆ
ಕುಮಟಾ: 73ನೆಯ ಗಣರಾಜ್ಯೋತ್ಸವದ ಅಂಗವಾಗಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಧ್ವಜಾರೋಹಣಗೈದು ಮಾತನಾಡುತ್ತ, ಪ್ರಜಾಪ್ರಭುತ್ವ ನಮ್ಮ ಪಾಲಿಗೆ ವರದಾನವಾದರೂ ಇಂದು ಅದರ ಪ್ರಜಾಪ್ರಭುತ್ವದ ಅಗತ್ಯವಿದೆಯೇ ಎಂದು ವಿಮರ್ಶಿಸುವ ಪರಿಸ್ಥಿತಿ ಉಂಟಾದದ್ದು ವಿಪರ್ಯಾಸವೇ ಸರಿ. ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ರವರ ಅಧ್ಯಕ್ಷತೆಯಲ್ಲಿ ರೂಪಿತವಾದ ಈ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ಓದಿ, ಅರ್ಥೈಸಿಕೊಂಡು, ಅದರ ಆಶಯಗಳನ್ನು ಅಳವಡಿಸಿಕೊಂಡು ಬದುಕಬೇಕಾದ ಅಗತ್ಯತೆ ಇದೆ ಎಂದರು. ಸಂವಿಧಾನವನ್ನು ಗೌರವಿಸುವ, ದೇಶದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಭಾರತವನ್ನು ವಿಶ್ವಗುರುವಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು. ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ, ಟ್ರಸ್ಟಿಗಳಾದ ಅನಂತ ಶಾನಭಾಗ, ವಿಶ್ರಾಂತ ಮುಖ್ಯಾಧ್ಯಾಪಕರಾದ ಎಂ.ಎಂ.ಹೆಗಡೆ, ವಿಧಾತ್ರಿಯ ಗುರುರಾಜ ಶೆಟ್ಟಿ, ಅಂಗಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಈ…
Read More