ಸಿವಿಎಸ್‌ಕೆ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರ್ತಿ ಸರ್ ಅವರಿಂದ ಕಾರ್ಯಾಗಾರ

Share happily:

ಕುಮಟಾ ಎಪ್ರಿಲ್  3: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ  ಸಿವಿಎಸ್‌ಕೆ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರವಾರದ ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ವೆಂಕಟೇಶ ಮೂರ್ತಿ ಅವರಿಂದ “ಎಸ್ಎಸ್ಎಲ್‌ಸಿ ಪರೀಕ್ಷೆ ಯುದ್ಧವಲ್ಲ ಆಟ” ಎಂಬ ವಿಷಯದ ಬಗ್ಗೆ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು ಹೇಗೆ? ಓದಿದ ವಿಷಯವನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಏನು ಮಾಡಬೇಕು? ‌ಮುಂತಾದ ಕೌಶಲದ ಕುರಿತು ವಿದ್ಯಾರ್ಥಿಗಳು ಸಂವಾದದ ಮೂಲಕ ಅರಿತುಕೊಳ್ಳಲು ಈ ಕಾರ್ಯಾಗಾರ ಅನುಕೂಲ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು, ಸಮಾಜ ಸೇವಿ ಅಜಯ ಸಾಹುಕಾರ, ಆರ್.ಎಚ್.ದೇಶಭಂಡಾರಿ, ಮುಖ್ಯ ಶಿಕ್ಷಕಿ ಸುಮಾ ಪ್ರಭು ಹಾಗೂ ಶಿಕ್ಷಕ, ಶಿಕ್ಷಕಿಯರು  ಹಾಜರಿದ್ದರು.

Share happily:
Read More