ಕೊಂಕಣ ಎಜ್ಯುಕೇಶನ್ ಟ್ರಸ್ಟ್ ದಿವಂಗತ ಬಿ. ಕೆ. ಭಂಡಾರಕರರಿಗೆ ಚಿರಋಣಿ : ಮುರಳೀಧರ ಪ್ರಭು

Share happily:

ಕೊಂಕಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ “ಜ್ಞಾನಾಮೃತ 2019” ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ ಕುಮಟಾ ದಿ. 27-12-2019: ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ಬಂಟ್ವಾಳ ಕೃಷ್ಣ ಭಂಡಾರಕರ ಅವರ ಬದುಕು ಎಲ್ಲರಿಗೂ ಮಾದರಿಯಾಗಿದ್ದು ನಮ್ಮ ಸಂಸ್ಥೆಗೆ ಅವರು ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯವಾದದ್ದು. ಬಲಗೈ ನೀಡಿದ್ದು ಎಡಗೈಗೆ ತಿಳಿಯಬಾರದು ಎಂಬ ನಿಲುವು ಅವರದಾಗಿತ್ತು ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಅವರು ಅಭಿಪ್ರಾಯಪಟ್ಟರು. ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ದಿನಾಂಕ 27-12-2019 ಶುಕ್ರವಾರದಂದು ಆಯ್ದ ಪ್ರೌಢಶಾಲೆಗಳ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಜರುಗಿದ “ಜ್ಞಾನಾಮೃತ 2019” ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಿವಂಗತ ಬಿ. ಕೆ.  ಭಂಡಾರಕರ ಅವರಿಗೆ ನುಡಿನಮನ ಸಲ್ಲಿಸುತ್ತ ಮಾತನಾಡಿದ ಅವರು, ದಕ್ಷಿಣ ಕನ್ನಡದಿಂದ ನಮ್ಮ ಜಿಲ್ಲೆಗೆ ಬಂದು ಯಶಸ್ವಿಯಾಗಿ ಉದ್ಯಮ ನೆಡೆಸಿದ ಭಂಡಾರಕರ ಅವರು ಉತ್ತರಕನ್ನಡದಲ್ಲಿ ನಿರುದ್ಯೋಗ ತೊಲಗಬೇಕು, ವಿದ್ಯಾರ್ಥಿಗಳು…

Share happily:
Read More