ಕೊಂಕಣ ಎಜ್ಯುಕೇಶನ್ ಟ್ರಸ್ಟ್ ದಿವಂಗತ ಬಿ. ಕೆ. ಭಂಡಾರಕರರಿಗೆ ಚಿರಋಣಿ : ಮುರಳೀಧರ ಪ್ರಭು

Share happily:

ಕೊಂಕಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ “ಜ್ಞಾನಾಮೃತ 2019” ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ ಕುಮಟಾ ದಿ. 27-12-2019: ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ಬಂಟ್ವಾಳ ಕೃಷ್ಣ ಭಂಡಾರಕರ ಅವರ ಬದುಕು ಎಲ್ಲರಿಗೂ ಮಾದರಿಯಾಗಿದ್ದು ನಮ್ಮ ಸಂಸ್ಥೆಗೆ ಅವರು ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯವಾದದ್ದು. ಬಲಗೈ ನೀಡಿದ್ದು ಎಡಗೈಗೆ ತಿಳಿಯಬಾರದು ಎಂಬ ನಿಲುವು ಅವರದಾಗಿತ್ತು ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಅವರು ಅಭಿಪ್ರಾಯಪಟ್ಟರು. ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ದಿನಾಂಕ 27-12-2019 ಶುಕ್ರವಾರದಂದು ಆಯ್ದ ಪ್ರೌಢಶಾಲೆಗಳ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಜರುಗಿದ “ಜ್ಞಾನಾಮೃತ 2019” ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಿವಂಗತ ಬಿ. ಕೆ.  ಭಂಡಾರಕರ ಅವರಿಗೆ ನುಡಿನಮನ ಸಲ್ಲಿಸುತ್ತ ಮಾತನಾಡಿದ ಅವರು, ದಕ್ಷಿಣ ಕನ್ನಡದಿಂದ ನಮ್ಮ ಜಿಲ್ಲೆಗೆ ಬಂದು ಯಶಸ್ವಿಯಾಗಿ ಉದ್ಯಮ ನೆಡೆಸಿದ ಭಂಡಾರಕರ ಅವರು ಉತ್ತರಕನ್ನಡದಲ್ಲಿ ನಿರುದ್ಯೋಗ ತೊಲಗಬೇಕು, ವಿದ್ಯಾರ್ಥಿಗಳು…

Share happily:
Read More

ಕೊಂಕಣದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

District Level Pratibha Karanji Winners 2019
Share happily:

ಕುಮಟಾ: ಹೊನ್ನಾವರದ ಹೋಲಿ ರೋಸರಿ ಶಾಲೆಯಲ್ಲಿ ನಡೆದ ಈ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್‍ ಟ್ರಸ್ಟ್‍ನ ಸಿ.ವಿ.ಎಸ್‍.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಸಾಲಿನ ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಯಲ್ಲಿ ರಾಜ್ಯದ ಟಾಪ್‍ ಟೆನ್‍ ರ‍್ಯಾಂಕ್‍ಗಳಲ್ಲಿ ಒಟ್ಟು ಹತ್ತು ರ‍್ಯಾಂಕ್‍ಗಳನ್ನು ತಮ್ಮದಾಗಿಸಿ ಹೊಸ ಭಾಷ್ಯೆ ಬರೆದು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಕೊಂಕಣದ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗುವುದರ ಮೂಲಕ ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ತಾವು ಮುಂದು ಎಂದು ಸಾಬೀತುಪಡಿಸಿದ್ದಾರೆ. ಭಾವಗೀತೆ ಸ್ಪರ್ಧೆಯಲ್ಲಿ ಶಿಲ್ಪಾ ಭಟ್ಟ, ಆಶುಭಾಷಣದಲ್ಲಿ ಕಾರ್ತಿಕ ನಾಯ್ಕ, ಕೊಂಕಣಿ ಭಾಷಣದಲ್ಲಿ ನಮಿತಾ ಭಟ್‍, ರಂಗೋಲಿಯಲ್ಲಿ ಖುಷಿ ಭಂಡಾರಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜನಪದಗೀತೆಯಲ್ಲಿ ಅಭೇದಾ ಭಟ್ಟ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಈ ಮೂಲಕ ಅತೀ…

Share happily:
Read More