ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳ ಸಾಧನೆ

Taluka Level Pratibha Karanji 2019
Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ನೆಲ್ಲಿಕೇರಿಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಮೋಘ ಸಾಧನೆಗೈದಿದ್ದಾರೆ. ನಮಿತಾ ವಿ. ಭಟ್ಟ ಕೊಂಕಣಿ ಭಾಷಣ, ದ್ರವ್ಯಾ ಹೆಗಡೆ ಮರಾಠಿ ಭಾಷಣ, ಕಾರ್ತಿಕ ನಾಯಕ ಆಶು ಭಾಷಣ, ಶಿಲ್ಪಾ ಭಟ್ಟ ಭಾವಗೀತೆ, ಅಭೇದಾ ಭಟ್ಟ ಜನಪದಗೀತೆ, ಹಾಗೂ ಖುಷಿ ಭಂಡಾರಿ ರಂಗೋಲಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ಪ್ರಥ್ವಿ ಹೆಗಡೆ ಸಂಸ್ಕೃತ ಭಾಷಣ, ಕಾರ್ತಿಕ ಶುಕ್ಲ ಸಂಸ್ಕೃತ ಧಾರ್ಮಿಕ ಪಠಣ, ಹಾಗೂ ಪ್ರತೀಕ್ಷಾ ನಾಯಕ ಗಝಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ, ಚಂದನ ಹೆಗಡೆ ಸಿದ್ಧ ಭಾಷಣ, ಹಾಗೂ ಅಕ್ಷತಾ ಭಟ್ಟ ಭರತನಾಟ್ಯದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಎಲ್ಲಾ ಸಾಧನೆಗೆ ಶಾಲೆಯ ಆಡಳಿತ ಮಂಡಳಿ,…

Share happily:
Read More

ಕೊಂಕಣದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ 2019
Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಂಗ ಸಂಸ್ಥೆಗಳಿಂದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಭಾರತ ಹಾಗೂ ಕರ್ನಾಟಕದ ನಕಾಶೆಯನ್ನು ಅಂದವಾಗಿ ಬಿಡಿಸಿ, ಅವುಗಳನ್ನು ದೀಪಗಳಿಂದ ಬೆಳಗಿಸಿ, ಹೂಗಳಿಂದ ಅಲಂಕರಿಸಿ ಕನ್ನಡಾಂಬೆಯನ್ನು ವಂದಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಭಾಷಣ, ದೇಶಭಕ್ತಿ ಗೀತೆ, ನೃತ್ಯ ರೂಪಕಗಳ ಮೂಲಕ ಕನ್ನಡಾಭಿಮಾನವನ್ನು ಪ್ರದರ್ಶಿಸಿದರು. ಸಿ.ವಿ.ಎಸ್.ಕೆ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಸುಮಾ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕ ಪ್ರಕಾಶ ಗಾವಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ತರುವಾಯ ಪರದೇಶಕ್ಕೆ ಹೋಗಿ ಸೇವೆ ಸಲ್ಲಿಸುವುದರ ಬದಲು ತಾವು ಹುಟ್ಟಿ-ಬೆಳೆದ ನಾಡಿನಲ್ಲಿಯೇ ಕೈಂಕರ್ಯಗೈದು ಕನ್ನಡಾಂಬೆಯ ಸೇವೆ ಮಾಡಿದರೆ ಮಾತ್ರ ಅದಕ್ಕೊಂದು ಅರ್ಥ ಎಂದು ಕಿವಿಮಾತು ಹೇಳಿದರು. ಶಿಕ್ಷಕ ಚಿದಾನಂದ ಭಂಡಾರಿ ವಂದಿಸಿದರು, ವಿದ್ಯಾರ್ಥಿನಿಯರಾದ ಆಶ್ರಿತಾ ಹಾಗೂ ಶಾಂತಲಾ ನಿರೂಪಿಸಿದರು. ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share happily:
Read More