ಕೊಂಕಣದ ಅಂಗಳದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಇಸ್ರೋ

Share happily:

ಕುಮಟಾ: ಯು.ಎಸ್.ಎಸ್.ಆರ್. ಅರ್ಸ್ಟೈಲ್‌ನಿಂದ ಅಕ್ಟೋಬರ್ ೦೪, ೧೯೫೭ ರಂದು ಉಡಾಯಿಸಲ್ಪಟ್ಟ “ಸ್ಪುಟ್ನಿಕ್”ನ ಸ್ಮರಣಾರ್ಥ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ವಿಶ್ವದ ಎಲ್ಲಾ ರಾಷ್ಟ್ರಗಳು ಅಕ್ಟೋಬರ್ ೪ ರಿಂದ ೧೦ರವರೆಗೆ ‘ವಿಶ್ವ ಬಾಹ್ಯಾಕಾಶ ಸಪ್ತಾಹ’ವನ್ನು ಆಚರಿಸುತ್ತಿವೆ. ಇದರ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇವರು ಕರ್ನಾಟಕದ ಕೆಲವೇ ಕೆಲವು ಆಯ್ದ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನಜೀವನವನ್ನು, ಸಮಾಜವನ್ನು ಉನ್ನತೀಕರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಇಸ್ರೋದ ವಿಜ್ಞಾನಿ ಎಚ್.ಎನ್.ಸುರೇಶಕುಮಾರ ಅಭಿಪ್ರಾಯಪಟ್ಟರು. ದಿ. ೦೫-೧೦-೨೦೧೯ ಶನಿವಾರ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪಗ್ರಹ ಉಡಾವಣೆ ಹಾಗೂ ಅದರ ಮಹತ್ವ ಮತ್ತು ಲಾಭಗಳ ಕುರಿತು ಜನ ಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವುದು ನಮ್ಮ ಘನ ಉದ್ದೇಶವಾಗಿದ್ದು ಅದಕ್ಕಾಗಿ ಈ ಸಪ್ತಾಹವನ್ನು ಇಸ್ರೋ ಹಮ್ಮಿಕೊಂಡಿದೆ ಎಂದು ಅದಕ್ಕೆ ಸಂಬಂಧಿಸಿದ ಪಿಪಿಟಿ…

Share happily:
Read More