ಕೊಂಕಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಂಗಸಂಸ್ಥೆಗಳಿಂದ ೭೩ ನೇ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಟ್ರಸ್ಟಿನ ಅಧ್ಯಕ್ಷರಾದ ವಿಠ್ಠಲ ನಾಯಕ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ವಕ್ತಾರರಾಗಿ ಆರ್.ಎಸ್.ಎಸ್ ಸಂಘಟನೆಯ ಮುಖ್ಯಸ್ಥರಾದ ಆರ್.ಸು.ರಾಮಣ್ಣ ಮಾತನಾಡಿ, ಇತಿಹಾಸವನ್ನು ಯಾರೂ ಮರೆಯದೆ ವರ್ತಮಾನದ ಸಂಕಟಗಳನ್ನು, ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ನಮಗೆಲ್ಲರಿಗೂ ಬರಬೇಕು. ಅದರ ಪರಿಣಾಮ ನಮ್ಮ ಭವಿಷ್ಯ ಉಜ್ವಲವಾಗಿ ಬೆಳಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ವಾತಂತ್ರ್ಯಕ್ಕಾಗಿ ನಾವು ತೆರಬೇಕಾದ ಬೆಲೆ ಸತತ ಜಾಗರೂಕತೆ. ಭವಿಷ್ಯದಲ್ಲಿ ಭಾರತದ ಪರಿಪೂರ್ಣವಾಗಿ ಪುನರ್ನಿರ್ಮಾಣ ಮಾಡಬೇಕಾದ ಅಗತ್ಯತೆಗಳನ್ನು ಸವಿವರವಾಗಿ ಅತ್ಯಂತ ಮನಮುಟ್ಟುವಂತೆ ವಿವರಿಸುವುದರ ಜೊತೆಗೆ ಇಂದು ಭಾರತ ಅಖಂಡವಾಗಿದೆ ಎಂದು ಮಾರ್ಮಿಕವಾಗಿ ತಿಳಿಸಿದರು. ಗೌರವ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು, ಟ್ರಸ್ಟಿಗಳಾದ ರಮೇಶ ಪ್ರಭು, ಡಾ. ವೆಂಕಟೇಶ ಶಾನಭಾಗ, ರಾಮನಾಥ ಕಿಣಿ, ದಾಸಾ ಆರ್. ಶಾನಭಾಗ, ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳ…

Share happily:
Read More