ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರದ ವಿಶೇಷವಾಗಿ Maths Talent Show

Share happily:

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರದ ವಿಶೇಷವಾಗಿ ನಡೆದ Maths Talent Show ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು, ರುಬಿಕ್ಯ್ ಕ್ಯೂಬ್ , ಉಲ್ಟಾ ಮಗ್ಗಿ, ಗಣಿತಜ್ಞರ ಕುರಿತಾದ ಮಾಹಿತಿ, ಅಬಾಕಸ್ ಲೆಕ್ಕಗಳ ಮೂಲಕ ಮಕ್ಕಳು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ನಾಯ್ಕ, ಶಿಕ್ಷಕಿಯರಾದ ಮಹೇಶ್ವರಿ ನಾಯ್ಕ, ಉಷಾ ಭಟ್ಟ, ಉಷಾ ನಾಯ್ಕ, ಕಾವ್ಯಶ್ರೀ ಪಟಗಾರ ಸಹಕರಿಸಿದರು.

Share happily:
Read More

ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿಜ್ಞಾನ ರೋಚಕದ ಕುರಿತು ಮಾಹಿತಿ ಕಾರ್ಯಕ್ರಮ.

Share happily:

ಕುಮಟಾ : ಚಂದ್ರನಲ್ಲಿಗೆ ಮನುಷ್ಯ ಹೋಗಿದ್ದು 20ನೆಯ ಶತಮಾನದ ಮಹತ್ವದ ಬಾಹ್ಯಾಕಾಶ ಸಾಧನೆಯಾಗಿದೆ. ಚಂದ್ರನಿದ್ದಲ್ಲಿಗೆ ಮಾನವ ಪಯಣದ ದಾರಿಯೇ ರೋಚಕ ಅಂತಹ ಘಟನೆಗಳ ಬಗ್ಗೆ ಮಕ್ಕಳು ಕುತೂಹಲ ಬೆಳೆಸಿಕೊಳ್ಳಬೇಕಾಗಿದೆ ಎಂದು ಶಿಕ್ಷಕಿ ತನುಜಾ ನಾಯ್ಕ ಅಭಿಪ್ರಾಯಪಟ್ಟರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ನಡೆದ ಚಂದ್ರನ ಮೇಲೆ ಮಾನವ ಕಾಲಿಟ್ಟ ದಿನದ ಬಗ್ಗೆ ವಿವರಿಸುವ ವಿಶೇಷ ಕಾರ್ಯಕ್ರಮ ಹಾಗೂ “ಆಧುನಿಕ ತಳಿವಿಜ್ಞಾನದ ಪಿತಾಮಹ” ಎಂದೇ ಖ್ಯಾತರಾದ ಗ್ರೆಗೋರ್ ಜೊಹಾನ್ ಮೆಂಡಲ್ ಅವರ ಜನ್ಮದಿನದ ಕುರಿತಾಗಿ ಮಕ್ಕಳಿಗೆ ಮಾಹಿತಿ ನೀಡಿದರು. ಬಾಹ್ಯಾಕಾಶದಲ್ಲಿನ ಇದುವರೆಗಿನ ಪ್ರಮುಖ ಸಾಧನೆಯೆಂದರೆ ಚಂದ್ರನ ಮೇಲೆ ಮಾನವ ಪದಾರ್ಪಣೆ ಮಾಡಿದ್ದು. ಚಂದ್ರನ ಮೇಲೆ ಮನುಷ್ಯ ಇಳಿದು, ನಡೆದಾಡಿದ್ದು 20ನೆಯ ಶತಮಾನದ ಮಹತ್ವದ ಬಾಹ್ಯಾಕಾಶ ಸಾಧನೆಯಾಗಿದೆ. ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಪೂರ್ವದಲ್ಲಿ ಅದಕ್ಕಾಗಿ ಅನೇಕ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಯಿತು. ಚಂದ್ರನನ್ನು ಅಭ್ಯಸಿಸಲು ಮೊದಲು…

Share happily:
Read More

ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ಸಾಧನೆ.

Share happily:

ಕುಮಟಾ: ಶಾಂಕರ ತತ್ವ ಪ್ರಸಾರ ಸಮಿತಿ ಕುಮಟಾ ಇವರು ಜು.16 ರಂದು ತಾಲೂಕಿನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡ ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಶಿವ ಪಂಚಾಕ್ಷರ ಸ್ತೋತ್ರ ಹಾಗೂ ಶಂಕರಾಚಾರ್ಯ ವಿರಚಿತ ಭಜಗೋವಿಂದಂ ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ, ಸಾಧನೆ ಮಾಡಿದ್ದಾರೆ. 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಶಿವ ಪಂಚಾಕ್ಷರ ಸ್ತೋತ್ರ ಪಠಣ ಸ್ಫರ್ಧೆಯಲ್ಲಿ ಶ್ರೇಯಾ ಗಿರೀಶ ಹೆಬ್ಬಾರ ಪ್ರಥಮ ಸ್ಥಾನ ಪಡೆದರೆ, 6 ರಿಂದ 8ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಭಜಗೋವಿಂದಂ ಸ್ತೋತ್ರ ಪಠಣದ ಸ್ಪರ್ಧೆಯಲ್ಲಿ ಸೃಜನಾ ಡಿ ನಾಯಕ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡುವ ಜೊತೆಗೆ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಹಾಗೂ ಶಾಲಾ ಸಾಂಸ್ಕೃತಿಕ ಸಮಿತಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

Share happily:
Read More