ದಿವಂಗತ ಶ್ರೀ ಪಿ.ಎಸ್.ಕಾಮತ ಸ್ಮರಣಾರ್ಥ ತಾಲೂಕಾ ಮಟ್ಟದ ಚರ್ಚಾ ಸ್ಪರ್ಧೆ

Share happily:

“ಕಪ್ಪು ಹಣದ ನಿಯಂತ್ರಣಕ್ಕೆ ನೋಟು ರದ್ದತಿ ಸಹಾಯಕವಾಗಿದೆ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಾ ಮಟ್ಟದ ಪದವಿ ಪೂರ್ವ, ಪದವಿ, ಡಿ.ಎಡ್., ಬಿ.ಎಡ್. ಹಾಗೂ ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ನಾಡು-ನುಡಿಯ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ದಿವಂಗತ ಶ್ರೀ ಪಿ.ಎಸ್.ಕಾಮತ ಸ್ಮರಣಾರ್ಥ ತಾಲೂಕಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಸರಸ್ವತಿ ಪದವಿ ಪೂರ್ವ ಕಾಲೇಜು ಕುಮಟಾದಲ್ಲಿ ನೇರವೇರಿಸಲಾಯಿತು. ಸಂಘಟಕರಾದ ಶ್ರೀ ಅಶೋಕ ಭಟ್ಟ ಶಿಕ್ಷಕರು, ಕತಗಾಲ ಇವರ ಮಾರ್ಗದರ್ಶನದಲ್ಲಿ ನಡೆದ ಈ ಸ್ಪರ್ಧೆಗೆ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳು, ಚಿಂತಕರಾದ ಶ್ರೀ ಪುಟ್ಟು ಕುಲಕರ್ಣಿ, ಶ್ರೀ ಜಿ.ಎಸ್. ಭಟ್ಟ ನಿವೃತ್ತ ಪ್ರಾಂಶುಪಾಲರು ಏ.ವಿ.ಬಾಳಿಗ ವಾಣಿಜ್ಯ ಮಹಾವಿದ್ಯಾಲಯ, ಕುಮಟಾ ಮತ್ತು ಶ್ರೀಮತಿ ಸುಧಾ ಬಿ. ಗೌಡ ವಕೀಲರು ಮತ್ತು ಸಮಾಜ ಸೇವಾಕರ್ತರು ಮಚಗೋಣ, ಕುಮಟಾ ಇವರು ಆಗಮಿಸಿದ್ದರು. ಚರ್ಚಾ ಸ್ಪರ್ಧೆಯಲ್ಲಿ…

Share happily:
Read More

ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

Share happily:

ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಉದ್ಘಾಟಕರಾಗಿ ಆಗಮಿಸಿದ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಜಿ.ಯು.ಭಟ್ಟ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪುರಸ್ಕಾರ ನೀಡಿ ಮಾತನಾಡಿದ ಅವರು ಪ್ರತಿಭೆಗಳು ಅನಾವರಣಗೊಳ್ಳಬೇಕು ಎಲೆಮರೆಯ ಕಾಯಾಗಬಾರದು. ವಿದ್ಯಾರ್ಥಿಗಳು ಅಭ್ಯಾಸದೋಂದಿಗೆ ಇತರ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕಾಶೀನಾಥ ನಾಯಕರವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಹಾಗೂ ಪ್ರಾಂಶುಪಾಲರಾದ ಸುಲೋಚನಾ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ವಿಜಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕರಾದ ಶಿವಾನಂದ ಭಟ್ ವಂದನಾರ್ಪಣೆಗೈದರು.

Share happily:
Read More

‘ಇಂಟರ್ ನ್ಯಾಶನಲ್ ಸೈನ್ಸ್ ಓಲಂಪಿಯಾಡ್’ ನಲ್ಲಿ ಎರಡನೇ ಹಂತಕ್ಕೆ ಆಯ್ಕೆ

Share happily:

ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕು. ಅಂಕಿತಾ ಬಾಳೇರಿ, ಸನ್ನಿಧಿ ಹಬ್ಬು, ಜಯೇಶ್ ರಾವ್ ಇಂಟರ್ ನ್ಯಾಶನಲ್ ಸೈನ್ಸ್ ಓಲಂಪಿಯಾಡ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಅನುಕ್ರಮವಾಗಿ 21, 30, 32ನೇ ರ್ಯಾಂಕ್ ಗಳಿಸಿ, ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ಇವರ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಡಾ. ಸುಲೋಚನಾ ಬಿ. ರಾವ್ ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Share happily:
Read More

NEET ಪರೀಕ್ಷೆಯಲ್ಲಿ ಸರಸ್ವತಿ ಪದವಿ ಪೂರ್ವ ಕಾಲೇಜಿನ ಸಾಧನೆ

Share happily:

ಸರಸ್ವತಿ ಪದವಿ ಪೂರ್ವ ಕಾಲೇಜಿನ 50ವಿದ್ಯಾರ್ಥಿಗಳು ರಾಷ್ಟ್ರೀಯ ವೈದ್ಯಾಕೀಯ ಪರೀಕ್ಷೆಯಲ್ಲಿ 33 ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸಿರುತ್ತಾರೆ. ಪ್ರಿಯಾಂಕ ನಾಯಕ(93%), ಕಾತ್ಯಾಯಿನಿ ಭಟ್(88%), ಸನ್ನಿಧಿ ಪ್ರಭು(82.8%) ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ. ಇವರ ಈ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Share happily:
Read More