ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೊಂಕಣ ಎಜ್ಯುಕೇಶನ್ ಟ್ರಸ್ಟ ಕುಮಟಾದ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಬುಧವಾರ ಜರುಗಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಪ್ರಾಸ್ತವಿಕ ನುಡಿಗಳ ಮೂಲಕ ಹೊಸ ವಿದ್ಯಾಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಕುಮಾರಿ ಶಾಹೀನ್ ಶೇಖ್, ಕುಮಾರ ಶೀನಿವಾಸ ಶ್ಯಾನಭಾಗ, ಶ್ರೀಧರ ಹೆಗಡೆ, ಮನೀಷ್ ಉಗ್ರು, ಕುಮಾರಿ ಪೂಜಾ ಪಂಡಿತ, ಚಿತ್ರಾ ನಾಯಕ, ದಿವ್ಯಾ ಭಟ್ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ತಪಸ್ಯ ಲರ್ನಿಂಗ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಶ್ರೀಮತಿ ಪಿ.ಥಾಮಸರವರು ಮುಖ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಥಿಗಳು ನಿಶ್ಚಿತವಾದ ಗುರಿಯನ್ನು ಹೊಂದಿರಬೇಕು ಪಾಲಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡವನ್ನು ಹೇರಬಾರದು ವೈಯಕ್ತಿಕ ಸಮಸ್ಯೆಗಳನ್ನು ತಂದೆ-ತಾಯಿಯರು ಮಕ್ಕಳ ಎದುರು ಚರ್ಚಿಸದೇ ಅವರನ್ನು ಪ್ರೋತ್ಸಾಹಿಸಿ ಉತ್ತಮ ಶಿಕ್ಷಣ ನೀಡಬೇಕು ಎಂದು ಉಪಸ್ಥಿತರಿದ್ದ…
Read MoreDay: March 13, 2018
ಕೊಂಕಣದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ವಾಣಿಜ್ಯ ಕಾರ್ಯಾಗಾರ
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯ ವಿಭಾಗ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯಗಳ ಒಂದು ದಿನದ ಕಾರ್ಯಾಗಾರ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಎರ್ಪಡಿಸಲಾಗಿತ್ತು. ಜಿಲ್ಲೆಯ ಎಲ್ಲಾ ವಾಣಿಜ್ಯ ಉಪನ್ಯಾಸಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಕೆ.ಟಿ.ಭಟ್ ರವರು ಕಾರ್ಯಾಗಾರ ವನ್ನು ಉದ್ಘಾಟಿಸಿ ಶಿಕ್ಷಕರಲ್ಲಿ ಶೈಕ್ಷಣಿಕ ಗುಣಮಟ್ಟವಿರಬೇಕು ಎಂಬ ಬಗ್ಗೆ ಮಾತಾನಾಡಿದರು. ಲೆಕ್ಕಶಾಸ್ತ್ರದ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋ. ಡಿ. ಎನ್. ಭಟ್, ವ್ಯವಹಾರ ಅಧ್ಯಯನದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಆರ್.ಎಚ್.ನಾಯಕ್ ರವರು ಪ್ರಥಮ ಪಿ.ಯು. ಬದಲಾದ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸರಸ್ವತಿ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಡಾ ಸುಲೋಚನಾ ಬಿ. ರಾವ್ ಕಾರ್ಯಗಾರವನ್ನು ಸ್ವಾಗತಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕ ವಹಿಸಿದ್ದರು. ಪ್ರಾಂಶುಪಾಲರ ಸಂಘದ ಉಪಧ್ಯಾಕ್ಷರಾದ ಶ್ರೀ…
Read More