ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸರಸ್ವತಿ ವಿದ್ಯಾಕೇಂದ್ರ

Share happily:

ದಿನಾಂಕ 06-10-2017 ರಂದು ಕಾರವಾರದ ಬಾಲಮಂದಿರ ಸಂಸ್ಥೆಯಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಶಿಕ್ಷಣ ಇಲಾಖಾ ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ ಶಾಲಾ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿರುತ್ತಾರೆ. ಸೃಜನಾ ಡಿ.ನಾಯಕ ಇಂಗ್ಲೀಷ ಕಂಠಪಾಠ ಮತ್ತು ಅಭಿನಯ ಗೀತೆಯಲ್ಲಿ ಪ್ರಥಮ, ಕಥೆ ಹೇಳುವುದು ದ್ವಿತೀಯ, ಅಕ್ಷತಾ ಎಸ್.ಭಟ್ಟ ಕನ್ನಡ ಕಂಠಪಾಠ ಪ್ರಥಮ, ವಿಘ್ನೇಶ ಹೊಸಮನೆ ಚಿತ್ರಕಲೆಯಲ್ಲಿ ಪ್ರಥಮ, ಸ್ನೇಹಾ ಉದಯ ನಾಯ್ಕ ಆಶುಭಾಷಣದಲ್ಲಿ ಪ್ರಥಮಸ್ಥಾನ ಗಳಿಸಿರುತ್ತಾರೆ. ಶುಭಾ ವಿಷ್ಣು ನಾಯ್ಕ ಅಭಿನಯ ಗೀತೆಯಲ್ಲಿ ದ್ವಿತೀಯ ಕಥೆ ಹೇಳುವುದರಲ್ಲಿ ತೃತೀಯಸ್ಥಾನ, ಆಶ್ರೀತಾ ಜಿ ಭಟ್ಟ ಭಕ್ತಿಗೀತೆ ದ್ವಿತೀಯ, ಜೀವನ ಪ್ರಕಾಶ ನಾಯ್ಕ ಕ್ಲೇ ಮಾಡಲಿಂಗ್ ನಲ್ಲಿ ದ್ವಿತೀಯ, ಗೌರವ ಭಟ್ , ಸಮೀರ ದಿವಾಣ, ಸ್ನೇಹಾ ನಾಯ್ಕ, ಸಂಜನಾ ಪಂಡಿತ, ವಿನುತಾ…

Share happily:
Read More

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Share happily:

ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಕಾಶಿನಾಥ ನಾಯಕ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಮೇಲೆ ಸದಾ ಅಭಿಮಾನ ಹೊಂದಿರಬೇಕೆಂದೂ, ತಮ್ಮೆಲ್ಲರ ಭವಿಷ್ಯ ಉಜ್ವಲ ಆಗಲೆಂದೂ ಶುಭ ಹಾರೈಸಿದರು. ಟ್ರಸ್ಟಿನ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಮಾತನಾಡಿ, ಹದಿಹರಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಆಕರ್ಷಿತರಾದರೆ ಮಾತ್ರ ಉಜ್ವಲ ಭವಿಷ್ಯ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು. ತದನಂತರ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಟ್ರಸ್ಟಿಗಳಾದ ಡಿ.ಡಿ.ಕಾಮತ, ವಿ.ಆರ್.ನಾಯಕ, ನಾಗೇಶ ಶಾನಭಾಗ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಮುಖ್ಯಾಧ್ಯಾಪಕಿ ಸುಮಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು, ಶಿಕ್ಷಕಿ ಅನಿತಾ ಪಟಗಾರ ವಂದಿಸಿದರು, ವಿದ್ಯಾರ್ಥಿನಿ ರಾಜೇಶ್ವರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

Share happily:
Read More

ಕೊಂಕಣದ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾರಂಭೋತ್ಸವ

Share happily:

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೊಂಕಣ ಎಜ್ಯುಕೇಶನ್ ಟ್ರಸ್ಟ ಕುಮಟಾದ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಬುಧವಾರ ಜರುಗಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಪ್ರಾಸ್ತವಿಕ ನುಡಿಗಳ ಮೂಲಕ ಹೊಸ ವಿದ್ಯಾಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಕುಮಾರಿ ಶಾಹೀನ್ ಶೇಖ್, ಕುಮಾರ ಶೀನಿವಾಸ ಶ್ಯಾನಭಾಗ, ಶ್ರೀಧರ ಹೆಗಡೆ, ಮನೀಷ್ ಉಗ್ರು, ಕುಮಾರಿ ಪೂಜಾ ಪಂಡಿತ, ಚಿತ್ರಾ ನಾಯಕ, ದಿವ್ಯಾ ಭಟ್ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ತಪಸ್ಯ ಲರ್ನಿಂಗ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಶ್ರೀಮತಿ ಪಿ.ಥಾಮಸರವರು ಮುಖ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಥಿಗಳು ನಿಶ್ಚಿತವಾದ ಗುರಿಯನ್ನು ಹೊಂದಿರಬೇಕು ಪಾಲಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡವನ್ನು ಹೇರಬಾರದು ವೈಯಕ್ತಿಕ ಸಮಸ್ಯೆಗಳನ್ನು ತಂದೆ-ತಾಯಿಯರು ಮಕ್ಕಳ ಎದುರು ಚರ್ಚಿಸದೇ ಅವರನ್ನು ಪ್ರೋತ್ಸಾಹಿಸಿ ಉತ್ತಮ ಶಿಕ್ಷಣ ನೀಡಬೇಕು ಎಂದು ಉಪಸ್ಥಿತರಿದ್ದ…

Share happily:
Read More

ಕೊಂಕಣದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ವಾಣಿಜ್ಯ ಕಾರ್ಯಾಗಾರ

Share happily:

ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯ ವಿಭಾಗ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯಗಳ ಒಂದು ದಿನದ ಕಾರ್ಯಾಗಾರ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಎರ್ಪಡಿಸಲಾಗಿತ್ತು. ಜಿಲ್ಲೆಯ ಎಲ್ಲಾ ವಾಣಿಜ್ಯ ಉಪನ್ಯಾಸಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಕೆ.ಟಿ.ಭಟ್ ರವರು ಕಾರ್ಯಾಗಾರ ವನ್ನು ಉದ್ಘಾಟಿಸಿ ಶಿಕ್ಷಕರಲ್ಲಿ ಶೈಕ್ಷಣಿಕ ಗುಣಮಟ್ಟವಿರಬೇಕು ಎಂಬ ಬಗ್ಗೆ ಮಾತಾನಾಡಿದರು. ಲೆಕ್ಕಶಾಸ್ತ್ರದ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋ. ಡಿ. ಎನ್. ಭಟ್, ವ್ಯವಹಾರ ಅಧ್ಯಯನದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಆರ್.ಎಚ್.ನಾಯಕ್ ರವರು ಪ್ರಥಮ ಪಿ.ಯು. ಬದಲಾದ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸರಸ್ವತಿ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಡಾ ಸುಲೋಚನಾ ಬಿ. ರಾವ್ ಕಾರ್ಯಗಾರವನ್ನು ಸ್ವಾಗತಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕ ವಹಿಸಿದ್ದರು. ಪ್ರಾಂಶುಪಾಲರ ಸಂಘದ ಉಪಧ್ಯಾಕ್ಷರಾದ ಶ್ರೀ…

Share happily:
Read More