ಕುಮಟಾ: ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ರಜತ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಕುಮಟಾದ ಬ್ಲಡ್ ಬ್ಯಾಂಕ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಸಿಬ್ಬಂದಿಗಳಾದ ಪ್ರಕಾಶ ಗಾವಡಿ, ಹರ್ಷಾ ಶಾಸ್ತ್ರಿ, ಕಾವ್ಯಶ್ರೀ ಪಟಗಾರ, ರಾಮನಾಥ ಶಾನಭಾಗ, ರವಿ ಮುಕ್ರಿ ಈ ಸಂದರ್ಭದಲ್ಲಿ ರಕ್ತದಾನ ಮಾಡುವುದರ ಮೂಲಕ ತಮ್ಮ ಔದಾರ್ಯತೆಯನ್ನು ಮೆರೆದಿದ್ದಾರೆ. ಕುಮಟಾ ಬ್ಲಡ್ ಬ್ಯಾಂಕ್‌ನ ಮುಖ್ಯಸ್ಥರಾದ ಡಾ| ಮಧುಕರ ಕೆ. ನಾಯ್ಕ ಹಾಗೂ ಸಂಗಡಿಗರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ‘ರಕ್ತದಾನ-ಜೀವದಾನ’ ಶೀರ್ಷಿಕೆಯಡಿ ಕೈಗೊಂಡ ಈ ಕಾರ್ಯಕ್ಕೆ ಕೊಂಕಣ ಸಂಸ್ಥೆಯ ಪದಾಧಿಕಾರಿಗಳು, ಶೈಕ್ಷಣಿಕ ಸಲಹೆಗಾರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
Read MoreYear: 2018
ಜಿಲ್ಲಾ ಮಟ್ಟದಲ್ಲಿ ಮಿಂಚಿದ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು
ಕುಮಟಾ: ತಾಲೂಕಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸದಾ ಮುಂದು ಎನಿಸಿಕೊಂಡಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗಲ್ಲಿ ಮಿಂಚಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿತಂದಿರುತ್ತಾರೆ. ಕಿರಿಯರ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶ್ರೇಯಾ ಗಿರೀಶ ಹೆಬ್ಬಾರ ಭಕ್ತಿಗೀತೆ ಸ್ಫರ್ಧೆಯಲ್ಲಿ ಪ್ರಥಮ, ಆಶುಭಾಷಣ ಸ್ಪರ್ಧೆಯಲ್ಲಿ ಸ್ನೇಹಾ ಉದಯ ನಾಯ್ಕ ಪ್ರಥಮಸ್ಥಾನ ಗಳಿಸಿರುತ್ತಾರೆ. ಹಿರಿಯರ ವಿಭಾಗದ ಸ್ಫರ್ಧೆಗಳಾದ ಇಂಗ್ಲೀಷ್ ಕಂಠಪಾಠ, ಹಾಗೂ ಸಾಭಿನಯಗೀತೆಯಲ್ಲಿ ಸೃಜನಾ ದತ್ತಾ ನಾಯ್ಕ ಪ್ರಥಮ ಸ್ಥಾನ ಪಡೆದು ತೃತೀಯ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ಪಲ್ಲವಿ ಶಾನಭಾಗ ತುಳು ಕಂಠಪಾಠ, ಅಕ್ಷತಾ ಶಾನಭಾಗ ಮರಾಠಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದು ಸಾದನೆ ಮಾಡಿದರೆ, ಸೋನಾಲಿ ಶೇಟ್, ನಿಖಿಲ್ ಪಟಗಾರ ಇವರು ಹಿರಿಯ…
Read Moreರಾಜ್ಯ ಮಟ್ಟಕ್ಕೆ ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು
ಕುಮಟಾ: ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ವಿಶಿಷ್ಟ ಶೈಲಿಯಲ್ಲಿ ಛಾಪನ್ನು ಮೂಡಿಸುವಲ್ಲಿ ಸದಾ ಹೆಸರುವಾಸಿಯಾಗಿರುವ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರವಾರದಲ್ಲಿ ಇತ್ತಿತ್ತೀಚೆಗೆ ಸಂಪನ್ನಗೊಂಡ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ಸಾ.ಶಿ.ಇಲಾಖೆ ಕಾರವಾರ, ಶೈಕ್ಷಣಿಕ ಜಿಲ್ಲೆ ಶಿರಸಿ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ 26ನೇ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಸ್ಪರ್ಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ವಚ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಗಳು ಎಂಬ ಶೀರ್ಷಿಕೆಯಡಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಶಾಲ್ಮಲಿ ಎಸ್. ಮಂಕೀಕರ್ ಹಾಗೂ ಕುಮಾರಿ ಖುಷಿ ಸಿ. ಎಚ್. ಇವರು ಗ್ರಾಮೀಣ ಭಾಗದ ಸೀನಿಯರ್ಸ್ ವಿಭಾಗದಲ್ಲಿ ಸಕ್ಕರೆರೋಗ – ಕಾರಣಗಳು, ನಿರ್ವಹಣೆ…
Read Moreರಾಜ್ಯ ಮಟ್ಟದ ಸ್ಪರ್ಧೆಗೆ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು
ಕುಮಟಾ: ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಚಿಮ್ಮಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ವಸುಧಾ ಪ್ರಭು ಮರಾಠಿ ಭಾಷಣ, ಶಿಲ್ಪಾ ಪಟಗಾರ ರಂಗೋಲಿ, ಚಿನ್ಮಯಿ ಭಂಡಾರಿ ಸಂಗಡಿಗರು ಕಲೋತ್ಸವ ನೃತ್ಯ (ವೀರಗಾಸೆ)ದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಉಳಿದಂತೆ, ಶ್ರೇಯಾ ಶಾನಭಾಗ ಧಾರ್ಮಿಕ ಪಠಣ, ನೇಹಾ ಶಾನಭಾಗ ಸಂಸ್ಕೃತ ಭಾಷಣ, ತೇಜಸ್ವಿನಿ ಶಾನಭಾಗ ತುಳು ಭಾಷಣದಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿದರೆ, ಸುದಿತಿ ಕಾಮತ ಕೊಂಕಣಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ಪಾಲಕರು ಶ್ಲಾಘಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
Read Moreಕೊಂಕಣದ ಸರಸ್ವತಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಬಿ.ಕೆ.ಭಂಡಾರಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ಇನ್ಫೋಸಿಸ್ ಬ್ಲಾಕ್ ಲೋಕಾರ್ಪಣೆ ಕಾರ್ಯಕ್ರಮವನ್ನು ಗೋಕರ್ಣ ಪರ್ತಗಾಳಿ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಹಾಗೂ ಪಟ್ಟಶಿಷ್ಯ ಶ್ರೀ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ಇವರು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡುತ್ತ ಶಿಕ್ಷಣದೊಂದಿಗೆ ಸಂಸ್ಕಾರ ನೀಡುತ್ತಾ ಜಿಲ್ಲೆಯಲ್ಲಿಯೇ ಅಗ್ರಸ್ಥಾನ ಪಡೆದು ಕೊಂಡಿರುವುದು ಕುಮಟಾದ ಹೆಮ್ಮೆಯ ಕೊಂಕಣ ಎಜ್ಯುಕೇಆನ ಟ್ರಸ್ಟನ ಸಮೂಹ ಸಂಸ್ಥೆಗಳು ಎಂದು ನುಡಿದರು. ಅದೇ ರೀತಿ ಇನ್ನೋರ್ವ ಅತಿಥಿಗಳಾದ ಹಾಂಗ್ಯೊ ಐಸ್ಕ್ರೀಂನ ಮ್ಯಾನೇಂಜಿಗ್ ಡೈರೆಕ್ಷರ್ ಪ್ರದೀಪ ಪೈ ಶುಭ ಹಾರೈಸಿದರು. ನಂತರ ಆರ್ಶೀರ್ವಚನವಿತ್ತ ಸ್ವಾಮೀಜಿಯವರು ಶುಭಮೂಹೂರ್ತದಲ್ಲಿ ಈ ವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ್ದೇವೆ, ವಿದ್ಯಾರ್ಥಿಗಳು ವಿದ್ಯೆ, ವಿನಯ, ವಿವೇಕ, ವಿವೇಚನೆ ಬೆಳೆಸಿಕೊಂಡು ಸಂಸ್ಕಾರ ಪಡೆದುಕೊಳ್ಳಬೇಕು.…
Read Moreಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮಕ್ಕೆ ನಾಂದಿ ಹಾಡಿದ ಕೊಂಕಣದ ‘ಪರಂಪರಾ ಕೂಟ’
ಕುಮಟಾ: ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ವಿನೂತನ ಪ್ರಯೋಗಗಳ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಕುಮಟಾದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ, ರೌಪ್ಯ ಮಹೋತ್ಸವದ ಈ ಸುಸಂದರ್ಭದಲ್ಲಿ, ‘ಹಳೆ ಬೇರು-ಹೊಸ ಚಿಗುರು’ ಎಂಬ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ಪರಿಸರದಲ್ಲಿ ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮ ಕಾರ್ಯಕ್ರಮ ಅಭೂತಪೂರ್ವವಾಗಿ ಜರುಗಿ ಯಶಸ್ವಿಯಾಯಿತು. ‘ದೀಪಾವಳಿ ಮೇಳ’ದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಗುರುಪ್ರಸಾದ ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಯಂತ ನಾಯ್ಕ ಉದ್ಘಾಟಿಸಿದರು. ಸಂಸ್ಥೆಯ ಕುರಿತಾಗಿ ಹೆಮ್ಮೆಯ ಮಾತಗಳನ್ನಾಡಿದ ಅವರು, ತಮ್ಮ ಮೊಮ್ಮಕ್ಕಳು ಇದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದು ಅವರಲ್ಲಿ ಸಂಸ್ಕೃತಿ ಮೂಡುವಲ್ಲಿ ಶಿಕ್ಷಕರು ಹಾಗೂ ಸಂಸ್ಥೆಯವರ ಕಾರ್ಯ, ಕಾಳಜಿ ಶ್ಲಾಘನೀಯ ಎಂದು ನಿದರ್ಶನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ರಜತ…
Read Moreಅತ್ಯುತ್ತಮ ಪ್ರದರ್ಶನ ತೋರಿ ಸಾಧನೆ ಮಾಡಿದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು
ಕುಮಟಾ: ಇಲ್ಲಿನ ಶಾಸಕರ ಮಾದರಿ ಶಾಲೆ ನೆಲ್ಲಿಕೇರಿಯಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ 10 ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಭಾಗವಹಿಸಿದ ಬಹುತೇಕ ಸ್ಪರ್ಧೆಗಳಲ್ಲಿ ಸ್ಥಾನಗಳಿಸುವ ಮೂಲಕ ಸಾಧನೆ ಮಾಡಿರುತ್ತಾರೆ. ಕಿರಿಯರ ವಿಭಾಗ ಪಲ್ಲವಿ ಶಾನಭಾಗ (ತುಳು ಕಂಠಪಾಠ ಪ್ರಥಮ), ನಿಖಿಲ ಪಟಗಾರ (ಚಿತ್ರಕಲೆ ಪ್ರಥಮ), ಶ್ರೇಯಾ ಹೆಬ್ಬಾರ (ಭಕ್ತಿ ಗೀತೆ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಲಘುಸಂಗೀತ ದ್ವಿತೀಯ), ಸುಮುಖ ನಾಯ್ಕ (ಕ್ಲೇ ಮಾಡಲಿಂಗ ದ್ವಿತೀಯ), ಸ್ನೇಹಾ ನಾಯ್ಕ (ಆಶುಭಾಷಣ ಪ್ರಥಮ, ಮರಾಠಿ, ಹಿಂದಿ, ಕಥೆಯಲ್ಲಿ ದ್ವಿತೀಯ), ಕೃತಿಕಾ ಭಟ್ಟ (ಧಾರ್ಮಿಕ ಪಠಣ ದ್ವಿತೀಯ) ಹಾಗೂ ದೇಶಭಕ್ತಿಗೀತೆಯಲ್ಲಿ ಶ್ರೀಷಾ, ದೀಕ್ಷಾ, ಸೃಷ್ಟಿ, ಶ್ರೀಲಕ್ಷ್ಮಿ, ನಂದನ, ಕುಶಾಲರವರ ತಂಡ ಪ್ರಥಮ ಬಹುಮಾನ ಪಡೆದಿದೆ. ಸ್ನೇಹಾ, ಸಮೀರ, ಕೃತಿಕಾ, ಪುಂಡಲೀಕ, ದ್ರುವ, ವಿನುತಾರವರ ತಂಡ…
Read Moreಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ
ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ನೆಲ್ಲಿಕೇರಿಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟೂ 14 ವಿಭಾಗಗಳಲ್ಲಿ ಸ್ಪರ್ಧಿಸಿ, ಉತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳ ವಿವರ ಹೀಗಿದೆ: ಮರಾಠಿ ಭಾಷಣದಲ್ಲಿ ವಸುಧಾ ಪ್ರಭು, ಹಿಂದಿಯಲ್ಲಿ ವೈಷ್ಣವಿ ಗುಡಿಗಾರ, ತುಳುವಿನಲ್ಲಿ ತೇಜಸ್ವಿನಿ ಶಾನಭಾಗ, ಕೊಂಕಣಿಯಲ್ಲಿ ಸುದಿತಿ ಕಾಮತ, ಸಂಸ್ಕೃತದಲ್ಲಿ ನೇಹಾ ಶಾನಭಾಗ ಪ್ರಥಮ ಸ್ಥಾನ ಗಳಿಸಿದರೆ, ಧಾರ್ಮಿಕ ಪಠಣದಲ್ಲಿ ಶ್ರೇಯಾ ಶಾನಭಾಗ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಶಿಲ್ಪಾ ಪಟಗಾರ ಪ್ರಥಮರಾಗಿ ಜಿಲ್ಲಾ ಮಟ್ಟಕ್ಕೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇನ್ನು, ಜನಪದಗೀತೆಯಲ್ಲಿ ವಸುಧಾ ಪ್ರಭು, ಮಿಮಿಕ್ರಿಯಲ್ಲಿ ಕೌಶಿಕ ನಾಯಕ, ಭರತನಾಟ್ಯದಲ್ಲಿ ಕಾವ್ಯಾ ಹೆಗಡೆಕಟ್ಟೆ, ಪಿಕ್ ಆಂಡ್ ಸ್ಪೀಚ್‌ನಲ್ಲಿ ಕಾರ್ತಿಕ ನಾಯ್ಕ, ಇಂಗ್ಲೀಷ್ ಭಾಷಣದಲ್ಲಿ ವಿ.ಎನ್.ಸಮೀಕ್ಷಾ, ಕನ್ನಡ ಭಾಷಣದಲ್ಲಿ ಚಿನ್ಮಯಿ ಭಂಡಾರಿ…
Read Moreಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು
ಕುಮಟಾ: ಕರ್ನಾಟಕ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ೨೦೧೮–೧೯ನೇ ಸಾಲಿನ ಇಲಾಖಾ ಕ್ರೀಡಾಕೂಟದಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿನಾಂಕ ೦೪/೧೦/೨೦೧೮ ಗುರುವಾರ ಹೊನ್ನಾವರದ ಸೆಂಟ್ ಅಂಥೋನಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಈ ಸಾಧನೆ ಮಾಡಿರುತ್ತಾರೆ. ಕು.ನಯನಾ ರಾಮಕೃಷ್ಣ ಭಟ್ಟ ೧೦೦ಮೀ ಓಟದಲ್ಲಿ ಹಾಗೂ ೨೦೦ಮೀ.ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಎರಡೂ ಸ್ಪರ್ಧೆಯಲ್ಲಿಯೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲಾ ಮಟ್ಟಕ್ಕೆ ಇತಿಹಾಸ ನಿರ್ಮಿಸಿದ್ದಾಳೆ. ಅನನ್ಯಾ ಅರುಣ ಕಾಮತ ೪೦೦ಮೀ.ಓಟದಲ್ಲಿ ಪ್ರಥಮಸ್ಥಾನ ಪಡೆದು ಸಾಧನೆ ಮಾಡಿದರೆ ಗಗನ ಎನ್ ನಾಯ್ಕ ಬಾಲಕರ ೧೦೦ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ೪x೧೦೦ಮೀ ರೀಲೇಯಲ್ಲಿ ಸರಸ್ವತಿ ವಿದ್ಯಾಕೇಂದ್ರದಿಂದ ಕುಮಟಾ ತಾಲೂಕನ್ನು ಪ್ರತಿನಿಧಿಸಿದ್ದ ಅನನ್ಯಾ ಅರುಣ ಕಾಮತ,ನಯನಾ ಭಟ್ಟ,ಗಾಯತ್ರಿ ಗುನಗ,ಸೌಮ್ಯ ಪಟಗಾರ…
Read Moreತಾಲೂಕಾ ಮಟ್ಟದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಾಧನೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಸಂಘಟನೆಯಲ್ಲಿ ಕುಮಟಾದ ಮಹಾತ್ಮಾಗಾಂಧಿ ಮೈದಾನದಲ್ಲಿ ಇತ್ತೀಚಿಗೆ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸಿ.ವಿ.ಎಸ್.ಕೆ ಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ. 100 ಮೀ. ಓಟದಲ್ಲಿ ಸಾರ್ಥಕ ಪೈ ಪ್ರಥಮ, ಗುಂಡು ಎಸೆತದಲ್ಲಿ ತೃತೀಯ, ಆದರ್ಶ ನಾಯ್ಕ 100 ಮೀ. ಓಟದಲ್ಲಿ ದ್ವಿತೀಯ, ಉದ್ದಜಿಗಿತದಲ್ಲಿ ತೃತೀಯ, ತ್ರಿವಿಧ ಜಿಗಿತದಲ್ಲಿ ಪ್ರಥಮ, ಸಂಕಲ್ಪ ನಾಯ್ಕ 200 ಮೀ. ಹಾಗೂ 400 ಮೀ. ನಲ್ಲಿ ಪ್ರಥಮ, ಅನಿರುದ್ಧ ಭಟ್ಟಕೆರೆ 800 ಮೀ. ನಲ್ಲಿ ಪ್ರಥಮ, ಚರಣ ನಾಯ್ಕ 800 ಮೀ. ನಲ್ಲಿ ದ್ವಿತೀಯ ಹಾಗೂ ಭರ್ಚಿ ಎಸೆತದಲ್ಲಿ ದ್ವಿತೀಯ, ತಿಲಕ ನಾಯ್ಕ ಎತ್ತರ ಜಿಗಿತದಲ್ಲಿ ತೃತೀಯ, ಸುಹಾಗ ಭಂಡಾರಿ ಚಕ್ರ ಎಸೆತದಲ್ಲಿ ತೃತೀಯ, ನಿಸರ್ಗ ನಾಯ್ಕ 100 ಮೀ. ಓಟದಲ್ಲಿ ದ್ವಿತೀಯ, ಸಹನಾ ನಾಯ್ಕ 200 ಮೀ. ನಲ್ಲಿ ತೃತೀಯ, ಬಾಲಕಿಯರ 4×100…
Read More